HOME » NEWS » State » ACCIDENT OCCURRED AT HAVERI AND FOUR PEOPLE DIED LG

ಹಾವೇರಿ: ಜಾತ್ರೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಟಿಪ್ಪರ್​ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಸಾವು

ಅಕ್ರಮ ಮರಳು ಅನ್ನೋದು ಒಂದೇ ಕುಟುಂಬದ ನಾಲ್ವರನ್ನ ಬಲಿ ಪಡೆದಿದೆ. ಇಬ್ಬರು ಪುಟ್ಟ ಮಕ್ಕಳು ಮತ್ತು ದಂಪತಿಯ ಸಾವು ಗ್ರಾಮಸ್ಥರನ್ನ ಕೆರಳಿಸಿದೆ. ನಾಲ್ವರ ಸಾವು ಸಂಬಂಧಿಕರಿಗೆ ಬರಸಿಡಿಲು ಬಡಿದಂತಾಗಿದೆ.

news18-kannada
Updated:February 26, 2021, 8:13 AM IST
ಹಾವೇರಿ: ಜಾತ್ರೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಟಿಪ್ಪರ್​ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಸಾವು
ಸಾಂದರ್ಭಿಕ ಚಿತ್ರ
  • Share this:
ಹಾವೇರಿ(ಫೆ.26): ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿ ಅಕ್ರಮ ಮರಳು ತುಂಬಿದ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುದೇನೂರು ಗ್ರಾಮದ ನಲ್ವತ್ತು ವರ್ಷದ ಸಿದ್ದಪ್ಪ ನಾಗೇನಹಳ್ಳಿ ಎಂಬಾತ ತನ್ನ ಮೂವತ್ತೆರಡು ವರ್ಷದ ಪತ್ನಿ ಅನುಸೂಯಮ್ಮ, ಹನ್ನೊಂದು ವರ್ಷದ ಮಗಳು ವನಿತಾ ಮತ್ತು ಒಂಬತ್ತು ವರ್ಷದ ಮಗಳು ಸುನೀತಾಳನ್ನ ಕರೆದುಕೊಂಡು ದುರ್ಗಾದೇವಿ ಜಾತ್ರೆಗೆ ಹೋಗಿದ್ದ. ಗುಡ್ಡದಹಳ್ಳಿ ಗ್ರಾಮದಿಂದ ಗುರುವಾರ ಬೈಕ್‌ನಲ್ಲಿ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನ ಕರೆದುಕೊಂಡು ಊರಿಗೆ ವಾಪಸ್ಸಾಗುವ ವೇಳೆ ಅಪಘಾತ ಸಂಭವಿಸಿದೆ.

ಇನ್ನೇನು ಕೆಲವೇ ಕೆಲವು ನಿಮಿಷಗಳು ಕಳೆದಿದ್ರೆ ಸಿದ್ದಪ್ಪ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮನೆ ತಲುಪ್ತಿದ್ದ. ಆದ್ರೆ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಬರ್ತಿದ್ದ ಟಿಪ್ಪರ ಲಾರಿ ಬೈಕ್ನಲ್ಲಿ ಹೋಗ್ತಿದ್ದ ಕುಟುಂಬದ ಪಾಲಿಗೆ ಯಮನಹಾಗೆ ಬಂದಿದೆ. ವೇಗವಾಗಿ ಬಂದ ಚಾಲಕ ಟಿಪ್ಪರ ಲಾರಿ ನಿಯಂತ್ರಿಸಲಾಗಿದೆ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದ್ರಿಂದ ಬೈಕ್ ನಲ್ಲಿ ದಂಪತಿ ಮತ್ತು ಮಕ್ಕಳ‌ ದೇಹಗಳು ಛಿದ್ರಛಿದ್ರವಾಗಿ ಹೋಗಿವೆ.

Bangalore Crime: ಬೆಂಗಳೂರಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರನ್ನು ಕೊಂದ ಕಾರು ಚಾಲಕ ಕೊನೆಗೂ ಸಿಕ್ಕಿಬಿದ್ದ!

ಅಕ್ರಮ ಮರಳು ಸಾಗಿಸುವ ಲಾರಿಯಿಂದ ಒಂದು ಕುಟುಂಬವೇ ನಾಶ..!

ಮುದೇನೂರು ಗ್ರಾಮದ ಬಳಿ ಇರೋ ತುಂಗಭದ್ರಾ ನದಿಯಿಂದ ನಿತ್ಯವೂ ಸಾಕಷ್ಟು ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗ್ತಿದೆ. ಈ ಹಿಂದೆಯೂ ಗ್ರಾಮದ ಬಳಿ ಇಂಥಾ ದುರ್ಘಟನೆಗಳು ನಡೆದಿವೆ. ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕುವಂತೆ ಗ್ರಾಮಸ್ಥರು ಹಲವಾರು ಬಾರಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆದ್ರೆ ಅಕ್ರಮ ಮರಳು ದಂಧೆಕೋರರು ಯಾವುದಕ್ಕೂ ಡೋಂಟ್ ಕೇರ್ ಅಂತಾ ನಿರಂತರವಾಗಿ ಮರಳು ದಂಧೆ ನಡೆಸ್ತಿದ್ದಾರೆ. ಅಕ್ರಮ ಮರಳು ಅನ್ನೋದು ಒಂದೇ ಕುಟುಂಬದ ನಾಲ್ವರನ್ನ ಬಲಿ ಪಡೆದಿದೆ. ಇಬ್ಬರು ಪುಟ್ಟ ಮಕ್ಕಳು ಮತ್ತು ದಂಪತಿಯ ಸಾವು ಗ್ರಾಮಸ್ಥರನ್ನ ಕೆರಳಿಸಿದೆ. ನಾಲ್ವರ ಸಾವು ಸಂಬಂಧಿಕರಿಗೆ ಬರಸಿಡಿಲು ಬಡಿದಂತಾಗಿದೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿವಿಧ ಸಂಘಟನೆಗಳ ಮುಖಂಡರು ಅಕ್ರಮ ಮರಳು ದಂಧೆಕೋರರ ವಿರುದ್ದ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈಮೀರೋ ಹಂತ ತಲುಪೋ‌ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲ್ದಂಡಿ ಹಾಗೂ ಪೊಲೀಸರ ತಂಡ ಸ್ಥಳೀಯರನ್ನ ಸಮಾಧಾನಿಸೋ ಪ್ರಯತ್ನ ಮಾಡಿದ್ದಾರೆ. ಆದ್ರೆ ಅಕ್ರಮ‌‌ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋವರೆಗೂ ಸ್ಥಳ ಬಿಟ್ಟು ಕದಲೋದಿಲ್ಲ ಅಂತಾ ಸ್ಥಳೀಯರು ಪಟ್ಟು ಹಿಡಿದು ಕುಳಿತಿದ್ದರು.
ನೀರು ಕುಡಿಯಲು ನಿಂತಿದ್ದ ಕುಟುಂಬವನ್ನ ಬಲಿ ಪಡೆದ ಯಮಸ್ವರೂಪಿ ಟಿಪ್ಪರ್ ಲಾರಿ...!

ಜಾತ್ರೆ ಮುಗಿಸಿ ಬೈಕ್ ಮೇಲೆ ಹೆಂಡತಿ ಮಕ್ಕಳನ್ನ ಕರೆದುಕೊಂಡು ಮನೆಗೆ ವಾಪಸಾಗುತ್ತಿದ್ದ ವೇಳೆ ಮಗಳಿಗೆ ನೀರು ಕುಡಿಸಲು ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿದ್ದನಂತೆ. ಮಗಳಿಗೆ ನೀರು ಕುಡಿಸುವಾಗ ವೇಗವಾಗಿ ಬಂದ ಟಿಪ್ಪರ್ ನಾಲ್ಕು ಜನರ ಮೇಲೆ ಹರಿದಿದೆ. ಕಣ್ಣು ಮುಚ್ಚಿ ತೆಗೆಯೋಸ್ಟರಲ್ಲಿ ಇಡೀ ಕುಟುಂಬವೇ ಇನ್ನಿಲ್ಲವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಕ್ರಮ ಮರಳು ದಂಧೆ ಅನ್ನೋದು ಬೈಕ್‌ನಲ್ಲಿ ಹೋಗ್ತಿದ್ದ ನಾಲ್ವರನ್ನ ಬಲಿ ಪಡೆದಿದೆ. ಇದು ಮೃತರ ಸಂಬಂಧಿಕರಲ್ಲಿ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ಆದ್ರೆ ಜಿಲ್ಲಾಡಳಿತ ಅಕ್ರಮ‌ ಮರಳು ದಂಧೆಗೆ ಬ್ರೇಕ್ ಹಾಕದಿದ್ರೆ ಇನ್ನಷ್ಟು ಅಮೂಲ್ಯ ಜೀವಗಳು ಅಕ್ರಮ ಮರಳು ದಂಧೆಕೋರರ ಟಿಪ್ಪರಗಳಿಗೆ ಬಲಿಯಾಗೋದ್ರಲ್ಲಿ ಎರಡು ಮಾತಿಲ್ಲ.

(ವರದಿ: ಮಂಜುನಾಥ್ ತಳವಾರ)
Published by: Latha CG
First published: February 26, 2021, 8:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories