ಯಲಹಂಕ ಬಳಿ ಕಾರು ಅಪಘಾತ; ರಾಜೇಂದ್ರ ಸಿಂಗ್ ಬಾಬು, ಜೈ ಜಗದೀಶ್ ಮಕ್ಕಳಿಗೆ ಗಾಯ

ರಾಜೇಂದ್ರ ಸಿಂಗ್ ಬಾಬು ಮಗಳು ರಿಷಿಕಾ ಸಿಂಗ್ ಮತ್ತು ಜೈ ಜಗದೀಶ್ ಮಗಳು ಅರ್ಪಿತಾ ಸ್ನೇಹಿತೆಯ ಹುಟ್ಟುಹಬ್ಬದ ಆಚರಣೆಗೆ ಮಾವಳ್ಳಿಪುರಕ್ಕೆ ತೆರಳಿದ್ದರು. ರಾತ್ರಿ ಸ್ನೇಹಿತರ ಜೊತೆ ಸಣ್ಣ ಪಾರ್ಟಿ ಮಾಡಿ ನಿನ್ನೆ ಬೆಳಗ್ಗೆ 5 ಗಂಟೆ ಸುಮಾರಿಗೆ ವಾಪಾಸ್ ಮನೆಗೆ ಬರುವಾಗ ಆ್ಯಕ್ಸಿಡೆಂಟ್​ ಆಗಿದೆ.

news18-kannada
Updated:July 30, 2020, 5:24 PM IST
ಯಲಹಂಕ ಬಳಿ ಕಾರು ಅಪಘಾತ; ರಾಜೇಂದ್ರ ಸಿಂಗ್ ಬಾಬು, ಜೈ ಜಗದೀಶ್ ಮಕ್ಕಳಿಗೆ ಗಾಯ
ಅರ್ಪಿತಾ- ರಿಷಿಕಾ ಸಿಂಗ್ ಮತ್ತು ಆ್ಯಕ್ಸಿಡೆಂಟ್ ಆದ ಕಾರು
  • Share this:
ಬೆಂಗಳೂರು (ಜು. 30): ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಗಳು ರಿಷಿಕಾ ಸಿಂಗ್ ಮತ್ತು ನಟ ಜೈ ಜಗದೀಶ್ ಮಗಳು ಅರ್ಪಿತಾ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ನಗರದ ಯಲಹಂಕ ಹೊರವಲಯದ ಮಾವಳ್ಳಿಪುರ ರಸ್ತೆಯಲ್ಲಿ ಅಪಘಾತವಾಗಿದ್ದು, ಘಟನೆಯಲ್ಲಿ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಶೇಷಾದ್ರಿಪುರಂನ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಜೇಂದ್ರ ಸಿಂಗ್ ಬಾಬು ಮಗಳಾದ ರಿಷಿಕಾ ಸಿಂಗ್ ಮತ್ತು ಜೈ ಜಗದೀಶ್ ಮಗಳು ಅರ್ಪಿತಾ ಇಬ್ಬರೂ ಸ್ನೇಹಿತೆಯ ಹುಟ್ಟುಹಬ್ಬದ ಆಚರಣೆ ಸಲುವಾಗಿ ಮಾವಳ್ಳಿಪುರಕ್ಕೆ ತೆರಳಿದ್ದರಂತೆ. ಮಂಗಳವಾರ ರಾತ್ರಿ ಸ್ನೇಹಿತರ ಜೊತೆ ಸಣ್ಣ ಪಾರ್ಟಿ ಮಾಡಿ ಬಳಿಕ ನಿನ್ನೆ ಬೆಳಗ್ಗೆ 5 ಗಂಟೆ ಸುಮಾರಿಗೆ ವಾಪಾಸ್ ಮನೆಗೆ ಹೊರಟಿದ್ದಾರೆ. ಇಬ್ಬರು ಫಾರ್ಚುನರ್ ಕಾರಿನಲ್ಲಿ ಮನೆಗೆ ಬರುತ್ತಿದ್ದಾಗ ಕಾರನ್ನು ಸ್ನೇಹಿತ ಅರ್ಯ ಎಂಬಾತ ಚಾಲನೆ ಮಾಡುತ್ತಿದ್ದ. ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದುದರಿಂದ ಮಾವಳ್ಳಿಪುರ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದ ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: Bangalore Crime: ಬೆಂಗಳೂರಲ್ಲಿ 96 ಲಕ್ಷ ರೂ. ಮೌಲ್ಯದ ಅಮಾನ್ಯೀಕರಣಗೊಂಡ ನೋಟುಗಳು ಸೀಜ್

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಕಾರಿನಲ್ಲಿದ್ದ ರಿಷಿಕಾ ಸಿಂಗ್ ಮತ್ತು ಅರ್ಪಿತಾ ಕೈ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯರು ಆ್ಯಂಬುಲೆನ್ಸ್​ ಕರೆಯಿಸಿ ಆಸ್ಪತ್ರೆಗೆ ಕಳಿಸಿದ್ದಾರೆ. ಕಾರಿನಲ್ಲಿದ್ದ ಆರ್ಯ ಎಂಬಾತನಿಗೂ ಗಾಯಗಳಾಗಿದ್ದು, ಸ್ನೇಹಿತನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಪಘಾತದ ಬಳಿಕ ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರು ವೇಗವಾಗಿ ಚಲಾಯಿಸಿದ್ದೇ ಅಪಘಾತವಾಗಲು ಕಾರಣ ಎನ್ನಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರನ್ನು ನಿನ್ನೆಯೇ ಸ್ಥಳದಿಂದ ಜಪ್ತಿ ಮಾಡಲಾಗಿದೆ.

ಗಾಯಾಳು ರಿಷಿಕಾ ಸಿಂಗ್ ಮತ್ತು ಅರ್ಪಿತಾ ಶೇಷಾದ್ರಿಪುರಂ ಅಪೋಲೊ ಅಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಪ್ರಕರಣವಾಗಿದ್ದರಿಂದ ಅಸ್ಪತ್ರೆಯವರು ಪೊಲೀಸರಿಗೆ ಮೆಮೋ ಕಳಿಸಿದ್ದಾರೆ. ಆ ಬಳಿಕ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆ ಪಡೆಯಲು ಮುಂದಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಕಾರು ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿದೆ. ಯುವಕನೊರ್ವ ಕಾರು ಚಾಲನೆ ಮಾಡುತ್ತಿದ್ದ. ಈ ಬಗ್ಗೆ ತನಿಖೆ ನಡೆಸಲು ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿಯವರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
Published by: Sushma Chakre
First published: July 30, 2020, 4:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading