HOME » NEWS » State » ACB RAIDS ON OFFICIALS HOUSE ON ALLEGATION OF GOVERNMENT LAND REGISTRATION LG

ಗೋಮಾಳ ಜಮೀನನ್ನು ಅಕ್ರಮ ಪರಭಾರೆ ಮಾಡಿದ ಆರೋಪ; ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಈ ಬಗ್ಗೆ ಹೈ ಕೋರ್ಟ್, ಸರ್ಕಾರಿ ಜಮೀನು ವಿವಾದಾತ್ಮಕ ಪ್ರಕರಣದಲ್ಲಿದೆ. ಪರಭಾರೆ ನಿಷಿದ್ಧ ಅಂತ ಆದೇಶಿಸಿತ್ತು. ಆದರೆ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ, ಖಾಸಗಿ ವ್ಯಕ್ತಿಗಳಿಗೆ ರಿಜಿಸ್ಟರ್‌‌ ಮಾಡಲಾಗಿತ್ತು. 

news18-kannada
Updated:January 13, 2021, 2:11 PM IST
ಗೋಮಾಳ ಜಮೀನನ್ನು ಅಕ್ರಮ ಪರಭಾರೆ ಮಾಡಿದ ಆರೋಪ; ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
ದಾಖಲೆ ಪರಿಶೀಲಿಸುತ್ತಿರುವ ಅಧಿಕಾರಿಗಳು
  • Share this:
ಬೆಂಗಳೂರು(ಜ.13):  ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ರಿಜಿಸ್ಟರ್ ಮಾಡಿರುವ ಆರೋಪದ ಮೇಲೆ ಬೆಂಗಳೂರು, ತುಮಕೂರು ಸೇರಿ ಮೂರು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ನಡೆಸಿದ್ದಾರೆ. ರಾಜಸ್ವ ನಿರೀಕ್ಷಕರಾದ ಬಿ.ಕೆ.ಆಶಾ ಅವರ ಅನ್ನಪೂರ್ಣೇಶ್ವರಿ ನಗರದ ಮನೆ ಮೇಲೆ, ಶಿರಸ್ತೇದಾರ್ ಪಿಎಸ್​ಆರ್​ ಪ್ರಸಾದ್​ ಅವರ ತುಮಕೂರಿನ ವಿಜಯನಗರದ ಮನೆ ಮೇಲೆ, ಖಾಸಗಿ ವ್ಯಕ್ತಿ ಕೆ.ವಿ.ನಾಯ್ಡು ಎಂಬಾತನಿಗೆ ಸೇರಿದ ನಾಗಶೆಟ್ಟಿಹಳ್ಳಿಯ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.

ಯಲಹಂಕದ ಚಿಕ್ಕಬೆಟ್ಟಹಳ್ಳಿಯ ಗೋಮಾಳ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಆರೋಪ ಕೇಳಿ ಬಂದಿದೆ. 1968ರಿಂದ ವ್ಯವಸಾಯ ಮಾಡಿಕೊಂಡು ಬಂದವರಿಗೆ ಸಾಗುವಳಿ ಚೀಟಿ ನೀಡದೆ ಬೇರೆಯವರಿಗೆ ಪರಭಾರೆ ಮಾಡಿದ್ದಾರೆ ಎನ್ನಲಾಗಿದೆ. ಗೋಮಾಳ ಜಮೀನಿನ ಮೂಲ ಮಂಜೂರಾತಿ ಕಡತವೂ ತಾಲ್ಲೂಕು ಕಚೇರಿಯಲ್ಲಿ ಕಣ್ಮರೆಯಾಗಿದೆ ಎಂದು ತಿಳಿದು ಬಂದಿದೆ.

ಗ್ರಾಮೀಣ ಮಹಿಳೆಯರ ಅದ್ಭುತ ಸಾಧನೆ; ಬಾಳೆಗೊನೆಗಳಿಂದ ನಳನಳಿಸುತ್ತಿರುವ ತೋಟ

ಈ ಬಗ್ಗೆ ಹೈ ಕೋರ್ಟ್, ಸರ್ಕಾರಿ ಜಮೀನು ವಿವಾದಾತ್ಮಕ ಪ್ರಕರಣದಲ್ಲಿದೆ. ಪರಭಾರೆ ನಿಷಿದ್ಧ ಅಂತ ಆದೇಶಿಸಿತ್ತು. ಆದರೆ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ, ಖಾಸಗಿ ವ್ಯಕ್ತಿಗಳಿಗೆ ರಿಜಿಸ್ಟರ್‌‌ ಮಾಡಲಾಗಿತ್ತು.

ಈ ಬಗ್ಗೆ ಎಸಿಬಿಯಲ್ಲಿ‌ ದೂರು ದಾಖಲು ಮಾಡಿ ತನಿಖೆ ನಡೆಸಲಾಗಿತ್ತು. ಈಗ  ಇಬ್ಬರು ಅಧಿಕಾರಿಗಳು ಸೇರಿ ಮೂವರ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಶೋಧ ನಡೆಸುತ್ತಿದೆ.
Published by: Latha CG
First published: January 13, 2021, 2:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading