ಬೆಂಗಳೂರು(ಜೂ.09): ಪೊಲೀಸ್ ಚೀತಾ ಬೈಕ್ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರಿ ಚಾಲಕನನ್ನು ಬೆಂಗಳೂರು ಹಲಸೂರು ಸಂಚಾರಿ ಪೊಲೀಸರು ಬಂಧಿಸಿದ್ಧಾರೆ. ಸಲ್ಮಾನ್ ಪಾಷ ಎಂಬಾತನನ್ನು ಕೃತ್ಯ ಮಾಡಿದ 12 ಗಂಟೆಗಳಲ್ಲಿ ಇನ್ಸ್ಪೆಕ್ಟರ್ ವಿಜಯ್ ಹಡಗಲಿ ಅಂಡ್ ಟೀಂ ಬಂಧಿಸಿದೆ.
ಇನ್ನು, ಈ ಸಲ್ಮಾನ್ ಪಾಷ ಜೂನ್ 5ರಂದು ದೊಮ್ಮಲೂರಿನಿಂದ ಇಂದಿರಾನಗರದ ಕಡೆ ತೆರಳುತ್ತಿದ್ದ. ಇಂದಿರಾನಗರ ಕೆಎಫ್ಸಿ ಸಿಗ್ನಲ್ ಬಳಿ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಪೊಲೀಸ್ ಚೀತಾ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಇನ್ನು ಡಿಕ್ಕಿ ಹೊಡೆದ ರಭಸಕ್ಕೆ ಪೊಲೀಸ್ ಕಾನ್ಸ್ಟೇಬಲ್ ಶ್ರೀಶೈಲ ಹಾಗೂ ದಿನೇಶ್ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ.
ಇದೇ ವೇಳೆ ಚೀತಾ ಬೈಕ್ ಕಾರಿಗೆ ಸಿಕ್ಕಾಕಿಕೊಂಡಿದೆ. ಭಯಭೀತನಾದ ಸಲ್ಮಾನ್ ಜೋರಾಗಿ ಕಾರು ಓಡಿಸಿದ್ದಾನೆ. ಬೈಕ್ ಅನ್ನು ಸಹ ಒಂದು ಕಿಲೋಮೀಟರ್ ಎಳೆದುಕೊಂಡು ಹೋಗಿದ್ದಾನೆ. ಇತ್ತ ವಿಚಾರ ಗೊತ್ತಾಗುತ್ತಿದ್ದಂತೆ ಇನ್ಸ್ಪೆಕ್ಟರ್ ವಿಜಯ್ ಹಡಗಲಿ ಸ್ಥಳಕ್ಕೆ ಹೋಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಪೂರ್ವ ವಿಭಾಗದ ಸಂಚಾರಿ ಡಿಸಿಪಿ ನಾರಾಯಣ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅಂಡ್ ಟೀಂ ರಾತ್ರಿಯೇ ಕಾರ್ಯಾಚರಣೆ ಶುರುಮಾಡಿದೆ. ಏನಾದ್ರೂ ಕ್ಲೂ ಸಿಗಬಹುದಾ ಅಂತ ಇನ್ಸ್ಪೆಕ್ಟರ್ ನಾಲ್ಕು ಕಿಲೋ ಮೀಟರ್ ನಡೆದುಕೊಂಡೇ ಹೋಗಿದ್ದಾರೆ. ಆಗ ಒಂದು ಕಿಲೋ ಮೀಟರ್ ಅಂತರದಲ್ಲಿ ಬೈಕ್ ಹಾಗೂ ನಾಲ್ಕು ಕಾರಿನ ನಂಬರ್ ಪ್ಲೇಟ್ ಚೂರುಗಳ ಸಿಕ್ಕಿದೆ.
ಇದನ್ನೂ ಓದಿ: ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿಗೆ ಕೊರೋನಾ ಪಾಸಿಟಿವ್; ದೆಹಲಿ ಆಸ್ಪತ್ರೆಗೆ ದಾಖಲು
ಅದೇ ನಂಬರ್ ಫ್ಲೇಟ್ ಚೂರುಗಳನ್ನು ಜೋಡಿಸಿದಾಗ 9238 ನಂಬರ್ ಅನ್ನೋದು ಪತ್ತೆಯಾಯ್ತು. ಕೂಡಲೇ ಆರ್ಟಿಒ ಅಧಿಕಾರಿಗಳನ್ನು ಸಂಪರ್ಕ ಮಾಡಿದಾಗ ಆರು ಕಾರುಗಳ ವಿಳಾಸ ಕೊಟ್ಟಿದ್ರು. ಇತ್ತ ಸಿಸಿ ಕ್ಯಾಮರಾದ ಪರಿಶೀಲನೆ ವೇಳೆ ಬಿಳಿ ಬಣ್ಣದ ಟಾಟಾ ಬೋಲ್ಟ್ ಕಾರು ಅಂತ ಗೊತ್ತಾಯ್ತು.
ನಂತರ ಆರ್ಟಿಒ ಅಧಿಕಾರಿಗಳು ಕೊಟ್ಟ ವಿಳಾಸದ ಪ್ರಕಾರ ಕೆ.ಆರ್ ಪುರಂ ಹೋಗಿ ವಿಚಾರಿಸಾಗ ಕಾರು ಮಾಲೀಕ ತನ್ನ ಡ್ರೈವರ್ಗೆ ಕೊಟ್ಟಿದೀನಿ ಅಂತ ಹೇಳಿದ್ದು, ಕೂಡಲೇ ಆತನ ಮೂಲಕ ಸಲ್ಮಾನ್ ಭಾಷಾನನ್ನು ಬಂಧಿಸಿದ್ದಾರೆ. ಇನ್ನು, ಹಲಸೂರು ಸಂಚಾರಿ ಇನ್ಸ್ಪೆಕ್ಟರ್ ವಿಜಯ್ ಹಡಗಲಿ ಅಂಡ್ ಟೀಮ್ ನ ಕಾರ್ಯ ವೈಖರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ತಕ್ತಪಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ