ಲಿಂಗ ಪರಿವರ್ತನೆಗಾಗಿ ಬೆಲೆಬಾಳುವ ಸೀರೆ ಕದ್ದು ಗೂರ್ಖನ ಕೈಗೆ ಸಿಕ್ಕಿಬಿದ್ದ ತೃತೀಯ ಲಿಂಗಿ

ಪೊಲೀಸರು ಕಳ್ಳತನಕ್ಕೆ ಕಾರಣವನ್ನು ವಿಚಾರಿಸಿದಾಗ ತನ್ನ ಲಿಂಗ ಬದಲಾವಣೆಗಾಗಿ ವೈದ್ಯರು ರೂ. 1 ಲಕ್ಷ ಹಣ ಕೇಳಿದ್ದರು.  ಈ ಹಿನ್ನೆಲೆಯಲ್ಲಿ ತಾನು ಈ ಕೃತ್ಯಕ್ಕೆ ಮುಂದಾಗಿದ್ದಾಗಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ನ್ಯೂಸ್ 18 ಕನ್ನಡಕ್ಕೆ ತಿಳಿಸಿವೆ.

ಬಂಧಿತ ಆರೋಪಿ

ಬಂಧಿತ ಆರೋಪಿ

  • Share this:
ವಿಜಯಪುರ, (ಅ. 10): ಬಟ್ಟೆ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ತೃತೀಯ ಲಿಂಗಿಯನ್ನು ಗೂರ್ಖನೊಬ್ಬ ಸೆಣಸಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಮುದ್ದೇಬಿಹಾಳ ಪಟ್ಟಣದಲ್ಲಿ ಗೂರ್ಖ ಶೇರ್ ಬಹಾದ್ದೂರ್ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ.  ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಯೊಂದರ ಶೆಟರ್ ಮುರಿದಿರುವುದನ್ನು ಈತ ನೋಡಿದ್ದಾನೆ.  ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿರುವ ಪಟ್ಡಣದ ದಾದಾ ಗಣಪತಿ ಶೋರೂಂ ನ ಶಟರ್ಸ್ ಮುರಿದ ದರೋಡೆಕೋರರು ಒಳಗೆ ನುಗ್ಗಿ ಬೆಲೆಬಾಳುವ ಬಟ್ಟೆಗಳನ್ನು ದೋಚಲು ಮುಂದಾಗಿದ್ದರು ಎಂದು ಶಂಕೆ ವ್ಯಕ್ತಪಡಿಸಿದ್ದಾನೆ.  ಅಂಗಡಿಯ ಶಟರ್ಸ್ ಬೀಗ ಮುರಿದಿದ್ದರಿಂದ ಸಂಶಯಗೊಂಡ ಗೂರ್ಖ ಅಂಗಡಿ ಮಾಲಿಕ ಮಹಾವೀರ ಜೈನ್ ಅವರಿಗೆ ಫೋನ್ ಮಾಡಿ ವಿಚಾರಿಸಿದ್ದಾನೆ.

ಮಾಲಿಕ ಬರುವುದರೊಳಗಾಗಿ ಅಂಗಡಿಗೆ ಹೋದ ಶೇರ್ ಬಹಾದ್ದೂರ್ ಅಲ್ಲಿ ನೋಡಿದಾಗ ಕಳ್ಳನೊಬ್ಬ ಬೆಲೆ ಬಾಳುವ ಸೀರೆಗಳನ್ನು ಗಂಟು ಕಟ್ಟಿ ಇಟ್ಟಿರುವುದು ಕಂಡು ಬಂದಿದೆ.  ದೊಡ್ಡ ಮತ್ತು ಬೆಲೆ ಬಾಳುವ ಸೀರೆಗಳು ಮತ್ತು ಇತರ ಬಟ್ಟೆಗಳನ್ನು ನೋಡಿ ಒಳಗೆ ನೋಡಿದಾಗ ಕಳ್ಳ ಕಂಡಿದ್ದಾನೆ.  ಆದರೂ, ಧೈರ್ಯ ಮಾಡಿ ಆತನೊನಂದಿಗೆ ಸೆಣಸಾಡಿದ್ದಾನೆ.  ಅಲ್ಲದೇ, ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.  ಈ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳ ತೃತೀಯ ಲಿಂಗಿ ಎಂಬುದು ಗೊತ್ತಾಗಿದೆ.

ವಿಜಯಪುರ ಪೊಲೀಸರ ಕಾರ್ಯಾಚರಣೆ; ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ 5 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಸೆರೆಸಿಕ್ಕ ಕಳ್ಳನನ್ನು ಕೊಪ್ಪಳ ಮೂಲದ ರಾಯಣ್ಣ ಭೀಮಪ್ಪ ಜೋಶಿ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.  ಗೂರ್ಖನ ಸಾಹಸಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದು, ಸಾಹಸ ಮೆರೆದ ಗೂರ್ಖಗೆ ಶೋರೂಂ ಮಾಲಿಕ ಮಹಾವೀರ ಜೈನ್ ಅಭಿನಂದಿಸಿದ್ದಾರೆ.  ಅಷ್ಟೇ ಅಲ್ಲ, ಆ ಪ್ರದೇಶದ ಇತರ ವ್ಯಾಪಾರಿಗಳು ಸೇರಿಕೊಂಡು ಗೂರ್ಖ ಶೇರ್ ಬಹಾದ್ದೂರ್ ಗೆ ರೂ. 10000 ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.  ಅಲ್ಲದೇ, ಆತನ ಕರ್ತವ್ಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಕಳ್ಳತನಕ್ಕೆ ಕಾರಣವನ್ನು ವಿಚಾರಿಸಿದಾಗ ತನ್ನ ಲಿಂಗ ಬದಲಾವಣೆಗಾಗಿ ವೈದ್ಯರು ರೂ. 1 ಲಕ್ಷ ಹಣ ಕೇಳಿದ್ದರು.  ಈ ಹಿನ್ನೆಲೆಯಲ್ಲಿ ತಾನು ಈ ಕೃತ್ಯಕ್ಕೆ ಮುಂದಾಗಿದ್ದಾಗಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ನ್ಯೂಸ್ 18 ಕನ್ನಡಕ್ಕೆ ತಿಳಿಸಿವೆ.
Published by:Latha CG
First published: