HOME » NEWS » State » ACB TRAPS NURSE IN KC GENERAL HOSPITAL WHILE TAKING BRIBE SESR

ಲಂಚ ನೀಡದಿದ್ದರೆ ಹೆರಿಗೆ ಇಲ್ಲ ಎನ್ನುತ್ತಿದ್ದ ಕೆಸಿ ಜನರಲ್​ ಆಸ್ಪತ್ರೆ ನರ್ಸ್​ ಎಸಿಬಿ ಬಲೆಗೆ

ಆಸ್ಪತ್ರೆಗೆ ಎಸಿಬಿ ಅಧಿಕಾರಿಗಳು ಭೇಟಿ ನೀಡಿದಾಗ ನರ್ಸ್​ ಕೋಕಿಲ ರೋಗಿ ಬಳಿಯಿಂದ 500 ಪಡೆಯುತ್ತಿದ್ದರು

news18-kannada
Updated:October 6, 2020, 9:35 PM IST
ಲಂಚ ನೀಡದಿದ್ದರೆ ಹೆರಿಗೆ ಇಲ್ಲ ಎನ್ನುತ್ತಿದ್ದ ಕೆಸಿ ಜನರಲ್​ ಆಸ್ಪತ್ರೆ ನರ್ಸ್​ ಎಸಿಬಿ ಬಲೆಗೆ
ಲಂಚ ಪಡೆಯುತ್ತಿದ್ದ ನರ್ಸ್​​
  • Share this:
ಬೆಂಗಳೂರು (ಅ.6): ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗುತ್ತಿದ್ದ ಗರ್ಭಿಣಿ ಮಹಿಳೆಯರ ಬಳಿ ಲಂಚದ ಹಣ ಪಡೆಯುತ್ತಿದ್ದ ನರ್ಸ್​ನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೆಸಿ ಜನರಲ್​ ಆಸ್ಪತ್ರೆಯ ನರ್ಸ್​ ಕೋಕಿ ಲಂಚ ಪಡೆಯುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಆಸ್ಪತ್ರೆಗೆ ಬರುತ್ತಿದ್ದ ಗರ್ಭಿಣಿ ಮಹಿಳೆಯರ ಬಳಿ ಇಲ್ಲಿನ ನರ್ಸ್​ಗಳು ಹಣದ ಬೇಡಿಕೆ ಇಡುತ್ತಿದ್ದರು. ಪ್ರತಿದಿನ 700 ರೂ ಕೊಡದಿದ್ದರೆ, ಚಿಕಿತ್ಸೆ ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು.

ಆಶಾ ಮತ್ತು ಲಲಿತ ಎಂಬ ನರ್ಸ್​ಗಳು ಲಂಚ ದಾಹಕ್ಕೆ ಬೇಸತ್ತ ಗರ್ಭಿಣಿ ಮಹಿಳೆಯ ಪತಿಯೊಬ್ಬರು ಈ ಕುರಿತು ಎಸಿಬಿಗೆ ದೂರು ನೀಡಿದ್ದರು. ಇದರ ಅನ್ವಯ ಇಂದು ಆಸ್ಪತ್ರೆಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಆಸ್ಪತ್ರೆಗೆ ಎಸಿಬಿ ಅಧಿಕಾರಿಗಳು ಭೇಟಿ ನೀಡಿದಾಗ ನರ್ಸ್​ ಕೋಕಿಲ ರೋಗಿ ಬಳಿಯಿಂದ 500 ಪಡೆಯುತ್ತಿದ್ದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ  ಪಡೆದಿದ್ದಾರೆ. ಈ ಕುರಿತು ಬೆಂಗಳೂರು ಘಟಕ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
Published by: Seema R
First published: October 6, 2020, 9:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading