ಬಾಗಲಕೋಟೆ: ಎಸಿಬಿ ದಾಳಿ ವೇಳೆ ಅಧಿಕಾರಿ ಮನೆಯಲ್ಲಿ ನಿಷೇಧಿತ ನೋಟು ಪತ್ತೆ; ಭಾರೀ ಮೊತ್ತದ ನಗದು, ಚಿನ್ನ ವಶಕ್ಕೆ

5 ಲಕ್ಷದ 15ಸಾವಿರದ 500ಮೊತ್ತದ ಹಳೆ ನೋಟು ಪತ್ತೆಯಾಗಿದ್ದು, ಸಹಾಯಕ ಅಭಿಯಂತರ ಅಶೋಕ್ ತೋಪಲಕಟ್ಟಿ ಮನೆಯಲ್ಲಿ ಭಾರೀ ಮೊತ್ತದ ಅಕ್ರಮ ಆಸ್ತಿ ದೊರೆತಿದ್ದಕ್ಕೆ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.

news18-kannada
Updated:October 23, 2020, 8:11 AM IST
ಬಾಗಲಕೋಟೆ: ಎಸಿಬಿ ದಾಳಿ ವೇಳೆ ಅಧಿಕಾರಿ ಮನೆಯಲ್ಲಿ ನಿಷೇಧಿತ ನೋಟು ಪತ್ತೆ; ಭಾರೀ ಮೊತ್ತದ ನಗದು, ಚಿನ್ನ ವಶಕ್ಕೆ
ಅಧಿಕಾರಿಯ ಮನೆ
  • Share this:
ಬಾಗಲಕೋಟೆ(ಅ. 23): ಬಾಗಲಕೋಟೆಯಲ್ಲಿ ಎಸಿಬಿ ಅಧಿಕಾರಿಗಳ  ದಾಳಿ ವೇಳೆ ಗ್ರಾಮೀಣ ಕುಡಿಯುವ ನೀರು ಸರಬರಾಜು ನೈರ್ಮಲ್ಯ ಯೋಜನೆ ಉಪವಿಭಾಗದ ಸಹಾಯಕ ಅಭಿಯಂತರ ಅಶೋಕ್ ತೋಪಲಕಟ್ಟಿ  ಮನೆಯಲ್ಲಿ ನಿಷೇಧಿತ ನೋಟು ಪತ್ತೆಯಾಗಿದ್ದು, ಭಾರೀ ಮೊತ್ತದ ಬಂಗಾರ, ಬೆಳ್ಳಿ, ನಗದು ಹಣ ಸಹ ಪತ್ತೆಯಾಗಿದೆ. ಅಕ್ರಮವಾಗಿ ನಿಷೇಧಿತ ನೋಟು ಮನೆಯಲ್ಲಿಟ್ಟುಕೊಂಡು  ಅಧಿಕಾರಿ ಮತ್ತೊಂದು ಅಪರಾಧವೆಸಗಿದ್ದು, ಮನೆಯಲ್ಲಿ ಐದು ನೂರು, ಸಾವಿರ ರೂ. ಮುಖ ಬೆಲೆಯ 5ಲಕ್ಷ 15ಸಾವಿರ 500 ಹಳೆ ನೋಟು ಪತ್ತೆಯಾಗಿದೆ. ಹಳೆ ನೋಟು ಕಂಡಾಗ ಎಸಿಬಿ ಅಧಿಕಾರಿಗಳಿಗೂ ಅಚ್ಚರಿಯಾಗಿದೆ. ಬಾಗಲಕೋಟೆಯ ವಿದ್ಯಾಗಿರಿಯ 8ನೇ ಕ್ರಾಸ್ ನಲ್ಲಿರುವ ಅಧಿಕಾರಿ ಅಶೋಕ್ ತೋಪಲಕಟ್ಟಿ ಮನೆ,ಕಚೇರಿ, ಮಹಾಲಕ್ಷ್ಮಿ ಗ್ಯಾಸ್ ಏಜೆನ್ಸಿ  ಮೇಲೆ ಗುರುವಾರ ಬೆಳಿಗ್ಗೆ 6ಗಂಟೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಬೆಳಿಗ್ಗೆಯಿಂದ ನಿರಂತರ  16ಗಂಟೆಗಳಿಂದ ಮನೆ, ಕಚೇರಿಯಲ್ಲಿ ಅಧಿಕಾರಿಗಳು ಜಾಲಾಡಿದ್ದಾರೆ. ರಾತ್ರಿಯೂ ಅಧಿಕಾರಿ ಮನೆಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದರು.

ಅಧಿಕಾರಿ ಅಶೋಕ್ ತೋಪಲಕಟ್ಟಿ ನಿಷೇಧಿತ ನೋಟನ್ನು ಅಕ್ರಮವಾಗಿ ಮನೆಯಲ್ಲಿ ಯಾಕೆ ಇಟ್ಟುಕೊಂಡಿದ್ದರು ಎಂಬ ಪ್ರಶ್ನೆ ಮೂಡಿದೆ. ನಿಷೇಧಿತ ನೋಟು ಮನೆಯಲ್ಲಿಟ್ಟುಕೊಂಡಿದ್ದಕ್ಕೆ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆಯಿದೆ. ಸಹಾಯಕ ಅಭಿಯಂತರ ಅಶೋಕ್ ತೋಪಲಕಟ್ಟಿ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ದೂರಿನನ್ವಯ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. 2016ರಲ್ಲಿ ಐದು ನೂರು, ಸಾವಿರ ಮುಖ ಬೆಲೆ ನೋಟು  ನಿಷೇಧವಾಗಿವೆ. ಆದರೆ ಸಹಾಯಕ ಅಭಿಯಂತರ ಅಶೋಕ್ ತೋಪಲಕಟ್ಟಿ ನಾಲ್ಕು ವರ್ಷಗಳಿಂದ ನಿಷೇಧಿತ ನೋಟು ಇಟ್ಟುಕೊಂಡಿದ್ದಾರೆ.

ಹಲಸಿನ ಹಣ್ಣಿನಲ್ಲಿದೆ ಹಲವು ಆರೋಗ್ಯಕಾರಿ ಪ್ರಯೋಜನಗಳು

ದಾಳಿ ವೇಳೆ ಪತ್ತೆಯಾಗಿದ್ದು ಏನೇನು?

ಬಾಗಲಕೋಟೆಯಲ್ಲಿ ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಸಿರುವ ಅಧಿಕಾರಿಗೆ ಬಲೆ ಹಾಕಿದ್ದು, ಭಾರೀ ಮೊತ್ತದ ಬಂಗಾರ ದೊರೆತಿದೆ. 64,53,413 ಮೌಲ್ಯದ 1251ಗ್ರಾಂ ಚಿನ್ನ, 54,274ಮೌಲ್ಯದ 8,564ಗ್ರಾಂ ಬೆಳ್ಳಿಯ ಸಾಮಾಗ್ರಿ, 5,18.775 ಮೊತ್ತದ ಹೊಸ ನೋಟು ಪತ್ತೆಯಾಗಿದೆ. ಜೊತೆಗೆ 5 ಲಕ್ಷದ 15ಸಾವಿರದ 500ಮೊತ್ತದ ಹಳೆ ನೋಟು ಪತ್ತೆಯಾಗಿದ್ದು, ಸಹಾಯಕ ಅಭಿಯಂತರ ಅಶೋಕ್ ತೋಪಲಕಟ್ಟಿ ಮನೆಯಲ್ಲಿ ಭಾರೀ ಮೊತ್ತದ ಅಕ್ರಮ ಆಸ್ತಿ ದೊರೆತಿದ್ದಕ್ಕೆ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.

ಬೆಳಗಾವಿ ಎಸಿಬಿ ಉತ್ತರ ವಲಯದ  ಪೊಲೀಸ್ ಅಧೀಕ್ಷಕ ಬಿ ಎಸ್ ನೇಮಿಗೌಡ, ಬಾಗಲಕೋಟೆ ಎಸಿಬಿ  ಡಿವೈಎಸ್ಪಿ ಗಣಪತಿ ಗೂಡಾಜಿ ನೇತೃತ್ವದಲ್ಲಿ 20 ಅಧಿಕಾರಿಗಳಿಂದ ಮೂರು ಕಡೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.
Published by: Latha CG
First published: October 23, 2020, 8:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading