• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಯಾದಗಿರಿ: ಮಗ ಮಾಡಿದ ಸಾಲಕ್ಕೆ ತಂದೆಯನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು..!

ಯಾದಗಿರಿ: ಮಗ ಮಾಡಿದ ಸಾಲಕ್ಕೆ ತಂದೆಯನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು..!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಾಲ ಮರುಪಾವತಿ ಮಾಡದ್ದಕ್ಕೆ ಅದೆ ರೀತಿ 20 ಸಾವಿರ ರೂಪಾಯಿಗೆ 1 ಲಕ್ಷ ರೂ  ಬಡ್ಡಿ ಹಣ ನೀಡಬೇಕೆಂದು  ಪೀಡಿಸುತ್ತಿದ್ದಾರೆ. ಹಣ ಪಾವತಿ ಮಾಡದಕ್ಕೆ ಮಗ ಮಾಡಿದ ತಪ್ಪಿನಿಂದ ಈಗ ತಂದೆಯನ್ನೆ ಅಪಹರಣ ಮಾಡಲಾಗಿದೆ. ಧಾರು ರಾಠೋಡ ಅವರನ್ನು ಅಪಹರಣ ಮಾಡಿದಕ್ಕೆ ಇಡೀ ಕುಟುಂಬ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಮುಂದೆ ಓದಿ ...
  • Share this:

ಯಾದಗಿರಿ(ಫೆ.03): ಮಗ ಮಾಡಿದ ಸಾಲದ ಹಣಕ್ಕಾಗಿ ಈಗ ದುಷ್ಕರ್ಮಿಗಳು ತಂದೆಯನ್ನೆ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್​​ಗೊಳಗಾದ ಧಾರು ರಾಠೋಡ ನ ಹೆಂಡತಿ ತಿಪ್ಪಿಬಾಯಿ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ. ಗಂಡನನ್ನೇ ಕಿಡ್ನಾಪ್ ಮಾಡಿದ್ದು ಪೊಲೀಸರು ಪತಿಯನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಬೇಕೆಂದು ಪತ್ನಿ ಈಗ ಪೊಲೀಸರ ಮೊರೆ ಹೋಗಿದ್ದಾಳೆ .ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊತ್ತಪೇಟ್ ತಾಂಡಾದ ನಿವಾಸಿ ಧಾರು ರಾಠೋಡನನ್ನು ಕಳೆದ ತಿಂಗಳ 30 ರಂದು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ಅನಾರೋಗ್ಯದ ಹಿನ್ನೆಲೆ ಧಾರು ರಾಠೋಡ ಇದೆ 30 ರಂದು ಚಿಕಿತ್ಸೆ ಪಡೆಯಲು ಶಹಾಪುರ ಪಟ್ಟಣಕ್ಕೆ  ತೆರಳಿದ್ದನು. ಈ ವೇಳೆ ಟೀ ಕುಡಿಯಲು ತೆರಳಿದಾಗ 10 ಜನ ದುಷ್ಕರ್ಮಿಗಳ ತಂಡವು ಕ್ರೂಷರ್ ಗಾಡಿಯಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.


ಕಿಡ್ನಾಪ್ ಮಾಡಿ ಬಡ್ಡಿ ಸಹಿತ ಹಣ ನೀಡಬೇಕೆಂದು ಜೀವಬೇದರಿಕೆ ಹಾಕುವ ಜೊತೆ ಥಳಿಸಿದ್ದಾರಂತೆ. ವಿಜಯಪುರ ಮೂಲದ ಸಂತೋಷನ ಹತ್ತಿರ  ಅಪಹರಣಕ್ಕೊಳಗಾದ ಧಾರು ರಾಠೋಡ ಮಗ ತೇಜು ರಾಠೋಡ 20 ಸಾವಿರ ರೂ ಸಾಲ ರೂಪದಲ್ಲಿ ಹಣ ಪಡೆದಿದ್ದರು. ಸಾಲ ಮರುಪಾವತಿ ಮಾಡದ್ದಕ್ಕೆ ಅದೆ ರೀತಿ 20 ಸಾವಿರ ರೂಪಾಯಿಗೆ 1 ಲಕ್ಷ ರೂ  ಬಡ್ಡಿ ಹಣ ನೀಡಬೇಕೆಂದು  ಪೀಡಿಸುತ್ತಿದ್ದಾರೆ. ಹಣ ಪಾವತಿ ಮಾಡದಕ್ಕೆ ಮಗ ಮಾಡಿದ ತಪ್ಪಿನಿಂದ ಈಗ ತಂದೆಯನ್ನೆ ಅಪಹರಣ ಮಾಡಲಾಗಿದೆ. ಧಾರು ರಾಠೋಡ ಅವರನ್ನು ಅಪಹರಣ ಮಾಡಿದಕ್ಕೆ ಇಡೀ ಕುಟುಂಬ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದೆ.


ಲೈಂಗಿಕ ದೌರ್ಜನ್ಯಕ್ಕೆ ವಿರೋಧ ಒಡ್ಡಿದ ಮಹಿಳೆಗೆ ಆಸಿಡ್ ಕುಡಿಸಿ, ಚಾಕುವಿನಿಂದ ಇರಿದ ಕಾಮಾಂಧ


ನಿತ್ಯವೂ ತನ್ನ ಗಂಡನನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆತರಬೇಕೆಂದು ಪತ್ನಿ ತಿಪ್ಪಿಬಾಯಿ ತಮ್ಮ‌ ಮಕ್ಕಳೊಂದಿಗೆ ಶಹಾಪುರ ಪೊಲೀಸ್ ಠಾಣೆ ಅಲೆದಾಡಿ ಸುಸ್ತಾಗಿ ಅಲ್ಲಿ ಪೊಲೀಸರು ಸರಿಯಾಗಿ ಸ್ಪಂಧನೆ ಮಾಡದಕ್ಕೆ ಈಗ ತನ್ನ ಪತಿಯನ್ನು ಹೂಡಿಕಿ ಕೊಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಅವರ ಮೊರೆ ಹೋಗಿದ್ದಾಳೆ.ಎಸ್ಪಿ ಕಚೇರಿಗೆ ಆಗಮಿಸಿ ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ಅವರನ್ನು ಭೇಟಿ ಮಾಡಿ ತಮ್ಮ ನೋವು ತೊಡಿಕೊಂಡು ಪತಿರಾಯನನ್ನು ಪತ್ತೆ ಹಚ್ಚಬೇಕೆಂದು ಮನವಿ ಮಾಡಿದ್ದಾಳೆ.


ಪತಿಯನ್ನು ಪತ್ತೆ ಹಚ್ಚಿ ನಾನು ಬಾಕಿ ಇರುವ 20 ಸಾವಿರ ರೂ ಹಣ ನೀಡುತ್ತೆವೆ. ಆದರೆ ಬಡ್ಡಿ ಹಣ ನೀಡಲು ನಮ್ಮ ಹತ್ತಿರ ಹಣವಿಲ್ಲ. ಕಾರಣ ಜೀವ ಸಹಿತ ನನ್ನ ಪತಿಯನ್ನು ಹೂಡಿಕೆ ಕೊಡಬೇಕೆಂದು ಪತ್ನಿಯಾದ ತಿಪ್ಪಿಬಾಯಿ ನೋವು ತೊಡಿಕೊಂಡಿದ್ದಾಳೆ.


ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ತಿಪ್ಪಿಬಾಯಿ ಮಾತನಾಡಿ, ನನ್ನ ಗಂಡ ಧಾರು ರಾಠೋಡ ನನ್ನು ಹಣಕ್ಕಾಗಿ ಕಿಡ್ನಾಪ್ ಮಾಡಿದ್ದಾರೆ. ಸಂತೋಷನ ಹತ್ತಿರ ನನ್ನ ಮಗ ತೇಜು, 20 ಸಾವಿರ ರೂ ಸಾಲ ಪಡೆದಿದ್ದ. ಈಗ ಸಾಲದ ಹಣ ಹಾಗೂ ಬಡ್ಡಿ ಸೇರಿ 1ಲಕ್ಷ 20 ಸಾವಿರ ರೂ ಹಣ ನೀಡಬೇಕೆಂದು ಪೀಡಿಸಿ ಗಂಡನಿಗೆ ಹಲ್ಲೆ ಮಾಡಿದ್ದಾರೆ. ನನ್ನ ಗಂಡನನ್ನು ಹುಡುಕಿಕೊಡಿ ಎಂದು ನೋವು ತೊಡಿಕೊಂಡಳು. ಕಳೆದ 30 ರಿಂದ ಈಗ ತಿಪ್ಪಿಬಾಯಿ ಕಣ್ಣೀರು ಹಾಕುತ್ತಿದ್ದಾಳೆ.


ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ‌ ಕೂಡ ಕಿಡ್ನಾಪ್ ಮಾಡಿದ್ದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಕಿಡ್ನಾಪ್ ಗೆ ಒಳಗಾದ ಧಾರು ರಾಠೋಡ ನನ್ನು ರಕ್ಷಣೆ ಮಾಡಬೇಕಿದೆ.

First published: