ಹುಬ್ಬಳ್ಳಿ: ಆ ಶವಾನ (Dead Body) ನಾನು ನೋಡಲ್ಲ.. ನಾನು ಶವಾಗಾರಕ್ಕೆ ಬರೋಲ್ಲ.. ಹೀಗೆ ಮಹಿಳೆಯೊಬ್ಬರ (Women) ಆಕ್ರಂದನ (Crying) ಎಂಥವರ ಕರುಳನ್ನೂ ಕಿತ್ತು ಬರುವಂತೆ ಮಾಡುತ್ತಿತ್ತು. ಧಾರವಾಡ (Dharwad) ಬಳಿ ನಡೆದ ಕ್ರೂಸರ್ ಅಪಘಾತದಲ್ಲಿ (Accident) ಮಗನನ್ನು (Son) ಕಳೆದುಕೊಂಡ ಅನ್ನಪೂರ್ಣ ಎಂಬ ಮಹಿಳೆಗೆ ಕಿಮ್ಸ್ ಗೆ ದಾಖಲಿಸಿದ್ದ ಚಿಕ್ಕಮ್ಮಳೂ (Aunty) ಸಾವನ್ನಪ್ಪಿರೋ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಈ ವೇಳೆ ಶವದ ಪಂಚನಾಮೆಗೆಂದು ಪೊಲೀಸರು (Police) ಮಹಿಳೆಯನ್ನು ಕರೆದೊಯ್ಯಲು ಯತ್ನಿಸಿದಾಗ, ನಾನು ಶವಾಗಾರದೊಳಗೆ ಬರೊಲ್ಲ ಅಂತ ಪಟ್ಟು ಹಿಡಿದಳು. ಧಾರವಾಡ ಬಳಿ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಅನ್ನಪೂರ್ಣ ಎಂಬುವರ ಮಗ ಮಹೇಶ್ವರ ಎಂಬ 11 ವರ್ಷದ ಬಾಲಕನೂ ಸಾವನ್ನಪ್ಪಿದ್ದಾನೆ. ತನ್ನ ಮಗನ ಸಾವಿನ ಸುದ್ದಿಯ ಆಘಾತದಿಂದ ಚೇತರಿಸಿಕೊಳ್ಳೋ ಮುನ್ನವೇ ಅನ್ನಪೂರ್ಣಳಿಗೆ ಚಿಕ್ಕಮ್ಮಳ ಸಾವಿನ ಸುದ್ದಿಯೂ ಬರಸಿಡಿಲಿನಂತೆ ಅಪ್ಪಳಿಸಿದೆ.
ಸಾವಿನ ಸಂಖ್ಯೆ 9ಕ್ಕೆ ಏರಿಕೆ
ಧಾರವಾಡ ಬಳಿ ನಡೆದ ಕ್ರೂಷರ್ ಅಪಘಾತ ಪ್ರಕರಣದಲ್ಲಿ ಮೃತರ ಸಂಖ್ಯೆ ಒಂಬತಕ್ಕೇರಿದೆ. ಸ್ಥಳದಲ್ಲಿಯೇ ಏಳು ಜನ ಸಾವನ್ನಪ್ಪಿ, 13 ಜನ ಗಾಯಗೊಂಡಿದ್ದರು. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 9 ಕ್ಕೇರಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಗಂಭೀರ ಗಾಯಗೊಂಡವರಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಕಿಮ್ಸ್ ನಲ್ಲಿ ಮೃತಪಟ್ಟವರನ್ನು ಚೆನ್ನವ್ವ(45) ಹಾಗು ಮನುಶ್ರೀ ದಾಸನಕೊಪ್ಪ(16) ಎಂದು ಗುರುತಿಸಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ.
ಒಂದೆಡೆ ಮಗ ಸಾವು, ಮತ್ತೊಂದೆಡೆ ಚಿಕ್ಕಮ್ಮನ ಮರಣ
ಮಗನ ಜೊತೆಗೆ ಚಿಕ್ಕಮ್ಮಳನ್ನೂ ಕಳೆದುಕೊಂಡಿರೋ ಅನ್ನಪೂರ್ಣ, ಶವಗಳನ್ನು ನೋಡೋಕೆ ನಿರಾಕರಿಸಿದ್ದಾರೆ. ಶವ ಗುರುತಿಸೋಕೆ ಪೊಲೀಸರು ಕರೆದಾಗ ಶವಾಗಾರದ ಒಳಗೆ ಹೋಗೋಕೆ ನಿರಾಕರಿಸಿದ ಅನ್ನಪೂರ್ಣ, ನನಗೆ ಅದನ್ನ ನೋಡೋಕೆ ಆಗಲ್ಲ, ನಾನು ಬರಲ್ಲ ಎಂದು ಪಟ್ಟು ಹಿಡಿದಳು. ಪೊಲೀಸರ ಮನವೊಲಿಕೆ ನಂತರ ಶವಾಗಾರದೊಳಗೆ ತೆರಳಿದ ಅನ್ನಪೂರ್ಣ, ಶವಗಳನ್ನು ಗುರುತಿಸಿ, ಪೊಲೀಸರ ಪಂಚನಾಮೆಗೆ ಸಹಕರಿಸಿದಳು. ನಂತರ ಶವಾಗಾರದ ಬಳಿಯೇ ಕುಳಿತ ಮೃತರನ್ನು ನೆನೆರಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಸಂಬಂಧಿಕರು ಆಕೆಯನ್ನು ಸಮಾಧಾನಪಡಿಸಲು ಹರಸಾಹಸಪಡುವಂತಾಯಿತು.
ಇದನ್ನೂ ಓದಿ: Accident: ಮದುವೆಗೆ ಹೊರಟವರಿಗೆ ಮರದ ರೂಪದಲ್ಲಿ ಕಾದಿತ್ತು ಸಾವು! ಕ್ರೂಸರ್ ಡಿಕ್ಕಿಗೆ 7 ಮಂದಿ ಬಲಿ
ಜನಪ್ರತಿನಿಧಿಗಳ ವಿರುದ್ಧ ಸಂಬಂಧಿಕರ ಆಕ್ರೋಶ
ಪರೀಕ್ಷೆಯ ನಂತರ ಶವಗಳನ್ನು ಸಾಗಿಸೋ ವೇಳೆ ಮೃತರ ಸಂಬಂಧಿಕರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶವಗಳನ್ನು ಆಂಬ್ಯುಲೆನ್ಸ್ ಮೂಲಕ ತೆಗೆದುಕೊಂಡು ಹೋಗುವ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಐಪಿ ಜನ ಸತ್ರೆ ಮಾತ್ರ ಜನಪ್ರತಿನಿಧಿಗಳು ಓಡೋಡಿ ಬರ್ತಾರೆ. ಆದ್ರೆ ರೈತರ ಕುಟುಂಬದವರು ಸತ್ರೆ ಮೂಸಿ ನೋಡಲ್ಲ. ರೈತರೆಂದರೆ ಲೆಕ್ಕಕ್ಕಿಲ್ಲವೆಂದು ಮೃತರ ಸಂಬಂಧಿ ಬಿ.ತಡಕೋಡ ಆಕ್ರೋಶ ವ್ಯಕ್ತಪಡಿಸಿದರು.
ನಿಧಾನಕ್ಕೆ ಹೋಗೆಂದ್ರೂ ಕೇಳದ ಚಾಲಕ
ನಿಧಾನಕ್ಕೆ ಹೋಗು ಅಂದ್ರು ಚಾಲಕ ಕೇಳಲೇ ಇಲ್ಲ. ಅತಿಯಾದ ವೇಗದಲ್ಲಿ ಹೋಗಿದ್ರಿಂದ ಅಪಘಾತ ಸಂಭವಿಸಿದೆ. ಇವತ್ತು ಮದುವೆ ಕಾರ್ಯ ಇತ್ತು. ನಿಶ್ಚಿತಾರ್ಥ ಕಾರ್ಯಕ್ಕೆ ಹೋಗಿ ವಾಪಸ್ಸಾಗುವ ವೇಳೆ ಈ ಘಟನೆ ನಡೆದಿದೆ. ಮದ್ಯ ಸೇವಿಸಿ ವಾಹನವನ್ನು ಅತಿಯಾದ ವೇಗದಲ್ಲಿ ಚಲಾಯಿಸಿದ್ದರಿಂದ ಅಪಘಾತವಾಗಿ ಇಷ್ಟೆಲ್ಲಾ ಅವಘಡ ಸೃಷ್ಟಿಸಿದೆ ಎಂದು ಗಾಯಾಳುಗಳು ಕಣ್ಣೀರು ಹಾಕಿದ್ದಾರೆ. ಸಂಬಂಧಿಕರು ಕಿಮ್ಸ್ ಗೆ ಬೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬೋ ಕಾರ್ಯ ಮಾಡುತ್ತಿದ್ದಾರೆ.
ಸೂತಕದ ಮನೆಯಾದ ಮದುವೆ ಮನೆ
ಧಾರವಾಡ ನಿಗದಿ ಗ್ರಾಮದಲ್ಲಿ ಮದುವೆ ಮಾಡಕೆ ತೀರ್ಮಾನಿಸಲಾಗಿತ್ತಾದರೂ, ಮಳೆ ಕಾರಣಕ್ಕೆ ಮನಸೂರು ಗ್ರಾಮದ ರೇವಣಸಿದ್ಧೇಶ್ವರ ಮಠಕ್ಕೆ ಸ್ಥಳಾಂತರಿಸಲಾಗಿತ್ತು. ಇಂದು ಮದುವೆ ನಿಗದಿಯಾಗಿತ್ತು. ನಿನ್ನೆ ರಾತ್ರಿ ನಿಶ್ಚಿತಾರ್ಥ ಕಾರ್ಯ ನಡೆಸಲಾಗಿತ್ತು. ನಿಶ್ಚಿತಾರ್ಥ ಮುಗಿಸಿಕೊಂಡು ವಾಪಸ್ಸಾಗೋ ಖುಷಿಯಲ್ಲಿದ್ದವನ್ನು ಜವರಾಯ ಮಸಣಕ್ಕೆ ಒಯ್ದಿದ್ದಾನೆ. ಮದುವೆ ಮನೆಯಲ್ಲಿ ಸದ್ಯ ಸೂತಕದ ವಾತಾವರಣ ಸೃಷ್ಟಿಯಾಗಿದೆ.
ನಿಶ್ಚಿತಾರ್ಥ ಮುಗಿಸಿ ಬರುವಾಗ ಅಪಘಾತ
ಮದುವೆಗೆ ಮುಂಚೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದಿದ್ದು, ಅಯ್ಯೋ ದುರ್ವಿಧಿಯೇ ಎಂದು ಸಂಬಂಧಿಕರು ದೇವರಿಗೆ ಶಾಪ ಹಾಕುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ವಿವಿಧ ವಯೋಮಾನದ ಒಂಬತ್ತು ಜನರು ಸಾವನ್ನಪ್ಪಿರೋದು ಸಂಬಂಧಿಕರನ್ನು ದಿಕ್ಕೇ ತೋಚದವರನ್ನಾಗಿಸಿದೆ.
ಇದನ್ನೂ ಓದಿ: Domestic Help Thrashed: ಮನೆಕೆಲಸದಾಕೆಯನ್ನು ಅಮಾನುಷವಾಗಿ ಥಳಿಸಿ ಕ್ರೌರ್ಯ ಮೆರೆದ ದಂಪತಿ
ನಿಶ್ಚಿತಾರ್ಥಕ್ಕೆ ಅಂತ ಎಲ್ಲರೂ ಹೋಗಿದ್ರು. ಈ ವೇಳೆ ಇಂತಹ ದುರ್ಘಟನೆ ಆಗಿದೆ.
ಕ್ರೂಸರ್ ಚಾಲಕ ಎಲ್ಲಿ ಹೋದನೋ ಗೊತ್ತಿಲ್ಲ. ಗಾಯಾಳುಗಳನ್ನು ಕರ್ಕೊಂಡು ನಾವು ಕಿಮ್ಸ್ ಗೆ ಬಂದಿದ್ದೇವೆ. ಕೆಲವರ ಸ್ಥಿತಿ ಗಂಭೀರವಾಗಿದೆ, ಮದುವೆ ಕಾರ್ಯಕ್ಕೆ ಹೋದಾಗ ಹೀಗಾಗಿದೆ ಎಂದು ಕುಟುಂಬದ ಸದಸ್ಯರು ಕಣ್ಣೀರು ಹಾಕಿದ್ದಾರೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಅಂತ ಸಂಬಂಧಿಕರು ಪ್ರಾರ್ಥಿಸಿದ್ದಾರೆ. ಉಳಿದ ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ