ಕೋಲಾರ: ಹಸುವಿನ ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ (Kolar) ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಸುಂದರಪಾಳ್ಯ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಬೇತಮಂಗಲ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡು ಆರೋಪಿ ಷಫೀ ಉಲ್ಲಾನನ್ನು ಬಂಧನ ಮಾಡಿದ್ದಾರೆ. ವಿಕೃತ ಕಾಮಿ, ಸುಂದರಪಾಳ್ಯ ಬಡಾವಣೆಯ ರಾಮರೆಡ್ಡಿ ಎಂಬುವವರಿಗೆ ಸೇರಿದ ಹಸುವಿನ ಕರು ಮೇಲೆ ಅತ್ಯಾಚಾರ ಯತ್ನಿಸಿದ್ದನಂತೆ. ಈ ಹಿಂದೆಯೂ ಒಮ್ಮೆ ಹಸುವಿನ ಮೇಲೆ ಅತ್ಯಾಚಾರ ಮಾಡಿ ಅರೋಪಿ ಸಿಕ್ಕಿಬಿದ್ದಿದ್ದ ಎನ್ನಲಾಗಿದ್ದು, ರಾಮರೆಡ್ಡಿ ಅವರು ನೀಡಿದ ದೂರಿನ ಮೇರೆ ಆರೋಪಿಯನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆಸ್ತಿಗಾಗಿ ಮಹಿಳೆ ಮೇಲೆ ಹಲ್ಲೆ
ಜಮೀನು ವಿವಾದದ ಹಿನ್ನಲೆಯಲ್ಲಿ ಮಹಿಳೆಯ ಮೇಲೆ ಹಲ್ಲೆಯ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ (Bangarapete) ನಡೆದಿದೆ. ರಾಮಾಪುರ ಗ್ರಾಮದಲ್ಲಿ ಶ್ರೀನಿವಾಸ್ ಎನ್ನುವವರು ಕವಿತಾ ಎಂಬ ಮಹಿಳೆ ಮೇಲೆ ಹಲ್ಲೆ ನಡೆಸಿರೋ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: Bengaluru: ಹಣದ ವಿಚಾರಕ್ಕೆ ಸ್ನೇಹಿತೆಯರ ನಡುವೆ ಕಿರಿಕ್; ಸಲೂನ್ಗೆ ಬೆಂಕಿ ಇಟ್ಟ ಬಾಯ್ ಫ್ರೆಂಡ್!
ಹಲ್ಲೆ ನಡೆಸಿದರೂ ಆರೋಪಿ ವಿರುದ್ದ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಮುಂದಾಗ್ತಿಲ್ಲ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಜಮೀನು ವಿಚಾರವಾಗಿ ಎರಡೂ ಕಡೆಯವರ ಮಧ್ಯೆ ವಿವಾದ ನಡೆಯುತ್ತಿತ್ತು ಎನ್ನಲಾಗಿದ್ದು, ಬೂದಿಕೋಟೆ ಪೊಲೀಸರಿಂದ (Budikote Police Station) ತಾರತಮ್ಯ ಆರೋಪ ಕೇಳಿ ಬಂದಿದೆ. ಸದ್ಯ ಗಾಯಾಳು ಕವಿತ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಬೂದಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕನಕಗಿರಿ ಶಾಸಕ ಬಸವರಾಜ ದಡೇಸುಗೂರು (MLA Basavaraj Dadesugur) ಕಾರು ಡಿಕ್ಕಿಯಾಗಿ (Car Accident) ಮರಿಯಮ್ಮ ನಾಯಕ ಎಂಬ ವೃದ್ಧೆ ಮೃತಪಟ್ಟ ಘಟನೆ ಕೊಪ್ಪಳದಲ್ಲಿ (Koppala) ನಡೆದಿದೆ. ನಿನ್ನೆ ಮೈಲಾಪುರ ಕ್ರಾಸ್ ಬಳಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Hassan: ವಿಧಿ ಆಟ ಎಂತ ಘೋರ; ಅಂದು ಅಣ್ಣ-ಇಂದು ತಮ್ಮ, ಸಹೋದರನ ವರ್ಷದ ತಿಥಿಗೆ ಬರ್ತಿದ್ದ ತಮ್ಮ ಸಾವು
ಮೈಲಾಪುರ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ವೃದ್ಧೆಗೆ ಶಾಸಕ ಬಸವರಾಜ ದಡೇಸುಗೂರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ಯಂತೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ವೃದ್ಧೆಗೆ ಡಿಕ್ಕಿ ಹೊಡೆದಿದ್ದಾನಂತೆ. ಆದರೆ ಕಾರ್ ನಾಯಿಗೆ ಡಿಕ್ಕಿಯಾಗಿದೆ. ನಾಯಿ ವೃದ್ಧೆ ಮೇಲೆ ಬಿದ್ದಿದ್ದಕ್ಕೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಶಾಸಕರು ಹೇಳಿದ್ದಾರೆ.
ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ಕೂಡ ವಿಫಲ, ಅರಣ್ಯಾಧಿಕಾರಿ ಅಮಾನತು
ಸಿಬ್ಬಂದಿಗಳನ್ನು ನಿಯಂತ್ರಿಸುವಲ್ಲಿ, ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲತೆಯನ್ನ ಹೊಂದಿದ್ದ ಅರಣ್ಯಾಧಿಕಾರಿ (Forest Officer) ಶಿಲ್ಪಾ ಅವರಿಗೆ ನೀಡಿದ ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸಿಲ್ಲ. ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿಕೊಂಡು ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ (Human-elephant conflict) ಕೂಡ ವಿಫಲತೆಯನ್ನ ಹೊಂದಿದ್ದಾರೆ. ಅಧಿಕಾರಿ ಸಿಬ್ಬಂದಿ ವರ್ಗದವರ ನಡುವೆ ಭಿನ್ನಾಭಿಪ್ರಾಯ ಉಂಟಾಗಲು, ವಿಭಾಗದ ಹಾಗೂ ವಲಯದ ಆಡಳಿತಾತ್ಮಕ ಸಮಸ್ಯೆ ಉಂಟಾಗಲು ನೇರ ಕಾರಣಕರ್ತರಾಗಿರುವುದರ ಜೊತೆಗೆ ಕರ್ತವ್ಯ ಲೋಪ ಹಿನ್ನೆಲೆ ಹಾಸನದ (Hassan) ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಅಮಾನತು ಆದೇಶ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ