• Home
  • »
  • News
  • »
  • state
  • »
  • Kolar Murder: ಮದ್ಯ ಸೇವಿಸುತ್ತಲೇ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ; ಮೃತದೇಹವನ್ನ ಸಿಗರೇಟ್ ನಿಂದ ಸುಟ್ಟ ಬಾಮೈದ

Kolar Murder: ಮದ್ಯ ಸೇವಿಸುತ್ತಲೇ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ; ಮೃತದೇಹವನ್ನ ಸಿಗರೇಟ್ ನಿಂದ ಸುಟ್ಟ ಬಾಮೈದ

ಜಯಪ್ಪ ಮತ್ತು ಮುರಳಿ

ಜಯಪ್ಪ ಮತ್ತು ಮುರಳಿ

ಜಯಪ್ಪ ಹಾಗೂ ಮುರಳಿ  ಇಬ್ಬರದ್ದೂ ಒಂದೇ ಪರಿಸ್ಥಿತಿ. ಇಬ್ಬರಿಗೂ ಯಾರು ಹೇಳುವವರು ಇರಲಿಲ್ಲ, ಕೇಳುವವರು ಇರಲಿಲ್ಲ, ಮುರಳಿಗೆ ಇನ್ನೂ ಮದುವೆಯಾಗಿರಲಿಲ್ಲ. ತಂದೆ ತಾಯಿ ಇಬ್ಬರೂ ಜೀವಂತವಾಗಿಲ್ಲ,  ತಂದೆ ಮಾಡಿಟ್ಟ ಮನೆಯಲ್ಲಿ ತಾನೊಬ್ಬನೇ ಒಂಟಿ ಬದುಕು ನಡೆಸುತ್ತಿದ್ದನು.

  • Share this:

ಕೋಲಾರ ಜಿಲ್ಲೆ ಬಂಗಾರಪೇಟೆ (Bangarapete, Kolar) ಪಟ್ಟಣದ ಕಾರಹಳ್ಳಿ ರಸ್ತೆಯಲ್ಲಿ  ಕಳೆದ ಮಂಗಳವಾರ ರಾತ್ರಿ ಅಯ್ಯಪ್ಪ ಸ್ವಾಮಿ ದೇವಾಲಯ (Ayyappa swamy Temple) ಬಳಿ ಮನೆಯೊಂದರಲ್ಲಿ 60 ವರ್ಷ ವಯಸ್ಸಿನ ಜಯಪ್ಪ ಎಂಬಾತನ ಬರ್ಬರ ಕೊಲೆಯಾಗಿತ್ತು (Murder). ಜಯಪ್ಪನ ಬಾಮೈದುವ ಮುರಳಿ  ಮನೆಯಲ್ಲಿ ಕೊಲೆ ನಡೆದಿತ್ತು. ಕೊಲೆಯಾಗಿರುವ ವಿಷಯ ಅಕ್ಕಪಕ್ಕದ ಮನೆಯವರ ಮೂಲಕ ಜಯಪ್ಪನ ಸಂಬಂಧಿಕರಿಗೆ ತಿಳಿದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಜಯಪ್ಪನ ಸಂಬಂಧಿಕರು ಏನಾಗಿದೆ ಎಂದು ವಿಚಾರಣೆ ಮಾಡಲಾಗಿ, ಅಲ್ಲಿ ಜಯಪ್ಪನ ಬಾಮೈದ ಮುರಳಿಯಿಂದಲೇ ತನ್ನ ಸೋದರ ಮಾವನ ಕೊಲೆ ನಡೆದು ಹೋಗಿರೋದು ತಿಳಿದು ಬಂದಿದೆ. ಕೊಲೆ ಮಾಡಿದ ಆರೋಪಿ ಮನೆಯ ಬಾಗಿಲು ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದನು.


ಜಯಪ್ಪನ ಸಂಬಂಧಿಕರು ಏನಾಗಿದೆ ಅನ್ನೋದನ್ನ ವಿಚಾರಣೆ ಮಾಡಲಾಗಿ ಕಳೆದ ರಾತ್ರಿ ಸೋದರ ಮಾವ ಹಾಗೂ ಬಾಮೈದ ಮುರಳಿ ಇಬ್ಬರೂ ಕುಡಿಯೋದಕ್ಕೆ ಕುಳಿತಿದ್ದಾರೆ. ಈ ವೇಳೆ ಇಬ್ಬರ ನಡುವೆ ಅದ್ಯಾವ ವಿಷಯಕ್ಕೆ ಗಲಾಟೆ ನಡೆದಿದಯೋ ಗೊತ್ತಿಲ್ಲ. ಮುರಳಿ ತನ್ನ ಸೋದರ ಮಾವನ ಜಯಪ್ಪನನ್ನು ಕಬ್ಬಣದ ರಾಡ್​ ನಿಂದ ಹೊಡೆದು ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದನು.


ಇಬ್ಬರ ಜೀವನ ಒಂದೇ ಆಗಿತ್ತು


ಜಯಪ್ಪ ಹಾಗೂ ಮುರಳಿ  ಇಬ್ಬರದ್ದೂ ಒಂದೇ ಪರಿಸ್ಥಿತಿ. ಇಬ್ಬರಿಗೂ ಯಾರು ಹೇಳುವವರು ಇರಲಿಲ್ಲ, ಕೇಳುವವರು ಇರಲಿಲ್ಲ, ಮುರಳಿಗೆ ಇನ್ನೂ ಮದುವೆಯಾಗಿರಲಿಲ್ಲ. ತಂದೆ ತಾಯಿ ಇಬ್ಬರೂ ಜೀವಂತವಾಗಿಲ್ಲ,  ತಂದೆ ಮಾಡಿಟ್ಟ ಮನೆಯಲ್ಲಿ ತಾನೊಬ್ಬನೇ ಒಂಟಿ ಬದುಕು ನಡೆಸುತ್ತಿದ್ದನು.


ಇದನ್ನೂ ಓದಿ:  Hubballi: ಶಸ್ತ್ರಧಾರಿ ದೇವರನ್ನು ಪೂಜಿಸೋ ಹಿಂದೂ ಶಸ್ತ್ರ ಹಿಡಿಯಬೇಕು; VHP ನಾಯಕ ಮಿಲಿಂದ್ ಪರಾಂಡೆ ವಿವಾದ


ಜಯಪ್ಪನಿಂದ ದೂರವಾಗಿದ್ದ ಕುಟುಂಬ


ಜೀವನಕ್ಕೆಂದು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸೆಕ್ಯೂರಿಟಿ ಗಾರ್ಡ್​ ಕೆಲಸ ಮಾಡಿಕೊಂಡಿದ್ದ ಇದು ಮುರುಳಿ ಪರಿಸ್ಥಿತಿ.  ಆದರೆ ಜಯಪ್ಪನ ಜೊತೆಗೆ ಹೆಂಡತಿ ಮಕ್ಕಳು ಯಾರೂ ಜೊತೆಗಿರಲಿಲ್ಲ. ಜಯಪ್ಪನ ಮಕ್ಕಳಿಗೆ ಮದುವೆಯಾಗಿ ಅವರವರ ಗಂಡನ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಪತ್ನಿ ಕೂಡಾ ಕುಡುಕ ಜಯಪ್ಪನ ಸಹವಾಸ ಸಾಕೆಂದು ಆಕೆಯೂ ತನ್ನ ಮಕ್ಕಳ ಜೊತೆಗೆ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ.


ಹಾಗಾಗಿ ಜಯಪ್ಪ ಸಣ್ಣಪುಟ್ಟ ಕೂಲಿ ಕೆಲಸ ಮಾಡಿಕೊಂಡು ಬಂದಿದ್ದರಲ್ಲಿ ಒಂದಷ್ಟು ಕುಡಿದು ಎಲ್ಲೋ ಒಂದುಕಡೆ ಮಲಗುತ್ತಿದ್ದ. ಹೀಗಿರುವಾಗಲೇ ಕಳೆದ ಮಂಗಳವಾರ ರಾತ್ರಿ ಜಯಪ್ಪ ಹಾಗೂ ಮುರಳಿ ಇಬ್ಬರೂ ಮನೆಗೆ ಕುಡಿಯೋದಕ್ಕೆಂದು, ಮುರಳಿ ಮನೆಗೆ ಮದ್ಯ ತೆಗೆದುಕೊಂಡು ಹೋಗಿ ಚೆನ್ನಾಗಿ ಕುಡಿದಿದ್ದಾರೆ.


ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ


ಅದ್ಯಾವುದೋ ವಿಷಯಕ್ಕೆ ಇಬ್ಬರು ಜಗಳ  ಮಾಡಿಕೊಂಡಿದ್ದಾರೆ, ಈ ವೇಳೆ ಮುರಳಿ ಕಬ್ಬಿಣದ ರಾಡ್ ​ನಿಂದ ಜಯಪ್ಪನಿಗೆ ಹೊಡೆದು ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ಸಂಬಂದ ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ಮುರಳಿಯನ್ನು ಬಂಧಿಸಿದ್ದಾರೆ.


ಪೊಲೀಸರ ವಿಚಾರಣೆ ಕೊಲೆ ಆರೋಪ ಒಪ್ಪಿಕೊಂಡಿರುವ  ಮುರಳಿ, ನನ್ನನ್ನ ಜಯಪ್ಪ ಸುಖಾಸುಮ್ಮನೆ ನಿಂದಿಸಿದ್ದಾರ., ಕೋಪ ತಾಳಲಾರದೆ ಹೊಡೆದು ಕೊಲೆ ಮಾಡಿದೆ ಎಂದಿದ್ದಾನೆ. ಘಟನೆ ನಡೆಯುವ ಮೂರು ದಿನಗಳಿಂದ ಇಬ್ಬರು ಒಟ್ಟಿಗೆ ಸೇರಿ ಕುಡಿಯುತ್ತಿದ್ದರು ಎಂದು ತಿಳಿದು ಬಂದಿದೆ.


ದೇಹದ ಮೇಲೆ ಸಿಗರೇಟ್ ನಿಂದ ಸುಟ್ಟು ವಿಕೃತಿ


ಜಯಪ್ಪ ವಯಸ್ಸಿನಲ್ಲಿ ದೊಡ್ಡವರಾಗಿದ್ದು, ಮುಂಗೋಪಿಯಾಗಿರೊ ಮುರಳಿ, ಕೆಟ್ಟ ಪದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಕಿಡಿಕಾರಿದ್ದ ಜಯಪ್ಪ, ಬದಲಾಗಿ ತಿರುಗಿಸಿ  ಬೈದಿದ್ದಾನೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ರಾಡ್ ನಿಂದ ಮನಸೋ ಇಚ್ಚೆ ಥಳಿಸಿದ್ದ ಮುರಳಿ, ಮೃತ ಜಯಪ್ಪ ದೇಹದ ಮೇಲೆ ಸಿಗರೇಟ್ ನಿಂದ ಸುಟ್ಟು ಕಡೆಗೆ ವಿಕೃತಿ ಮೆರೆದಿದ್ದಾನೆ ಎಂದು ತಿಳಿದು ಬಂದಿದೆ, ಮುರಳಿ ತಾಯಿ ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದು, ತಂದೆ ಈ ಮೊದಲೇ ಮೃತಪಟ್ಟಿದ್ದರು  ಹಾಗಾಗಿ ಯಾರು ಜೊತೆಗಿಲ್ಲದ ಒಂಟಿತನ ಕಾಡುತ್ತಿತ್ತು ಎನ್ನಲಾಗಿದೆ.


ಇದನ್ನೂ ಓದಿ:  Chitradurga: ಜಮೀನಿಗೆ ಹೋಗಲು ದಾರಿ ಬಿಡದೆ ಒಂಟಿ ಮಹಿಳೆಯ ಬರ್ಬರ ಹತ್ಯೆ!


ಒಟ್ಟಿನಲ್ಲಿ ಮಾವ,  ಬಾಮೈದನಿನಗೆ ರಕ್ತ ಸಂಬಂಧದ ಜೊತೆಗೆ ಕುಡಿತದ ಸಂಬಂಧವೂ ಚೆನ್ನಾಗಿಯೇ ಇತ್ತು. ಆಗಾಗ ಕುಡಿಯೋದಕ್ಕೆಂದು ಸೇರುತ್ತಿದ್ದ ಮಾವ ಬಾಮೈದರ ನಡುವೆ ಅದ್ಯಾಕೆ ಗಲಾಟೆ ನಡೆದು ಇಂತಹ ದುರಂತ ಎಡೆಮಾಡಿಕೊಡ್ತೊ ಪೊಲೀಸರ ವಿಚಾರಣೆಯಿಂದಲೇ ತಿಳಿಯಬೇಕಿದೆ.

Published by:Mahmadrafik K
First published: