Bengaluru: ಕತ್ತರಿಗುಪ್ಪೆ ಬಳಿ ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ಸಾವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕತ್ತರಿಗುಪ್ಪೆ ಬಳಿ ಉದ್ಭವ ಆಸ್ಪತ್ರೆ ಎದುರೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 20):  ಕತ್ತರಿಗುಪ್ಪೆಯಲ್ಲಿ (Kattariguppe) ಭೀಕರ ರಸ್ತೆ ಅಪಘಾತ (Accident) ಸಂಭವಿಸಿದೆ. ಬೆಂಗಳೂರಿನ ಜನನಿಬಿಡ ಕತ್ತರಿಗುಪ್ಪೆ ಬಳಿ ಉದ್ಭವ ಆಸ್ಪತ್ರೆ ಎದುರೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕತ್ತರಿಗುಪ್ಪೆ ಸಮೀಪ ಕಾಫಿ ಕುಡಿದು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ನಾಲ್ವರ ಮೇಲೆ, ಅತಿ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿಗಳು (Pedestrians) ಮೇಲೆ ಹಾರಿ ಬಿದ್ದಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೆಲಸ ಮುಗಿಸಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದರು.

ಡಿಕ್ಕಿಯ ರಭಸಕ್ಕೆ ಹಾರಿ ಬಿದ್ದ ಪಾದಚಾರಿಗಳು

ಕಿರುತೆರೆಯಲ್ಲಿ ಸಹಾಯಕ ನಿರ್ದೇಶನ ಮಾಡುತ್ತಿದ್ದ ಮುಕೇಶ್ ಎಂಬಾತ ಬೆಳಗ್ಗೆ ಕೆಲಸವನ್ನು ಮುಗಿಸಿ ಮನೆಗೆ ಹೊರಟ್ಟಿದ್ದ. ಈ ವೇಳೆ ಕಾರು ವಿಪರೀತ ವೇಗದಲ್ಲಿ ಕತ್ರಿಗುಪ್ಪೆ ಜಂಕ್ಷನ್ ಗೆ ಬಂದಿದೆ ಕಾರು ಬರುವುದನ್ನು ಗಮನಿಸದ ಪಾದಚಾರಿಗಳು ರಸ್ತೆಯಲ್ಲಿ ಹೋಗುವಾಗ ಕಾರು ಬಂದ ವೇಗದಲ್ಲೇ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ದಿಕ್ಕಾಪಾಲಾಗಿ ಬಿದ್ದಿದ್ದಾರೆ. ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಎರಡು ದ್ವಿಚಕ್ರವಾಹನಗಳಿಗೆ ಮತ್ತು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಸಹಾಯಕ ನಿರ್ದೇಶಕ ಮುಕೇಶ್  ಕಾರು

ಚಾಲಕ ಮುಕೇಶ್ ಶಿವಮೊಗ್ಗ ಮೂಲದವನಾಗಿದ್ದು ಕನ್ನಡ ಸಿನಿಮಾ ಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾನೆ. ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ರವರ ಜೊತೆಗೆ ಕೆಲಸ ಮಾಡ್ತಿದ್ದ ಈತ 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಬೆಳಗ್ಗೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಹಾಗು ಮುಕೇಶ್ ಇಬ್ಬರು ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: Bengaluru: ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಕೇಸ್: 7 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಬೆಳಗ್ಗೆ 7.20ಗಂಟೆ ಸಮಯದಲ್ಲಿ ಕಾರ್ ನಂಬರ್ ಏಂ-51-ಒಏ5416ರ ಚಾಲಕ ಮುಕೇಶ್ ಎಂಬಾತನು ವಾಹನವನ್ನು ಕತ್ತರಿಗುಪ್ಪೆ ಜಂಕ್ಷನ್ ಕಡೆಯಿಂದ ಇಟ್ಟಮಡು ಜಂಕ್ಷನ್ ಕಡೆಗೆ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಈ ವೇಳೆ ಉದ್ಭವ ಆಸ್ಪತ್ರೆ ಬಳಿ ಇರುವ ಚಂದನ್ ಮೋಟಾರ್ ದ್ವಿಚಕ್ರ ವಾಹನ ಷೋರೂಂ ಬಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಚಿನ್, ಶಿವರಾಜು, ಸುರೇಶ್ ಮತ್ತು ಶೈಲೇಂದ್ರ ಎಂಬ 4ಜನ ಪಾದಚಾರಿಗಳಿಗೆ ಡಿಕ್ಕಿ ಮಾಡಿ, ಫುಟ್‌ಪಾತ್ ಮೇಲೆ ನಿಂತಿದ್ದ ಒಂದು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆೆದಿದೆ.ವಾಹನಗಳು ಜಂಖಗೊಂಡಿದ್ದು, ಅಪಘಾತಕ್ಕೀಡಾದ ಪಾದಚಾರಿ ಗಾಯಾಳು 28 ವರ್ಷದ ಸುರೇಶ್ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

ಇದನ್ನೂ ಓದಿ: CM Visit: ಮಳೆ ಹಾನಿ ಪ್ರದೇಶಗಳಿಗೆ ಬಸವರಾಜ ಬೊಮ್ಮಾಯಿ ವಿಸಿಟ್; ಅತ್ತ ಎಚ್‌ಡಿಕೆ ಪ್ರತ್ಯೇಕ ಭೇಟಿ

ಆಸ್ಪತ್ರೆಯಲ್ಲಿ ನಾಲ್ವರಿಗೆ ಚಿಕಿತ್ಸೆ

ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಸಚಿನ್, ಶಿವರಾಜು, ಸುರೇಶ್ ಎಂಬುವವರು ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದರು. ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಶೈಲೇಂದ್ರ ವಾಕಿಂಗ್ ಗೆ ಹೋಗಿದ್ದ. ಈ ನಾಲ್ವರು ಒಬ್ಬರ ಹಿಂದೊಬ್ಬರು ಎನ್ನುವಂತೆ ಹೆಜ್ಜೆ ಹಾಕುವ ವೇಳೆಯೇ ಭೀಕರ ಅಪಘಾತವಾಗಿ ಸಂಭವಿಸಿದೆ. ಅಪಘಾತವನ್ನು ನೋಡಿದ ಸ್ಥಳೀಯರು ಕ್ಷಣಕಾಲ ದಂಗಾಗಿಹೋಗಿದ್ದಾರೆ. ಇನ್ನು ಕೆಲವು ವಾಹನ ಚಾಲಕರು ಬಿದ್ದಿರುವ ಗಾಯಾಳುಗಳಿಗೆ ಸಹಾಯವನ್ನು ಮಾಡದೇ ನೋಡುತ್ತಾ ಮುಂದೆ ಸಾಗಿದ್ದಾರೆ.
Published by:Pavana HS
First published: