HOME » NEWS » State » ACCUSED FATHER PARTICIPATED IN DALIT GIRL RAPE CASE PROTEST AND HIS SON INVOLVED SEXUAL HARASSMENT LG

ಅಪ್ಪನಿಂದ ದಲಿತ ಯುವತಿಯ ಮೇಲಿನ ದೌರ್ಜನ್ಯದ ಪ್ರತಿಭಟನೆ; ಇನ್ನೊಂದೆಡೆ ಮಗನಿಂದ ದಲಿತ ಮಹಿಳೆಗೆ ಲೈಂಗಿಕ ದೌರ್ಜನ್ಯ

ಬಂಧನದ ಮರುದಿನವೇ ಆರೋಪಿಯ ತಂದೆ ಹಮೀದ್ ಸಾಲ್ಮರ ಉತ್ತರಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯ ಹತ್ಯೆಯ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

news18-kannada
Updated:October 7, 2020, 3:40 PM IST
ಅಪ್ಪನಿಂದ ದಲಿತ ಯುವತಿಯ ಮೇಲಿನ ದೌರ್ಜನ್ಯದ ಪ್ರತಿಭಟನೆ; ಇನ್ನೊಂದೆಡೆ ಮಗನಿಂದ ದಲಿತ ಮಹಿಳೆಗೆ ಲೈಂಗಿಕ ದೌರ್ಜನ್ಯ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ
  • Share this:
ದಕ್ಷಿಣ ಕನ್ನಡ(ಅ.07): ಹೈದರಾಬಾದಿನಲ್ಲಿ ದಲಿತ ಯವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ  ಆಂದ್ರ ಪೋಲೀಸರು ಪುತ್ತೂರಿನ ಎಸ್.ಡಿ.ಪಿ.ಐ ಕಾರ್ಮಿಕ ಸಂಘದ ಮಾಜಿ ತಾಲೂಕು ಅಧ್ಯಕ್ಷನ ಮಗನನ್ನು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ದಲಿತ ಯುವತಿಯ ಜೊತೆ ದೈಹಿಕ ಸಂಬಂಧ ಬೆಳೆಸಿ, ಬಳಿಕ ಆಕೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಪುತ್ತೂರಿನ ಎಸ್.ಡಿ.ಪಿ.ಐ ಕಾರ್ಮಿಕ ಮುಖಂಡ ಹಮೀದ್ ಸಾಲ್ಮರ ಅವರ ಮಗ ಮಹಮ್ಮದ್ ಫೈಝಲ್ (24) ಎಂಬಾತನನ್ನು ಆಂಧ್ರ ಪ್ರದೇಶ ಪೋಲೀಸರು ಬಂಧಿಸಿದ್ದಾರೆ. ಈತನಿಗೆ ಆಂಧ್ರಪ್ರದೇಶದ ದಲಿತ ಯುವತಿ  ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಆ ಪರಿಚಯ ದೈಹಿಕ ಸಂಬಂಧಕ್ಕೂ ಕಾರಣವಾಗಿದ್ದು , ಆ ಬಳಿಕ  ಆಕೆಯ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಆತ ಯುವತಿಯನ್ನು ಬೆದರಿಸಿದ್ದ ಎಂದು ಸಂತ್ರಸ್ತ ಯುವತಿಯು ಆಂಧ್ರಪ್ರದೇಶ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಹುಡುಕಿಕೊಂಡು ಆಂಧ್ರಪ್ರದೇಶದ ಪೊಲೀಸರು ಅ.4ರಂದು  ರಾತ್ರಿ ವೇಳೆ ಪುತ್ತೂರಿಗೆ ಆಗಮಿಸಿದ್ದರು. ಬಳಿಕ ಅವರು  ಚಿಕ್ಕಮುಡ್ನೂರು ಗ್ರಾಮದ ಮುದ್ದೋಡಿಯ ಅಬ್ದುಲ್ ಹಮೀದ್ ಸಾಲ್ಮರ ಅವರ ಮನೆಗೆ ತೆರಳಿ ಆರೋಪಿ ಮೊಹಮ್ಮದ್ ಫೈಝಲ್ ನನ್ನು ಬಂಧಿಸಿ ಆಂಧ್ರಪ್ರದೇಶದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಂಧನದ ವೇಳೆ ಆರೋಪಿಯು ಪೋಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ, ಪೋಲೀಸರು ಆತನನ್ನು ಬಂಧಿಸಿ ಹೈದರಾಬಾದ್ ಗೆ ಕರೆದೊಯ್ದಿದ್ದಾರೆ.

ಡಿಕೆ ಶಿವಕುಮಾರ್​ ಪರಿಶುದ್ಧರಿದ್ದರೆ ಸೀತೆಯಂತೆ ಪವಿತ್ರರಾಗಿ ಹೊರಬರಲಿ; ಕೆ.ಎಸ್​.ಈಶ್ವರಪ್ಪ ಸವಾಲು

ಬಂಧನದ ಮರುದಿನವೇ ಆರೋಪಿಯ ತಂದೆ ಹಮೀದ್ ಸಾಲ್ಮರ ಉತ್ತರಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯ ಹತ್ಯೆಯ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಉತ್ತರಪ್ರದೇಶದ ದಲಿತ ಯುವತಿಯ ಮೇಲಾದ ದೌರ್ಜನ್ಯ ಖಂಡಿಸಿ ಎಸ್.ಡಿ.ಪಿ.ಐ ಪ್ರತಿಭಟನೆಯಲ್ಲಿ ಈತ ಭಾಗವಹಿಸಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
Youtube Video

ಮನೆಯಲ್ಲಿ ದಲಿತ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಮಗನನ್ನು ಇರಿಸಿಕೊಂಡು, ದಲಿತ ಯುವತಿಯ ಅನ್ಯಾಯದ ಬಗ್ಗೆ ಪ್ರತಿಭಟಿಸುವ ನೈತಿಕತೆಯ ಕುರಿತೂ ಚರ್ಚೆ ನಡೆಯುತ್ತಿದೆ.
Published by: Latha CG
First published: October 7, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories