ಆರೋಪಿಯನ್ನು ಹುಡುಕಿ ಹೊರಟ ಪೊಲೀಸರಿಗೆ ಸಿಕ್ಕಿದ್ದು ಅವಳಲ್ಲ ಅವನು..!


Updated:September 30, 2018, 6:14 PM IST
ಆರೋಪಿಯನ್ನು ಹುಡುಕಿ ಹೊರಟ ಪೊಲೀಸರಿಗೆ ಸಿಕ್ಕಿದ್ದು ಅವಳಲ್ಲ ಅವನು..!
  • Share this:
ಗಂಗಾಧರ್ ವಾಗಟ, ನ್ಯೂಸ್ 18 ಕನ್ನಡ

ಬೆ.ಗಳೂರು(ಸೆ.30): ಇದು ಫಾರಿನ್‌ನಲ್ಲಿ ವಿದ್ಯಾರ್ಥಿಗಳು ಮೋಸ ಹೋದ ಸ್ಟೋರಿ. ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆದರೆ ವಂಚಕರ ಟೀಂನಲ್ಲಿದ್ದ ಆರೋಪಿವೊಬ್ಬಳು ಖಾಕಿ ಕೈಗೆ ಸಿಗುವ ಮೊದಲೇ ಅವನಾಗಿದ್ದಾಳೆ. ಇದು ಹೇಗೆ ಸಾಧ್ಯ? ಇಲ್ಲಿದೆ ವಿವರ.

ಗ್ಯಾಂಗ್​ ಒಂದು ವಿದೇಶದಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದೆ. ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಮೆರಿಕಾದ ಬಾರ್ಬಡಸ್​ನಲ್ಲಿರುವ ಅಮೆರಿಕಾ ಯೂನಿವರ್ಸಿಟಿಯಲ್ಲಿ ಸೀಟ್‌ ಕೊಡಿಸೋದಾಗಿ 15 ರಿಂದ 20 ಲಕ್ಷಕ್ಕೂ ಹೆಚ್ಚು ಹಣಕ್ಕೆ ಪಂಗನಾಮ ಹಾಕಿದ್ದಾರೆ. ಈ ಖತರ್ನಾಕ್ ಟೀಂ ಜಾಲ ಬೇಧಿಸಿದ ಮಡಿವಾಳ ಪೊಲೀಸರು ಸುಮನ್​, ದಿಲೀಪ್​, ಆಯಿಷಾ ಭಾನು, ರಂಗ, ಭಾಷಾ , ಇಸಾಕ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಎರಡನೇ ಪ್ರಮುಖ ಆರೋಪಿ ಸುಮನ್ ಎಂಬ ಮಹಿಳೆ ಪೊಲೀಸರಿಗೆ ಸಿಕ್ಕಿ ಬೀಳೋಷ್ಟರಲ್ಲಿ ಹುಡುಗನಾಗಿ ಲಿಂಗ ಪರಿವರ್ತನೆಯಾಗಿದ್ದಾನೆ.

ಸದ್ಯ ದೋಖಾ ಟೀಂನ ಪ್ರಮುಖ ಆರೋಪಿ ಎಸ್ಕೇಪ್ ಆಗಿದ್ದು, ವಿದೇಶದಲ್ಲಿ ನೆಲಸಿರುವ ಶಂಕೆ ವ್ಯಕ್ತವಾಗಿದೆ. ಎ1 ಆರೋಪಿಗಾಗಿ ವಿಶೇಷ ತಂಡ ರಚನೆ ಮಾಡಿದ್ದು ಮಡಿವಾಳ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
First published:September 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ