Accused Arrest: ಕೊನೆಗೂ ಸಿಕ್ಕಿಬಿದ್ದ ಆ್ಯಸಿಡ್​ ನಾಗ; ಆಶ್ರಮದಲ್ಲಿ ಸ್ವಾಮೀಜಿ ವೇಷ ಧರಿಸಿ ಅಡಗಿ ಕುಳಿತ್ತಿದ್ದ ಆರೋಪಿ

24 ವರ್ಷದ ಯುವತಿ ಮೇಲೆ ಆ್ಯಸಿಡ್ ಎರಚಿದ್ದ ನಾಗೇಶ್, ತಮಿಳುನಾಡಿಗೆ ಹೋಗಿ 'ರಮಣ' ಆಶ್ರಮದಲ್ಲಿ ಸ್ವಾಮೀಜಿ ಆಗಿ ವೇಷ ಬದಲಿಸಿಕೊಂಡಿದ್ದ. ಭಕ್ತರ ವೇಷದಲ್ಲಿ ಆಶ್ರಮಕ್ಕೆ ಹೋಗಿದ್ದ ಪೊಲೀಸರು, ನಾಗೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ನಾಗೇಶ್​

ಆರೋಪಿ ನಾಗೇಶ್​

  • Share this:
ಬೆಂಗಳೂರು (ಮೇ 13): ಯುವತಿ ಮೇಲೆ ಆ್ಯಸಿಡ್ ​ ದಾಳಿ (Acid Attack) ನಡೆಸಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ನಾನು ಏನೂ ಮಾಡೇ ಇಲ್ಲ ಎಂಬಂತೆ ಆಶ್ರಮದಲ್ಲಿ ಅಡಗಿ ಕುಳಿತಿದ್ದಆರೋಪಿ ನಾಗೇಶ್​ (Nagesh) ಬಾಬುವನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ರಮದಲ್ಲಿ ಮೆಡಿಟೇಷನ್ ಮಾಡುತ್ತಿದ್ದ ಆರೋಪಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ ನಾಗೇಶ್​ ಬಾಬು ಆಶ್ರಮಕ್ಕೆ ಸೇರಿದ್ದ, ಅಪ್ಪಟ ದೈವ ಭಕ್ತನಾಗಿರೋ ಆ್ಯಸಿಡ್​ ನಾಗ ಆಶ್ರಮದಲ್ಲಿರೋದನ್ನು ಖಚಿತ ಪಡಿಸಿಕೊಂಡ ತಮಿಳುನಾಡು ಪೊಲೀಸರು ಆಶ್ರಮಕ್ಕೆ ಭೇಟಿ ನೀಡಿದ್ರು, ಆರೋಪಿ (Accused) ನಾಗೇಶ್​ ಸಾಧು-ಸಂತನಂತೆ ಧ್ಯಾನಕ್ಕೆ ಕುಳಿತಿದ್ದ. ಈ ವೇಳೆ ಪೊಲೀಸರು ಆರೋಪಿ ನಾಗನನ್ನು ಪೊಲೀಸರು (Police) ಬಂಧಿಸಿದ್ದಾರೆ.

ಅಪ್ಪಟ ದೈವ ಭಕ್ತನಾಗಿದ್ದ ಆರೋಪಿ ನಾಗೇಶ್, ದೇವಸ್ಥಾನ, ಮಠ ರೌಂಡ್ಸ್​ ಹೋಗ್ತಿದ್ದ. ಪ್ರತಿ ಶನಿವಾರ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗುವ ರೂಢಿ ಕೂಡ ಈತನಿಗಿತ್ತು. ಪೊಲೀಸರ ತನಿಖೆ ವೇಳೆ ಆರೋಪಿ ಮಠ, ಮಂದಿರಗಳಲ್ಲಿ ಇರೋ ಬಗ್ಗೆ ಹೆಚ್ಚು ಗುಮಾನಿ ಇತ್ತು. ಈ ಹಿನ್ನೆಲೆ ಪೊಲೀಸರು,  ತಮಿಳುನಾಡು, ಆಂಧ್ರ, ಕೇರಳ, ಉತ್ತರ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶೋಧ ನಡೆಸಿದ್ರು. ಬಳಿ ಈತ ತಮಿಳುನಾಡಿನಲ್ಲಿ ಅಡಗಿ ಕುಳಿತಿರೋದು ಗೊತ್ತಾಗಿದೆ.

ಆ್ಯಸಿಡ್​ ದಾಳಿಗೊಳಗಾದ ಯುವತಿ ಚೇತರಿಕೆ

ಆ್ಯಸಿಡ್​ ದಾಳಿಗೊಳಗಾಗಿ ಬರೋಬ್ಬರಿ 16 ದಿನಗಳ‌ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ, ಇದೀಗ ಚೇತರಿಸಿಕೊಂಡಿದ್ದಾಳೆ. ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಐಸಿಯುನಿಂದ ವಾರ್ಡ್​ಗೆ ಯುವತಿಯನ್ನು ಶಿಫ್ಟ್ ಮಾಡಲಾಗಿದೆ. ಸ್ಪೆಷಲ್ ಬರ್ನಿಂಗ್ ವಾರ್ಡ್ ಯುವತಿಯನ್ನ ಶಿಫ್ಟ್ ಮಾಡಲಾಗಿದೆ. ಯುವತಿಗೆ ಇನ್ಫೆಕ್ಷನ್​ ಆಗದಂತೆ ವೈದ್ಯರ ತಂಡ ನಿರಂತರ ನಿಗಾವಹಿಸಿದ್ದಾರೆ. ಸದ್ಯ ಕುಟುಂಬಸ್ಥರ ಜೊತೆ ಯುವತಿ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: DKS v/s Ashwath: ನನ್ನನ್ನು ಟಚ್​ ಮಾಡಿ ಅವ್ರೇ ಕೆಟ್ರು; ರಮ್ಯಾ ಮಾತಿನಿಂದ ನನಗೆ ಖುಷಿಯಾಗಿದೆ- ಅಶ್ವತ್ಥ ನಾರಾಯಣ

10% ಮಾತ್ರ ಸ್ಕಿನ್ ಪ್ಲಾಂಟೇಷನ್ ಸರ್ಜರಿ

ಯುವತಿ ಲಘು ಆಹಾರವನ್ನು ತೆಗೆದುಕೊಳ್ತಿದ್ದಾರೆ. ಅನ್ನ ಹಾಗೂ ಮೃದು ಆಹಾರವನ್ನ ಸ್ವಲ್ಪ ಸ್ವಲ್ಪವೇ ಸೇವಿಸುತ್ತಿದ್ದಾರೆ. ಡ್ರೈ ಫ್ರೂಟ್ಸ್ ಪುಡಿ ಮಾಡಿ ಮೃದು ಆಹಾರದ ಜೊತೆ ಬೆರೆಸಿ ತಿನ್ನಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇನ್ನೂ 10% ಮಾತ್ರ ಸ್ಕಿನ್ ಪ್ಲಾಂಟೇಷನ್ ಸರ್ಜರಿ ಬಾಕಿ ಇದೆ. ಇನ್ನೂ ಸ್ವಲ್ಪ ಚೇತರಿಸಿಕೊಂಡ ಬಳಿಕ ವೈದ್ಯರು ಉಳಿದ ಸರ್ಜರಿ ಮಾಡಲಿದ್ದಾರೆ. ಯುವತಿ ಚೇತರಿಕೆಯಿಂದ ಕುಟುಂಬಸ್ಥರು ತುಸು ನೆಮ್ಮದಿ ಕಂಡಿದ್ದಾರೆ. ಏಪ್ರಿಲ್ 28 ರಂದು ಯುವತಿ ಮೇಲೆ ಆ್ಯಸಿಡ್ ಎರಚಿದ್ದ ನಾಗೇಶ, 16 ದಿನಗಳಿಂದ ಸೇಂಟ್ ಜಾನ್ಸ್ ಅಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ್ಯಸಿಡ್ ದಾಳಿ ಸಂತ್ರಸ್ತಗೆ ನಿವೇಶನ

ರಾಜ್ಯದಲ್ಲಿ ಆ್ಯಸಿಡ್ ದಾಳಿಯಿಂದ ಸಂತ್ರಸ್ತರಾದ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ ತಲಾ ₹ 5 ಲಕ್ಷ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ‌ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಿದ್ದ 'ಹಲೋ ಕಂದಾಯ ಸಚಿವರೇ' ಸಹಾಯವಾಣಿ ಉದ್ಘಾಟನೆ ಮತ್ತು ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಪರಿಷ್ಕೃತ ದರದ ಪಿಂಚಣಿ ಆದೇಶ ವಿತರಿಸಿದ ಬಳಿಕ ಅವರು ಮಾತನಾಡಿದರು.

ಇದನ್ನು ಓದಿ: ಡಿಕೆಶಿ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು ಎಂದ ಅಶ್ವಥ್ ನಾರಾಯಣ್

ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಆ್ಯಸಿಡ್ ದಾಳಿ ಸಂತ್ರಸ್ತರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿ ಮೊತ್ತವನ್ನು ₹3,000ದಿಂದ ₹10,000ಕ್ಕೆ ಹೆಚ್ಷಿಸಲಾಗಿದೆ. ಸಮಾರಂಭದಲ್ಲಿ ಕೆಲವು ಸಂತ್ರಸ್ತರಿಗೆ ಮುಖ್ಯಮಂತ್ರಿ ಪಿಂಚಣಿ ಆದೇಶ ವಿತರಿಸಿದರು. ಆಗ ಸಂತ್ರಸ್ತೆಯರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಯವರ ಬಳಿ ಹೇಳಿಕೊಂಡರು. ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಆ್ಯಸಿಡ್ ದಾಳಿಯ ಸಂತ್ರಸ್ತರಿಗೆ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ ನೆರವು ನೀಡುವ ಘೋಷಣೆ ಮಾಡಿದರು.
Published by:Pavana HS
First published: