ಅರೆಸ್ಟ್​ ಆಗಿದ್ದು ಕಳ್ಳತನದ ಕೇಸ್​ನಲ್ಲಿ; ಆದ್ರೆ ಬಾಯ್ಬಿಟ್ಟಿದ್ದು ಕೊಲೆಯ ರಹಸ್ಯ

Latha CG | news18-kannada
Updated:October 2, 2019, 5:12 PM IST
ಅರೆಸ್ಟ್​ ಆಗಿದ್ದು ಕಳ್ಳತನದ ಕೇಸ್​ನಲ್ಲಿ; ಆದ್ರೆ ಬಾಯ್ಬಿಟ್ಟಿದ್ದು ಕೊಲೆಯ ರಹಸ್ಯ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಅ.02): ಕಳ್ಳತನದ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದ ಆರೋಪಿಯೊಬ್ಬ ಪೊಲೀಸರ ಮುಂದೆ ಭಯಾನಕ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಕಳ್ಳತನ ಮಾಡಿದ್ದ ಆರೋಪದ ಮೇಲೆ ಆರ್​ಎಂಸಿ ಯಾರ್ಡ್​ ಪೊಲೀಸರು ರೌಡಿ ಶೀಟರ್ ಮಧುಕುಮಾರ್​ ಅಲಿಯಾಸ್ ಸುದೀಪ್​ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ಮತ್ತೊಂದು ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಎರಡೂವರೆ ವರ್ಷಗಳ ಹಿಂದೆ ಮಧುಕುಮಾರ್ ತನ್ನ ಗೆಳೆಯನನ್ನು ಕೊಲೆ ಮಾಡಿರುವ ಸತ್ಯಾಂಶವನ್ನು ಪೊಲೀಸರ ಮುಂದೆ ಹೇಳಿದ್ದಾನೆ. ಬಸವ ಎಂಬಾತನನ್ನು ಕೊಲೆ ಮಾಡಿದ್ದಾಗಿ ಇಂದು ಒಪ್ಪಿಕೊಂಡಿದ್ದಾನೆ. ರೌಡಿಶೀಟರ್ ಬಸವ ನನ್ನ ಪತ್ನಿಯನ್ನು ಕಾಡುತ್ತಿದ್ದ, ಹೀಗಾಗಿ ಎರಡೂವರೆ ವರ್ಷಗಳ ಹಿಂದೆ ಆತನನ್ನು ಕೊಲೆ ಮಾಡಿದೆ ಎಂದು ರೌಡಿ ಶೀಟರ್ ಮಧುಕುಮಾರ್ ರೋಚಕ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಕಳ್ಳತನದ ಆರೋಪದ ಮೇಲೆ ಬಂಧಿಸಿದ ಪೊಲೀಸರು ಆರೋಪಿಯ ಹೇಳಿಕೆ ಕೇಳಿ ದಂಗಾಗಿದ್ದಾರೆ.

ಇಸ್ರೋ ವಿಜ್ಞಾನಿಯ ಕೊಲೆ; ಆಗಂತುಕನಿಗೆ ಬಲೆ ಬೀಸಿರುವ ಪೊಲೀಸರು

ರೌಡಿಶೀಟರ್ ಮಧುಕುಮಾರ್ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಗೊರಗುಂಟೆಪಾಳ್ಯ ನಿವಾಸಿ. ಈತನಿಗೆ  ಬಸವ ಎಂಬ ಗೆಳೆಯನಿದ್ದ. ಆತನೂ ರೌಡಿಶೀಟರ್ ಪಟ್ಟ ಹೊತ್ತಿದ್ದ. ಮಧುಕುಮಾರ್ ಹೆಂಡತಿಯ ಮೇಲೆ ಬಸವನ ಕಣ್ಣು ಬಿದ್ದಿತ್ತು. ಪದೇ ಪದೇ ಆಕೆಯನ್ನು ಕಾಡುತ್ತಿದ್ದ. ಇದನ್ನು ಸಹಿಸದ ಮಧುಕುಮಾರ್​ ಬಸವನ ಕೊಲೆ ಮಾಡಲು ಪ್ಲ್ಯಾನ್​ ಮಾಡಿದ್ದ. ಹೀಗಾಗಿ ಆ ಒಂದು ದಿನ ರೌಡಿ ಬಸವನನ್ನು ಯಲಿಯೂರು ಕೆರೆ ಬಳಿ ಕರೆದೊಯ್ದು ಕಂಠಪೂರ್ತಿ ಕುಡಿಸಿದ್ದ. ಬಳಿಕ ಆತನ ತಲೆ ಮೇಲೆ ಸೈಜ್​ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಬಸವನ ಮೃತದೇಹವನ್ನು ಹೂತುಹಾಕಿ ಅಲ್ಲಿದ್ದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದಿರುವುದು ಎರಡೂವರೆ ವರ್ಷಗಳ ಹಿಂದೆ. ಘಟನೆ ಬಳಿಕ ಮಧುಕುಮಾರ್ ಬೆಂಗಳೂರಿಗೆ ಬಂದು ನೆಲೆಸಿದ್ದ. ನಂತರ ಕಳ್ಳತನದ ಚಾಳಿಯಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಬೆಂಗಳೂರಿನ ಬಸಂತಿಕುಮಾರಿ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದ. ಮಧುಕುಮಾರ್ ಜೊತೆಗೆ ಪ್ರವೀಣ್​ ಮತ್ತು ಪ್ರವೀಣ್​ ಕುಮಾರ್ ಎಂಬ ಆರೋಪಿಗಳನ್ನು ಆರ್​ಎಂಸಿ ಯಾರ್ಡ್​ ಪೊಲೀಸರು ಬಂಧಿಸಿದ್ದರು.

ಕೇಂದ್ರದ ಪರಿಹಾರ ಹಣಕ್ಕಾಗಿ ಕಾದು ಕೂರುವ ಅವಶ್ಯಕತೆ ಇಲ್ಲ: ಡಿಸಿಎಂ ಅಶ್ವಥ್​​ ನಾರಾಯಣ್​​

ಕಳ್ಳತನ ಪ್ರಕರಣಧ ವಿಚಾರಣೆ ವೇಳೆ ಗೆಳೆಯನ ಕೊಲೆ ಮಾಡಿದ್ದಾಗಿ ಆರೋಪಿ ಮಧುಕುಮಾರ್ ಒಪ್ಪಿಕೊಂಡಿದ್ದಾನೆ. ಆತ ಹೇಳಿದ ಸತ್ಯ ಕೇಳಿ ಪೊಲೀಸರೇ ಬೆಚಚಿ ಬಿದ್ದಿದ್ದಾರೆ. ಇನ್ನು, ಬಂಧಿತರಿಂದ 17 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನಗರದ ಹಲವೆಡೆ ಹತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಧುಕುಮಾರ್​​ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
First published:October 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading