ACB Raid: 21 ಅಧಿಕಾರಿಗಳ ನಿವಾಸಗಳ ಮೇಲೆ 300 ಅಧಿಕಾರಿಗಳಿಂದ ದಾಳಿ

ಎಸಿಬಿ

ಎಸಿಬಿ

21 ಅಧಿಕಾರಿಗಳಿಗೆ (21 Officers) ಸೇರಿದ ಮನೆ ಮತ್ತು ಕಚೇರಿಗಳು ಸೇರಿದಂತೆ 80 ಕಡೆ 300 ಅಧಿಕಾರಿಗಳು ದಾಳಿ ನಡೆಸಿ, ಭ್ರಷ್ಟ ಅಧಿಕಾರಿಗಳಿಗೆ (Corrupt Officers) ಶಾಕ್ ನೀಡಿದ್ದಾರೆ. ಬೆಳಗ್ಗೆ ಆರು ಗಂಟೆಗೆ ದಾಳಿ ನಡೆಸಲಾಗಿದೆ.

  • Share this:

ಇಂದು ಬೆಳ್ಳಂ ಬೆಳಗ್ಗೆ ರಾಜ್ಯಾದ್ಯಂತ ಏಕಕಾಕದಲ್ಲಿ ಎಸಿಬಿ ದಾಳಿ (ACB Raid) ನಡೆಸಿದೆ. 21 ಅಧಿಕಾರಿಗಳಿಗೆ (21 Officers) ಸೇರಿದ ಮನೆ ಮತ್ತು ಕಚೇರಿಗಳು ಸೇರಿದಂತೆ 80 ಕಡೆ 300 ಅಧಿಕಾರಿಗಳು ದಾಳಿ ನಡೆಸಿ, ಭ್ರಷ್ಟ ಅಧಿಕಾರಿಗಳಿಗೆ (Corrupt Officers) ಶಾಕ್ ನೀಡಿದ್ದಾರೆ. ಬೆಳಗ್ಗೆ ಆರು ಗಂಟೆಗೆ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ (Income) ಅಧಿಕ ಆಸ್ತಿ ಗಳಿಕೆ ಸಂಬಂಧ ದೂರುಗಳು (Complaint) ಬಂದ ಹಿನ್ನೆಲೆ ದಾಳಿ ನಡೆದಿದೆ. ಬೆಂಗಳೂರು, ಉಡುಪಿ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ದಾಳಿ ನಡೆಸುವ ಮೂಲಕ ಎಸಿಬಿ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ.


ರಾಜ್ಯಾದ್ಯಂತ ಎಸಿಬಿ ದಾಳಿ ನಡೆದಿರೋ ಅಧಿಕಾರಿಗಳ ಪಟ್ಟಿ


1.ಭೀಮ್ ರಾವ್ ವೈ ಪವಾರ್, ಸೂಪರ್ಡೆಂಟ್ ಆಫ್ ಇಂಜಿನಿಯರ್, ಬೆಳಗಾವಿ‌.


2.ಹರಿಶ್, ಅಸಿಸ್ಟಂಟ್ ಇಂಜಿನಿಯರ್ ಸಣ್ಣ ನೀರಾವರಿ,ಉಡುಪಿ


3.ರಾಮಕೃಷ್ಣ ಎಚ್ ವಿ ಎಇಇ ಸಣ್ಣ ನೀರಾವರಿ ಹಾಸನ


4ರಾಜೀವ್ ಪುರಸಯ್ಯ ನಾಯ್ಕ್ ,ಅಸಿಸ್ಟೆಂಟ್ ಇಂಜಿನಿಯರ್ ಪಿಡಬ್ಲೂಡಿ ಕಾರವಾರ.


5.ಬಿ ಆರ್ ಬೋಪಯ್ಯ, ಜ್ಯೂನಿಯರ್ ಇಂಜಿನಿಯರ್, ಪೊನ್ನಪೇಟೆ ಜಿಲ್ಲಾಪಂಚಾಯತ್


6.ಮಧುಸೂದನ್ ,ಡಿಸ್ಟಿಕ್ ರಿಜಿಸ್ಟರ್ ಐಜಿಆರ್ ಆಫೀಸ್ ,ಬೆಳಗಾವಿ,


7.ಪರಮೇಶ್ವರಪ್ಪ ಅಸಿಸ್ಟೆಂಟ್ ‌ಇಂಜಿನಿಯರ್ ಸಣ್ಣ ನೀರಾವರಿ ,ಹೂವಿನಡಗಲಿ..


8.ಯಲ್ಲಪ್ಪ ಎನ್ ಪಡಸಾಲಿ,ಆರ್ ಟಿಒ ಬಾಗಲಕೋಟೆ..


9.ಶಂಕರಪ್ಪ ನಾಗಪ್ಪ ಗೋಪಿ, ಪ್ರೊಜೆಕ್ಟ್ ಡೈರೆಕ್ಟರ್ ನಿರ್ಮಿತಿ ಕೇಂದ್ರ ಬಾಗಲಕೋಟೆ


10 ಪ್ರದೀಪ್ ಎಸ್ ಅಲೂರ್ ಪಂಚಾಯತ್ ಗ್ರೇಡ್ ಟು ಸೆಕ್ರೆಟರಿ ಆರ್ ಡಿಪಿಪಿಆರ್ ಗದಗ್


11ಸಿದ್ದಪ್ಪ ಟಿ. ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು


12.ತಿಪ್ಪಣ್ಣ ಪಿ ಸಿರಸಗಿ, ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್


13.ಮೃತ್ಯಂಜಯ ಚೆನ್ನಬಸಯ್ಯ ತಿರಾಣಿ, ಸಹಾಯಕ ಕಂಟ್ರೋಲರ್,  ಕರ್ನಾಟಕ ಪಶು ವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಗೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ್


ಇದನ್ನೂ ಓದಿ:  Ramangara: ದಾರಿಯಲ್ಲಿ ಹಳ್ಳ, ದಿಣ್ಣೆ, ಕಲ್ಲಿನದ್ದೆ ದರ್ಬಾರ್! ಪ್ರಯಾಣಿಕರು ಸುಸ್ತು 


14.ಮೋಹನ್ ಕುಮಾರ್, ಕಾರ್ಯನಿರ್ವಾಹಕ ಇಂಜಿನಿಯರ್, ನೀರಾವರಿ  ವಿಭಾಗ ಚಿಕ್ಕಬಳ್ಳಾಪುರ


15 ಶ್ರೀಧರ್ ಜಿಲ್ಲಾ ನೋಂದಣಾಧಿಕಾರಿ ಕಾರವಾರ


16 ಮಂಜುನಾಥ್ ನಿವೃತ್ತ ಇಇ  PWD


17 ಶಿವಲಿಂಗಯ್ಯ ಗುಂಪು ಸಿ ಬಿಡಿಎ


18 ಉದಯ್ ರವಿ ಪೊಲೀಸ್ ಇನ್ ಸ್ಪೆಕ್ಟರ್ ಕೊಪ್ಪಳ


19.ಬಿ ಜಿ ತಿಮ್ಮಯ್ಯ ಕೇಸ್ ವರ್ಕರ್ ಕಡೂರು ಪುರಸಭೆ


20 ಚಂದ್ರಪ್ಪ ಸಿ ಹೊಳೆಕರ್ , ಯುಟಿಪಿ ಕಚೇರಿ, ರಾಣೆಬೆನ್ನುರು


21 ಜನಾರ್ಧನ್, ನಿವೃತ್ತ ರಿಜಿಸ್ಟಾರ್ ಮೌಲ್ಯಮಾಪನಗಳು


17 ಲಕ್ಷ‌ ನಗದು, ಬೆಳ್ಳಿ ಬಂಗಾರ ಪತ್ತೆ


ಗ್ರಾಮ ಪಂಚಾಯತ ದ್ವಿತೀಯ ದರ್ಜೆ ಕಾರ್ಯದರ್ಶಿ ಪ್ರದೀಪ್ ಆಲೂರು ಮನೆಯ ಮೇಲೆ ದಾಳಿ ನಡೆಸಲಾಗಿದ್ದು,17 ಲಕ್ಷ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.  ಗದಗ ತಾಲೂಕಿನ ಹುಲಕೋಟಿಯಲ್ಲಿ ವಸಾವಿದ್ದ ಮನೆ, ಬೆಂತೂರು ಗ್ರಾಮದ ಸಹೋಹರನ ಮನೆಯ ಮೇಲೆ ದಾಳಿ ನಡೆದಿದೆ. ಧಾರವಾಡ, ಬೆಂತೂರು,ಹುಲಕೋಟಿ, ಮೂರು ಕಡೆ ಡಿವೈಎಸ್ಪಿ ಎಮ್ ವಿ ಮಲ್ಲಾಪೂರು,ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ, ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು  ಕಡತದ ಪರಿಶೀಲನೆ ಮಾಡುತ್ತಿದ್ದಾರೆ.


ಬೆಳಗಾವಿಯಲ್ಲಿಯೂ ಎಸಿಬಿ ದಾಳಿ 


ನಿವೃತ್ತಿ ಅಂಚಿನಲ್ಲಿದ್ದ ಬೆಳಗಾವಿಯ ಲೋಕೋಪಯೋಗಿ ಇಲಾಖೆ ಅಧಿಕಾರಿ PWD ಬೆಳಗಾವಿ ಅಧೀಕ್ಷಕ ಬಿ.ವೈ ಪವಾರ್ ಮನೆ, ಕಚೇರಿ ಸೇರಿ 5 ಕಡೆ ದಾಳಿ ನಡೆಸಲಾಗಿದೆ. ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿರುವ ಮನೆ, ಕಚೇರಿ, ಸರ್ಕಾರಿ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಬಿ.ವೈ ಪವಾರ್ ಜೂನ್ 30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.


ಇದನ್ನೂ ಓದಿ;  Hassan: ಅಮ್ಮ ಬರ್ತಾಳೆ ಅಂತ ಕಾಯ್ತಿದ್ದ ಮಗನಿಗೆ ಶಾಕ್; ಕೆರೆಯಲ್ಲಿ ಮುಳುಗಿಸಿ ಕೊಂದ ಕಳ್ಳ!


ಉಡುಪಿಯ ಅಸಿಸ್ಟೆಂಟ್ ಇಂಜಿನಿಯರ್ ಹರೀಶ್ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಮನೆ ಮೇಲೆ ಎಸಿಬಿ ಡಿವೈಎಸ್ ಪಿ ಮಂಜುನಾಥ ಕವರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Published by:Mahmadrafik K
First published: