Chandrashekhar Guruji ಕೊಲೆ ಸುತ್ತ ಹೆಣ್ಣು-ಹೊನ್ನು-ಮಣ್ಣು ಗುಮಾನಿ; ಆರೋಪಿಯ ಪತ್ನಿ ವನಜಾಕ್ಷಿ ಸ್ಫೋಟಕ ಹೇಳಿಕೆ

ಗಂಡ ಮಾಡಿದ ತಪ್ಪಿಗೆ ಹೆಂಡತಿ ಕಣ್ಣೀರು ಹಾಕುತ್ತಿದ್ದಾಳೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಗುರೂಜಿ ಕೊಲೆ ಆರೋಪಿ ಮಹಾಂತೇಶ್ ಪತ್ನಿ ವನಜಾಕ್ಷಿ ಹೇಳಿಕೆ ನೀಡಿದ್ದಾರೆ.

ಗುರೂಜಿ, ಆರೋಪಿ ಮಹಾಂತೇಶ್​, ವನಜಾಕ್ಷಿ

ಗುರೂಜಿ, ಆರೋಪಿ ಮಹಾಂತೇಶ್​, ವನಜಾಕ್ಷಿ

  • Share this:
ಹುಬ್ಬಳ್ಳಿ: ತನ್ನ ಗಂಡ ಮಾಡಬಾರದ ಪಾಪ ಮಾಡಿದ್ದಾನೆ ಎಂದು ಮಹಾಂತೇಶ  ಶಿರೂರ (Accused Mahantesh ) ಪತ್ನಿ ವನಜಾಕ್ಷಿ (Wife Vanajakshi) ಕಣ್ಣೀರು ಹಾಕಿದ್ದಾರೆ.  ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ( Vastu Expert Chandrashekhar Guruji)  ಹತ್ಯೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ವನಜಾಕ್ಷಿ, ತನ್ನ ಗಂಡ ಇಂತಹ ಪಾಪದ ಕೃತ್ಯ ಮಾಡುತ್ತಾನೆಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ  ಎಂದು ಆಘಾತ ವ್ಯಕ್ತಪಡಿಸಿದ್ದಾಳೆ.  ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ವನಜಾಕ್ಷಿ, ತನ್ನ ಗಂಡ ಮಾಡಿದ ಕೃತ್ಯಕ್ಕೆ ಕಣ್ಣೀರು ಹಾಕಿದ್ದಾರೆ. ತನ್ನ ಪತಿ ಮಾಡಬಾರದ ಪಾಪ ಮಾಡಿ ಜೈಲಿಗೆ ಹೋಗಿದ್ದಾನೆ. ಆತನನ್ನು ನಾನು  ಎಂದೂ ಕ್ಷಮಿಸೋದಿಲ್ಲ ಆತನೊಂದಿಗೆ ಇನ್ನು ಮುಂದೆ ಎಂದೂ ಮಾತನಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 

ಗುರೂಜಿ ನನ್ನ ಹೆಸರಲ್ಲಿ ಆಸ್ತಿ ಮಾಡಿಲ್ಲ 

ಗುರೂಜಿ ನನ್ನ ಪತಿ ಹೆಸರಲ್ಲಿ ಆಸ್ತಿ ಮಾಡಿರೋದು ಗೊತ್ತಿಲ್ಲ. ಆದ್ರೆ ನನ್ನ ಹೆಸರಿನಲ್ಲಿ ಗುರೂಜಿ ಯಾವುದೇ ಆಸ್ತಿ ಮಾಡಿಲ್ಲ. ಗುರೂಜಿ ಅಪಾರ್ಟ್ ಮೆಂಟ್ ನಲ್ಲಿ ತೆಗೆಸಿಕೊಂಡಿರುವ ಫ್ಲ್ಯಾಟ್ ಸಹ ತೆಗೆದುಕೊಂಡು ಖರೀದಿಸಿದೆ. ಪ್ರತಿ ತಿಂಗಳು ಪ್ರೀಮಿಯಂ ಹಣ ಕಟ್ಟುತ್ತಿದ್ದೇವೆ. ನಾನು ಮತ್ತು ನನ್ನ ಗಂಡ ಇಬ್ಬರು ಗುರೂಜಿ ಕಡೆ ಕೆಲಸ ಮಾಡುತ್ತಿದ್ದೆವು.

ಗುರೂಜಿ ಏನು ತಪ್ಪು ಮಾಡಿರಲಿಲ್ಲ

ಗುರೂಜಿ ನಮ್ಮಿಬ್ಬರ ಮದುವೆ ಮಾಡಿಸಿದ್ದು ಸತ್ಯ. ನನ್ನನ್ನು ಮೆಚ್ಚಿದ್ದರಿಂದ ಗುರೂಜಿ ಮದ್ಯಸ್ಥಿಕೆ ವಹಿಸಿ ಶಿರೂರು ಜತೆ ಮದುವೆ ಮಾಡಿದ್ದರು. ಆದರೆ ಈ ರೀತಿ ಕೃತ್ಯ ಎಸಗುತ್ತಾನೆ ಅಂತ ನಾನು ಕನಸು ಮನಸ್ಸಿನಲ್ಲಿಯೂ ಕಲ್ಪಿಸಿರಲಿಲ್ಲ. ಈ ರೀತಿ ಬರ್ಬರ ಹತ್ಯೆ ಮಾಡುವಷ್ಟು ಗುರೂಜಿ ಏನು ತಪ್ಪು ಮಾಡಿದ್ದಾನೆ ಅಂತ ಅರ್ಥವಾಗ್ತಿಲ್ಲ. ಕೆಲಸ ಕೊಟ್ಟು ಎಲ್ಲವನ್ನೂ ನೋಡಿಕೊಂಡು ಗುರುವಿಗೆ ಕ್ರೂರ ಹತ್ಯೆ ಮಾಡುವುದು ತಪ್ಪು. ತನ್ನ ಗಂಡನ ಕೃತ್ಯವನ್ನು ಯಾರು ಕ್ಷಮಿಸಲು ಸಾಧ್ಯವಿಲ್ಲ. ಗುರೂಜಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರು ಮತ್ತೆ ಹುಟ್ಟಿ ಬರುತ್ತಾರೆ ಅನ್ನೋ ಆಸೆ ನನ್ನದಾಗಿದೆ. ಪೊಲೀಸರು ನನ್ನನ್ನು ವಿಚಾರಣೆಗೆ ಕರೆಸಿದ್ದರು.

ಇದನ್ನೂ ಓದಿ: Chandrashekhar Guruji Profile: ಸರಳ ವಾಸ್ತು ಚಂದ್ರಶೇಖರ್ ಗುರೂಜಿ ವಾಸ್ತುಶಾಸ್ತ್ರ ಕಲಿತದ್ದು ಎಲ್ಲಿ? ಹೀಗಿತ್ತು ಅವರ ಜೀವನ

ನನ್ನ ಪತಿ ಕುರಿತು ಮತ್ತಿತರ ಮಾಹಿತಿ ಪಡೆದುಕೊಂಡು ವಾಪಸ್ ಕಳಿಸಿದ್ದಾರೆ. ನಾನು ನನ್ನ ಮಕ್ಕಳ ಜತೆ ಉಳಿದುಬಿಡುತ್ತೇನೆ. ಪಾಪ ಕೃತ್ಯ ಎಸಗಿದ ನನ್ನ ಗಂಡನಿಗೆ ತಕ್ಕ ಶಿಕ್ಷೆ ಆಗಿಯೇ ಆಗುತ್ತದೆ ಎಂದು ನ್ಯೂಸ್ 18 ಕನ್ನಡಕ್ಕೆ ಮಹಾಂತೇಶ್ ಶಿರೂರ ಪತ್ನಿ ವನಜಾಕ್ಷಿ ತಿಳಿಸಿದ್ದಾಳೆ.

ಆರೋಪಿಗಳ ವಿಚಾರಣೆ ಬಿರುಸು 

ಕೊಲೆ ನಡೆದ ನಾಲ್ಕೇ ತಾಸಿನಲ್ಲಿ ಚಂದ್ರಶೇಖರ ಗುರೂಜಿ ಹಂತಕರನ್ನು ಬಂಧಿಸಿರೊ ಹುಬ್ಬಳ್ಳಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಬಂಧಿತ ಮಹಾಂತೇಶ್ ಶಿರೂರ ಹಾಗೂ ಮಂಜುನಾಥ್ ಮರೆವಾಡ ನನ್ನು ಹುಬ್ಬಳ್ಳಿಗೆ ಕರೆತಂದು ರಾತ್ರಿಯಿಡೀ ಡ್ರಿಲ್ ಮಾಡಿದ್ದಾರೆ. ಗುರೂಜಿ ಕೊಲೆಗೆ ಕಾರಣ ಏನು, ಇದರ ಹಿಂದೆ ಮತ್ಯಾರ ಕೈವಾಡವಿದೆ ಎಂಬಿತ್ಯಾದಿ ವಿಚಾರಣೆ ನಡೆಸಿದ್ದಾರೆ. ಬೇನಾಮಿ ಆಸ್ತಿ ಸೇರಿ ಬೇರೆ ಕಾರಣಗಳು ಏನಾದ್ರೂ ಇದೆಯಾ ಅಂತ ಪೊಲೀಸರು ತನಿಖೆ ಮಾಡ್ತಿದಾರೆ.

ಜು.5ರಂದು ಹುಬ್ಬಳ್ಳಿ ಯ ಖಾಸಗಿ ಹೋಟೆಲ್​ನಲ್ಲಿ ಚಂದ್ರಶೇಖರ್​ ಗುರೂಜಿ ಅವರನ್ನು ಭೇಟಿ ಮಾಡಿ ಮಾತನಾಡುವ ನೆಪದಲ್ಲಿ ಬಂದ ಇಬ್ಬರು ಆರೋಪಿಗಳು ಚಾಕುವಿನಿಂದ ಚುಚ್ಚಿ ಬರ್ಬವಾಗಿ ಕೊಲೆ ಮಾಡಿದ್ದಾರೆ. ಅಪರಾಧ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಇಬ್ಬರೂ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಆರೋಪಿ ಮಹಂತೇಶ್​ ಶಿರೂರ ಹಾಗೂ ಆತನ ಪತ್ನಿ ವನಜಾಕ್ಷಿ ಇಬ್ಬರೂ ಗುರೂಜಿ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದಾರೆ.
Published by:Kavya V
First published: