HOME » NEWS » State » ACCIDENT 2 DEATH IN CHIKMANGLORE MAK

ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಟ್ರಾಕ್ಟರ್; ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾವು

ಬೆಟ್ಟದ ಮಳಲಿ ಗ್ರಾಮದ ನಿವಾಸಿಗಳಾದ ಟ್ರಾಕ್ಟರ್ ಚಾಲಕ 38 ವರ್ಷದ ಮಂಜುನಾಥ್, 62 ವರ್ಷದ ಗೋವಿಂದಶೆಟ್ಟಿ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

news18-kannada
Updated:February 8, 2020, 4:08 PM IST
ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಟ್ರಾಕ್ಟರ್; ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾವು
ಪ್ರಾತಿನಿಧಿಕ ಚಿತ್ರ
  • Share this:
ಚಿಕ್ಕಮಗಳೂರು (ಫೆಬ್ರವರಿ 08) ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ತಿರುವಿನಲ್ಲಿದ್ದ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿರುವ  ಘಟನೆ ಚಿಕ್ಕಮಗಳೂರು ತಾಲೂಕಿನ ಕಣತಿ ಗ್ರಾಮದ ಬೆಟ್ಟದ ಮಳಲಿ ತಿರುವಿನಲ್ಲಿ ನಡೆದಿದೆ.

ಬೆಟ್ಟದ ಮಳಲಿ ಗ್ರಾಮದ ನಿವಾಸಿಗಳಾದ ಟ್ರಾಕ್ಟರ್ ಚಾಲಕ 38 ವರ್ಷದ ಮಂಜುನಾಥ್, 62 ವರ್ಷದ ಗೋವಿಂದಶೆಟ್ಟಿ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಟ್ರಾಕ್ಟರ್ ಕಣತಿಯಿಂದ ಬೆಟ್ಟದ ಮಳಲಿಗೆ ಬರುವ ವೇಳೆಯಲ್ಲಿ ಟ್ರಾಕ್ಟರ್ ಚಾಲಕನ ನಿಯಂತ್ರಣಕ್ಕೆ ಸಿಕ್ಕಲ್ಲ. ಈ ವೇಳೆ ತಿರುವಿನಲ್ಲಿದ್ದ ಮನೆಗೆ ಟ್ರ್ಯಾಕ್ಟರ್​ ಏಕಾಏಕಿ ನುಗ್ಗಿದೆ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನಪ್ಪಿದ್ದಾರೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ದೇಶದ ಆರ್ಥಿಕ ಸ್ಥಿತಿ ಶೋಚನೀಯ ಹಂತ ತಲುಪಿದೆ, ಪ್ರತಿ ವರ್ಷ 2 ಕೋಟಿ ಉದ್ಯೋಗ ನಷ್ಟವಾಗುತ್ತಿದೆ; ಎಂ.ಬಿ. ಪಾಟೀಲ್
Youtube Video
First published: February 8, 2020, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories