ACB Raid: ಅಕ್ರಮ ಆಸ್ತಿ ಸಂಪಾದನೆ ಆರೋಪ; ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 30 ಕಡೆ ಎಸಿಬಿ ದಾಳಿ

ACB Raid Today: 7‌ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್​ನಲ್ಲಿ ದಾಳಿ ನಡೆಸಲಾಗಿದೆ.

ಚಿತ್ರದುರ್ಗದ ಎಸಿಎಫ್​ ಮನೆಯಲ್ಲಿ ಎಸಿಬಿ ದಾಳಿ

ಚಿತ್ರದುರ್ಗದ ಎಸಿಎಫ್​ ಮನೆಯಲ್ಲಿ ಎಸಿಬಿ ದಾಳಿ

  • Share this:
ಬೆಂಗಳೂರು (ಫೆ. 2): ಇಂದು ಬೆಳ್ಳಂಬೆಳಗ್ಗೆ ರಾಜ್ಯದ 30 ಕಡೆ ಎಸಿಬಿ ದಾಳಿ ನಡೆಸಲಾಗಿದೆ. ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 7‌ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್​ನಲ್ಲಿ ದಾಳಿ ನಡೆಸಲಾಗಿದೆ.

ಕರ್ನಾಟಕದ 30 ಕಡೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೋಲಾರದ ಡಿಹೆಚ್​ಓ, ಹುಬ್ಬಳ್ಳಿ ಇಇ, ಚಿತ್ರದುರ್ಗದ ಎಸಿಎಫ್ ಮನೆ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಹುಬ್ಬಳ್ಳಿ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್​​ ಮನೆ ಮೇಲೆ, ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಮನೆ ಮೇಲೆಯೂ ದಾಳಿ ನಡೆಸಲಾಗಿದೆ. ಬೆಂಗಳೂರಿನ ಯಶವಂತಪುರದ ಫ್ಲಾಟ್​ನಲ್ಲೂ ದಾಖಲೆಗಳ ಶೋಧ ನಡೆಸಲಾಗಿದ್ದು, ಬೆಂಗಳೂರು ಎಸಿಬಿ ತಂಡದಿಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ACB Raid Today: ACB Raids on 30 Places in Karnataka which Belongs to Government Officers in Corruption Case.
ಚಿತ್ರದುರ್ಗದ ಎಸಿಎಫ್​ ಮನೆಯಲ್ಲಿ ಎಸಿಬಿ ದಾಳಿ ವೇಳೆ ಸಿಕ್ಕ ಆಭರಣ, ಹಣ


ಕೋಲಾರದ ಡಿಹೆಚ್​ಓ ಡಾ. ವಿಜಯ್​​ಕುಮಾರ್​ಗೂ ಎಸಿಬಿ ಶಾಕ್ ಎದುರಾಗಿದೆ. ಅವರ ಮುಳಬಾಗಿಲು ಮನೆ, ಖಾಸಗಿ ಆಸ್ಪತ್ರೆ ಮೇಲೆ ರೇಡ್​ ಮಾಡಲಾಗಿದೆ. ಬೆಂಗಳೂರಿನಲ್ಲಿ ಫ್ಲಾಟ್​ನಲ್ಲಿ ಪರಿಶೀಲನೆ ಮಾಡಲಾಗುತ್ತಿದ್ದು, ಚಿಂತಾಮಣಿ ಮನೆ ಸೇರಿದಂತೆ 6 ಕಡೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಇದನ್ನೂ ಓದಿ: Bengaluru Crime: ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಮೇಲೆ ಹಲ್ಲೆ ಪ್ರಕರಣ; ಅಪರಾಧಿಗೆ ಇಂದು ಶಿಕ್ಷೆ ಪ್ರಕಟ

ರಾಜ್ಯಾದ್ಯಂತ ಮೂವತ್ತು ಕಡೆ ಎಸಿಬಿ ದಾಳಿ ನಡೆಸಲಾಗಿದ್ದು, 7‌ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರು ನಗರ, ಬಳ್ಳಾರಿ, ಕೋಲಾರ,ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್​ನಲ್ಲಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕ ಡಿ. ಪಾಂಡುರಂಗ ಗರಗ್ ಅವರ ವಿಜಯನಗರದ ಮನೆ, ಮಲ್ಲೇಶ್ವರಂ ಕಚೇರಿ, ಚಿತ್ರದುರ್ಗದ ಮನೆ ಸೇರಿ 5 ಕಡೆ ದಾಳಿ ನಡೆಸಲಾಗಿದೆ.

ಡಿ. ಪಾಂಡುರಂಗ ಗರಗ್ ಅವರ ವಿಜಯನಗರದ ಮನೆಯಲ್ಲಿ ಸಿಕ್ಕ ಚಿನ್ನಾಭರಣಗಳನ್ನು ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಧಾರವಾಡ, ಚಿತ್ರದುರ್ಗದಲ್ಲಿಯೂ ಎಸಿಬಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
Published by:Sushma Chakre
First published: