ಬಿಎಂಟಿಸಿ ಬಸ್​ಗೆ ಬೈಕ್​ ಡಿಕ್ಕಿ; ಸ್ಥಳದಲ್ಲೇ ಮೂವರು ಯುವಕರ ದಾರುಣ ಸಾವು

ಬಸ್ಸಿನ ಟ್ಯಾಂಕ್​ಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಬಸ್​ಗೆ ಬೆಂಕಿ ಬಿದ್ದಿದೆ. ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ಧಾರೆ. ಅದೃಷ್ಟವಶಾತ್​ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

news18
Updated:February 11, 2019, 5:06 PM IST
ಬಿಎಂಟಿಸಿ ಬಸ್​ಗೆ ಬೈಕ್​ ಡಿಕ್ಕಿ; ಸ್ಥಳದಲ್ಲೇ ಮೂವರು ಯುವಕರ ದಾರುಣ ಸಾವು
ಪ್ರಾತಿನಿಧಿಕ ಚಿತ್ರ
news18
Updated: February 11, 2019, 5:06 PM IST
ಬೆಂಗಳೂರು,(ಫೆ.11): ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್​ಗಳು ಯಮಸ್ವರೂಪಿಯಾಗುತ್ತಿದ್ದು, ಅನೇಕ ಜೀವಗಳನ್ನು ಬಲಿ ಪಡೆಯುತ್ತಿವೆ. ಒಂದೆಡೆ ಪಾದಾಚಾರಿಗಳು ಪ್ರಾಣ ಕಳೆದುಕೊಂಡರೆ, ಮತ್ತೊಂದೆಡೆ ಬೈಕ್​ ಸವಾರರು ಬಿಎಂಟಿಸಿ ಬಸ್​ಗಳಿಗೆ ಬಲಿಯಾಗುತ್ತಿದ್ಧಾರೆ. ಇಂತಹ ಘಟನೆಗಳು ಸಿಲಿಕಾನ್​ ಸಿಟಿಯಲ್ಲಿ ಸಂಭವಿಸುತ್ತಲೇ ಇವೆ. ಇಂದು ಬೆಂಗಳೂರಿನ ಹೊರವಲಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿಗೆರೆ ಬಳಿ‌ ಭೀಕರ ಅಪಘಾತ ಸಂಭವಿಸಿದೆ.  ಬಿಎಂಟಿಸಿ ಬಸ್​ಗೆ ಬೈಕ್​ ಡಿಕ್ಕಿಯಾಗಿ  ಬೈಕ್​ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ಧಾರೆ.

ಕುಡಿದ ಮತ್ತಿನಲ್ಲಿ ಶಾಲಾ ಬಸ್​ ಚಾಲನೆ; ಡಿಕ್ಕಿಯಾಗಿ 13 ವಿದ್ಯಾರ್ಥಿಗಳಿಗೆ ಗಾಯ

ಮೃತರನ್ನು ಪ್ರದೀಪ್, ಅವಿನಾಶ ಹಾಗೂ ಬಸವ ಎಂದು ಗುರುತಿಸಲಾಗಿದ್ದು, ಮಡಿವಾಳ, ಹಾರೋಹಳ್ಳಿ ಹಾಗೂ ಉತ್ತರಹಳ್ಳಿ ನಿವಾಸಿಗಳು ಎನ್ನಲಾಗಿದೆ. ಬಸ್ಸಿನ ಟ್ಯಾಂಕ್​ಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಬಸ್​ಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ.  ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್​ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೈಕ್​ನಲ್ಲಿದ್ದ 25 ವರ್ಷದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ಧಾರೆ. ಮೃತದೇಹಗಳನ್ನು  ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಿಎಂಟಿಸಿ ಆಧಿಕಾರಿಗಳು, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ಧಾರೆ. ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನ ಬಾಗಲೂರು ಬಳಿ ಕುಡಿದ ಮತ್ತಿನಲ್ಲಿ ಶಾಲಾ ಬಸ್​ ಚಾಲನೆ ಮಾಡಿದ ಪರಿಣಾಮ ಇನ್ನೊಂದು ಬಸ್​ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 13 ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಒಬ್ಬ ವಿದ್ಯಾರ್ಥಿಗೆ ಕಾಲು ಮುರಿದು ಆತನ ಸ್ಥಿತಿ ಗಂಭೀರವಾಗಿತ್ತು. ಬಸ್​ ಚಾಲಕ ಪರಾರಿಯಾಗಿದ್ದ.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...