• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಿಬಿಎಂಪಿ ಅಧಿಕಾರಿ ಲಂಚ ಸ್ವೀಕಾರ ಪ್ರಕರಣ: ಮನೆಯಲ್ಲಿ ಸಿಕ್ಕಿತ್ತು 480ಕ್ಕೂ ಹೆಚ್ಚು ಕಡತ, ನೂರಾರು ಮದ್ಯದ ಬಾಟಲ್​ಗಳು!

ಬಿಬಿಎಂಪಿ ಅಧಿಕಾರಿ ಲಂಚ ಸ್ವೀಕಾರ ಪ್ರಕರಣ: ಮನೆಯಲ್ಲಿ ಸಿಕ್ಕಿತ್ತು 480ಕ್ಕೂ ಹೆಚ್ಚು ಕಡತ, ನೂರಾರು ಮದ್ಯದ ಬಾಟಲ್​ಗಳು!

ದೇವೇಂದ್ರಪ್ಪ ಮನೆಯಲ್ಲಿ ಸಿಕ್ಕ ಮದ್ಯದ ಬಾಟಲಿಗಳು.

ದೇವೇಂದ್ರಪ್ಪ ಮನೆಯಲ್ಲಿ ಸಿಕ್ಕ ಮದ್ಯದ ಬಾಟಲಿಗಳು.

ಪೂರ್ಣಗೊಂಡ ಕಾಮಗಾರಿಗೆ ಓ.ಸಿ. ಪಡೆಯಲು ಎಡಿಟಿಪಿ ಶ್ರೀ ದೇವೇಂದ್ರಪ್ಪ ರವರ ಬಳಿ ಅರ್ಜಿ ಸಲ್ಲಿಸಿದ್ದರು. 40 ಲಕ್ಷ ಹಣ ನೀಡಿದರೆ ಓ.ಸಿ.ನೀಡುವುದಾಗಿ ದೂರುದಾರರಿಗೆ ಹೇಳಿದ್ದಾರೆ.. ಈ‌ ಸಂಬಂಧ ಎಸಿಬಿಯಲ್ಲಿ ದೂರು ನೀಡಿದ್ದರು. ಇದರಂತೆ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು 20 ಲಕ್ಷ ರೂ.ಲಂಚ ಪಡೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹಣ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.‌

ಮುಂದೆ ಓದಿ ...
  • Share this:

ಬೆಂಗಳೂರು; ನಿರ್ಮಾಣಗೊಂಡ ಕಟ್ಟಡಕ್ಕೆ ಸ್ವಾಧೀನಪತ್ರ (ಒಸಿ) ನೀಡಲು ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುವಾಗ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಂದ ಬಂಧನಕ್ಕೆ‌ ಒಳಗಾಗಿದ್ದಾರೆ. ಇದೇ ವೇಳೆ ದೇವೇಂದ್ರಪ್ಪ ಮನೆಯಲ್ಲಿ ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ನಗದು, 50ಕ್ಕೂ ಹೆಚ್ಚು ಕಡತಗಳು ಹಾಗೂ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಿದ್ದಾರೆ.


ಸಹಾಯಕ ನಿರ್ದೇಶಕನಾಗಿರುವ ದೇವೇಂದ್ರಪ್ಪ ಮನೆ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದಾಗ ಆತನ ಕಾರಿನಲ್ಲಿ ಬಿಬಿಎಂಪಿ ನಗರ ಯೋಜನೆ ಇಲಾಖೆಗೆ ಸೇರಿದ 50 ಕ್ಕೂ ಹೆಚ್ಚು ಕಡತಗಳನ್ನು ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಹೆಸರಿನಲ್ಲಿನ ಸೀಲು, ಕಚೇರಿಯ ಸೀಲು ಇತ್ಯಾದಿ ಪತ್ತೆಯಾಗಿವೆ. ಲೆಕ್ಕವಿಲ್ಲದ 7.40 ಲಕ್ಷ ನಗದು ಹಣ ಸಹ ಸಿಕ್ಕಿದ್ದು ಅದಕ್ಕೆ ಇದುವರೆಗೂ ಯಾವುದೇ ರೀತಿಯ ದಾಖಲೆಗಳನ್ನು ದೇವೇಂದ್ರಪ್ಪ ನೀಡಿಲ್ಲ. ಹೀಗಾಗಿ ಮನೆಯಲ್ಲಿ ಸಿಕ್ಕ ನಗದು ಸೇರಿ ಒಟ್ಟು 27.40 ಲಕ್ಷ ರೂ‌‌‌.ಜಪ್ತಿ  ಮಾಡಿದ್ದಾರೆ.


ಆರೋಪಿ ಮನೆಯ ಶೋಧನೆ ನಡೆಸಿದಾಗ ಈತನ ಬಳಿ ಬೆಲೆ ಬಾಳುವ ಕಾರುಗಳು, ವಿವಿಧ ಬ್ಯಾಂಕ್ ಅಕೌಂಟುಗಳು, ನಿಶ್ಚಿತ ಠೇವಣಿ (ಎಫ್.ಡಿ) ನಗದು ಹಣ, ಸುಮಾರು 120 ಲೀಟರ್ ಮದ್ಯದ ಬಾಟಲ್‌ಗಳು ಹಾಗೂ ಬಿಬಿಎಂಪಿ ನಗರ ಯೋಜನೆ ವಿಭಾಗಕ್ಕೆ ಸೇರಿದ ಸುಮಾರು 480 ಕ್ಕೂ ಹೆಚ್ಚು ಕಡತಗಳು ಮತ್ತು 23 ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿನ ಸೀಲು, ಕಚೇರಿಯ ಸೀಲು ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿ ಬಳಿಯಿದ್ದ ದೊರೆತ ಬೆಲೆ ಬಾಳುವ ಕಾರುಗಳು, ವಿವಿಧ ಬ್ಯಾಂಕ್ ಅಕೌಂಟುಗಳು, ಎಫ್.ಡಿ. ಹಾಗೂ ನಗದು ಹಣದ ಕುರಿತಂತೆ ಪ್ರತ್ಯೇಕವಾಗಿ ತನಿಖೆಯನ್ನು ಮಾಡಲಾಗುವುದು. ಜೊತೆಗೆ ಮನೆಯಲ್ಲಿ ಸುಮಾರು 120‌ ಲೀಟರ್ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಅಬಕಾರಿ ಅಧಿಕಾರಿಗಳು ಪ್ರತ್ಯೇಕ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನು ಓದಿ: ಭಾರತ-ಶ್ರೀಲಂಕಾ ಸಂಬಂಧ ಸುಧಾರಣೆಗೆ ಮತ್ತೆ ಅಡ್ಡಿ..! ಹಿಂದೂ ಮಹಾಸಾಗರದಲ್ಲಿ ಚೀನಾದಿಂದ ಕೊಳಕು ರಾಜಕೀಯ?


ಪ್ರಕರಣದ ಹಿನ್ನೆಲೆ


ದೇವೇಂದ್ರಪ್ಪ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಅಧಿಕಾರಿ. ನಗರದ ಖಾಸಗಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ದೂರುದಾರರು ಹುಳಿಮಾವು ಖಾಸಗಿಯವರಿಗೆ ಸೇರಿದ ಸ್ವತ್ತಿನಲ್ಲಿ ಕಟ್ಟಡ ನಿರ್ಮಾಣ ಮಾಡಲು ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಎಡಿಟಿಪಿ ಕಚೇರಿಗೆ ನಕ್ಷೆ ಮಂಜೂರಾತಿ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದು ಕಟ್ಟಡ ನಿರ್ಮಿಸಿದ್ದರು‌. ಪೂರ್ಣಗೊಂಡ ಕಾಮಗಾರಿಗೆ ಓ.ಸಿ. ಪಡೆಯಲು ಎಡಿಟಿಪಿ ಶ್ರೀ ದೇವೇಂದ್ರಪ್ಪ ರವರ ಬಳಿ ಅರ್ಜಿ ಸಲ್ಲಿಸಿದ್ದರು. 40 ಲಕ್ಷ ಹಣ ನೀಡಿದರೆ ಓ.ಸಿ.ನೀಡುವುದಾಗಿ ದೂರುದಾರರಿಗೆ ಹೇಳಿದ್ದಾರೆ.. ಈ‌ ಸಂಬಂಧ ಎಸಿಬಿಯಲ್ಲಿ ದೂರು ನೀಡಿದ್ದರು. ಇದರಂತೆ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು 20 ಲಕ್ಷ ರೂ.ಲಂಚ ಪಡೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹಣ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.‌

Published by:HR Ramesh
First published: