ಬೆಂಗಳೂರು (ನ.29): ರಾಜ್ಯ ರಾಜಧಾನಿಯಲ್ಲಿ ಅಪಘಾತಗಳ (Accident) ಸಂಖ್ಯೆ ಕಡಿಮೆ ಆಗ್ತಾನೆ ಇಲ್ಲ. ಇನ್ನು ಕಿಲ್ಲರ್ ಬಿಎಂಟಿಸಿ ಬಸ್ಗೆ (BMTC Bus) ಇಂದು ಮತ್ತಿಬ್ಬರು ಬಲಿಯಾಗಿದ್ದಾರೆ. ನಗರದ ಮಾಗಡಿ ರಸ್ತೆ ಜಂಕ್ಷನ್ ಬಳಿ ಬಿಎಂಟಿಸಿ ಬಸ್ (BMTC Bus) ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಮಂಜುನಾಥ್ (25), ಶಿವರಾಜ್ (29) ಮೃತ ದುರ್ದೈವಿಗಳು. ಮೃತರು ಗೊಲ್ಲರಹಟ್ಟಿಯ ಇಂದಿರಾ ಕಾಲೋನಿ (Indira Colony) ನಿವಾಸಿಗಳು ಎಂದು ತಿಳಿದು ಬಂದಿದೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿ ಬೈಕ್ ಡಿಕ್ಕಿ, ಸವಾರ ಸಾವು
ಬೆಂಗಳೂರಿನ ರಸ್ತೆಗಳು ಎಷ್ಟು ಸೇಫ್ ಅನ್ನೋ ಪ್ರಶ್ನೆ ಮತ್ತೆ ಮತ್ತೆ ಸಾರ್ವಜನಿಕರ ಮುಂದೆ ಬರುತ್ತಿದೆ. ಒಂದು ಕಡೆ ರಸ್ತೆಗುಂಡಿಗಳು ಯಮದೂತರಾಗಿ ಕುಳಿತಿದ್ರೆ, ಮತ್ತೊಂದೆಡೆ ಬಿಎಂಟಿಸಿ ಬಸ್ ಯಾವಾಗ ಬಂದು ಡಿಕ್ಕಿ ಹೊಡೆಯುತ್ತೆ ಅನ್ನೋ ಆತಂಕದಲ್ಲಿಯೇ ಜನರು ಪ್ರಯಾಣಿಸಬೇಕಾಗಿದೆ. ನ 3ರಂದು ರಾತ್ರಿ ಬಿಎಂಟಿಸಿ ಬೈಕ್ ಸವಾರನೋರ್ವನನ್ನು ಬಲಿ ಪಡೆದುಕೊಂಡಿದೆ. ಆಕ್ರೋಶಗೊಂಡ ಜನರು ಬಿಎಂಟಿಸಿ ಚಾಲಕನನ್ನ ಹಿಡಿದು ಥಳಿಸಿದ್ದಾರೆ.
ಪ್ರಮೋದ್ ಮೃತ ಬೈಕ್ ಸವಾರ
ಪ್ರಮೋದ್ ಮೃತ ಬೈಕ್ ಸವಾರ. ಕಾಮಾಕ್ಷಿಪಾಳ್ಯ ಬಳಿಯ ಸುಮನ್ ಹಳ್ಳಿ ಬ್ರಿಡ್ಜ್ ಬಳಿ ನ 3ರಂದು ರಾತ್ರಿ ಸುಮಾರು 10 ಗಂಟೆಗೆ ಅಪಘಾತ ಸಂಭವಿಸಿದೆ. 401FA ಸಂಖ್ಯೆಯ ಬಿಎಂಟಿಸಿ ಬಸ್ ಸುಮನಹಳ್ಳಿಯಿಂದ ಲಗ್ಗರೆ ಕಡೆ ತೆರಳುತ್ತಿತ್ತು. ಡಿಪೋ ನಂಬರ್ 4ಕ್ಕೆ ಸೇರಿದ ಬಸ್ ಇದಾಗಿದೆ. ಈ ವೇಳೆ ಮುಂದೆ ಹೋಗುತ್ತಿದ್ದ ಬೈಕ್ಗೆ ಬಸ್ ಡಿಕ್ಕಿ ಹೊಡೆದಿದೆ.
ಬೈಕ್ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಪ್ರಮೋದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಮೃತನಾಗಿರುವ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಜನರು ಚಾಲಕನ ಶರ್ಟ್ ಕಳಚಿ ಹಲ್ಲೆ ನಡೆಸಿದ್ದಾರೆ. ಚಾಲಕ ನನ್ನದೇನೂ ತಪ್ಪಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
15 ವರ್ಷದ ಬಾಲಕಿ ಸಾವು
ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದ್ದು, ಬಿಎಂಟಿಸಿ ಬಸ್ ಹರಿದು 15 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಕೆ ಆರ್ ಪುರಂ ಟಿ ಸಿ ಪಾಳ್ಯದಲ್ಲಿ ನಡೆದಿತ್ತು. ಲಾವ್ಯಾಶ್ರೀ ಮೃತ ವಿದ್ಯಾರ್ಥಿನಿಯಾಗಿದ್ದಾರೆ. ಟಿ ಸಿ ಪಾಳ್ಯದಿಂದ ಭಟ್ಟರಹಳ್ಳಿಗೆ ಹೋಗುವ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ಹಿಂಬದಿ ಕುಳಿತ ಬಾಲಕನಿಗೂ ತೀವ್ರ ಗಾಯವಾಗಿದ್ದು, ಬಾಲಕ ಯಾಶ್ವಿನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಕೆ ಆರ್ ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಪ್ರಿಯಾದರ್ಶಿನಿ (45) ಸ್ಕೂಟಿಯಲ್ಲಿ ಇಬ್ಬರು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ರು. ಹಿಂಬದಿ ಬಾಲಕಿ ಲಾವ್ಯಶ್ರೀ ಹಾಗೂ ಬಾಲಕ ಯಾಶ್ವಿನ್ ಕೂತಿದ್ರು. ಭಟ್ಟರಹಳ್ಳಿ ಸಿಗ್ನಲ್ ಬಳಿ ಗಾಡಿ ಸ್ಕಿಡ್ ಆಗಿದೆ. ತಾಯಿ-ಮಗ ಎಡ ಭಾಗಕ್ಕೆ ಬಿದ್ದಿದ್ದಾರೆ.
ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು
ಬಸ್ ಹತ್ತುವಾಗ ಆಯತಪ್ಪಿ ಬಿದ್ದಿದ್ದ ಶಿಲ್ಪಾ ಮೇಲೆ ಬಿಎಂಟಿಸಿ ಬಸ್ (BMTC Bus) ಹರಿದಿತ್ತು. ಅಕ್ಟೋಬರ್ 11ರಂದು ಅಪಘಾತ (Accident) ನಡೆದಿತ್ತು. ಈ ಘಟನೆ ಬಳಿಕ ರಸ್ತೆಗೆ ಇಳಿದಿದ್ದ ವಿವಿ ವಿದ್ಯಾರ್ಥಿಗಳು (Bangalore university Student Protest) ಖಾಸಗಿ ಬಸ್ (Private Bus) ಓಟಾಟಕ್ಕೆ ಬ್ರೇಕ್ ಹಾಕಬೇಕೆಂದು ದೊಡ್ಡ ಪ್ರತಿಭಟನೆ ಕೂಡ ನಡೆಸಿದ್ದರು. ಶಿಲ್ಪಾ ಆರೋಗ್ಯ ಚೇತರಿಕೆಗಾಗಿ ಸಾವಿರಾರರು ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಿಲ್ಪಾ ಮೃತರಾದ್ರು..