ಮಹಿಳೆಯ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಭೂಪ; ಶಿವಮೊಗ್ಗದ ಟಿಕ್​ಟಾಕ್​ ಸ್ಟಾರ್ ಬಂಧನ

ಈ ವಿಷಯ ತಿಳಿಯುತ್ತಿದ್ದಂತೆಯೇ ಶಿವಮೊಗ್ಗದ ಸಿಇಎನ್ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.​ ಸಂತ್ರಸ್ತೆ ದೂರಿನ ಆಧಾರದ ಮೇರೆಗೆ ಪ್ರಕರಣ ಬೆನ್ನತ್ತಿದ್ದ ಪೊಲೀಸ್​​ ಠಾಣಾಧಿಕಾರಿ ಗುರುರಾಜ್ ನೇತೃತ್ವದ ತಂಡ ಆರೋಪಿಯನ್ನ ವಶಕ್ಕೆ ಪಡೆದಿದೆ.

news18
Updated:October 12, 2019, 5:45 PM IST
ಮಹಿಳೆಯ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಭೂಪ; ಶಿವಮೊಗ್ಗದ ಟಿಕ್​ಟಾಕ್​ ಸ್ಟಾರ್ ಬಂಧನ
ಆರೋಪಿ ಚಿತ್ರ
  • News18
  • Last Updated: October 12, 2019, 5:45 PM IST
  • Share this:
ಬೆಂಗಳೂರು(ಅ.12): ನಕಲಿ ಟಿಕ್ ಟಾಕ್ ಖಾತೆಯಿಂದ ಅಶ್ಲೀಲ ವಿಡಿಯೋ ವೈರಲ್​ ಮಾಡಿದ್ದ ಭೂಪ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಹಿಳೆಯೊಬ್ಬರ ವೀಡಿಯೋಗೆ ಅಶ್ಲೀಲ ಧ್ವನಿ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಈತನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.

ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿ ಭದ್ರಾವತಿಯ ಗೋಣಿಬೀಡು ಎಂಬಳ್ಳಿಯ ನಿವಾಸಿ ಸಂಜಯ್ ಕುಮಾರ್(23) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನಲ್ಲಿ ಓಲಾ ಕ್ಯಾಬ್​​ ಓಡಿಸುತ್ತಿದ್ದ ಎಂದು ಹೇಳಾಗುತ್ತಿದೆ.

ಇತ್ತೀಚೆಗೆ ಆರೋಪಿ ಶಿವಮೊಗ್ಗದ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದ ಮಹಿಳಾ ಸಿಬ್ಬಂದಿ ಫೋಟೊ ವೈರಲ್​​ ಮಾಡಿದ್ದ ಎನ್ನಲಾಗಿದೆ. ಈ ಮಹಿಳೆ ಹೆಸರಿನಲ್ಲಿ ಟಿಕ್ ಟಾಕ್ ಅಕೌಂಟ್ ತೆರೆದಿದ್ದಾನೆ. ಬಳಿಕ ಅದೇ ಮಹಿಳೆ ವೀಡಿಯೋಗೆ ಅಶ್ಲೀಲ ಧ್ವನಿ ನೀಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಮಾಡಿದ್ದಾನೆ.

ಇದನ್ನೂ ಓದಿ: ಸಮ-ಬೆಸ ಸಂಚಾರ ನಿಯಮಕ್ಕೆ ದೆಹಲಿ ಸರ್ಕಾರ ಸಿದ್ಧತೆ; ಮಹಿಳೆಯರಿಗೆ ವಿನಾಯಿತಿ ಘೋಷಿಸಿದ ಸಿಎಂ ಕೇಜ್ರಿವಾಲ್

ಈ ವಿಷಯ ತಿಳಿಯುತ್ತಿದ್ದಂತೆಯೇ ಶಿವಮೊಗ್ಗದ ಸಿಇಎನ್ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.​ ಸಂತ್ರಸ್ತೆ ದೂರಿನ ಆಧಾರದ ಮೇರೆಗೆ ಪ್ರಕರಣ ಬೆನ್ನತ್ತಿದ್ದ ಪೊಲೀಸ್​​ ಠಾಣಾಧಿಕಾರಿ ಗುರುರಾಜ್ ನೇತೃತ್ವದ ತಂಡ ಆರೋಪಿಯನ್ನ ವಶಕ್ಕೆ ಪಡೆದಿದೆ.

ಇದೀಗ ಆರೋಪಿ ಸಂಜಯ್​​ ಕುಮಾರ್​​ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅತ್ತ ನ್ಯಾಯಲಯವೂ ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ದುರ್ಬಳಕೆ ಮಾಡಿದವರ ಬಗ್ಗೆ ಯಾರೇ ಆಗಲೀ ಸೂಕ್ರ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್​​ ಇಲಾಖೆಗೆ ಸೂಚಿಸಿದ್ದಾರೆ.
---------
First published: October 12, 2019, 5:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading