ACB Raid: ಆದಾಯಕ್ಕಿಂತ 1,408% ಆಸ್ತಿ, ನಿವೃತ್ತ ಅಧಿಕಾರಿ ಅರೆಸ್ಟ್: 28 ಮನೆ, ಬೆಂಗಳೂರಲ್ಲಿ ಎಲ್ಲಿ ನೋಡಿದ್ರೂ ಸೈಟ್, 5 ಕಾರ್

ಇನ್ನು ವಾಸುದೇವ್ ಮನೆಯಲ್ಲಿ 925 ಗ್ರಾಂ ಚಿನ್ನ, 9 ಕೆಜಿ ಬೆಳ್ಳಿ ವಸ್ತುಗಳು, ಬೆಂಜ್, ಸ್ಕೋಡಾ, ವೋಲ್ಟೋ ಸೇರಿದಂತೆ ಒಟ್ಟು 5 ಐಷಾರಾಮಿ ಕಾರುಗಳಿವೆ.  17.2 ಲಕ್ಷ ನಗದು ಮತ್ತು ವಿವಿಧ ಬ್ಯಾಂಕ್ ಗಳ ಖಾತೆಯಲ್ಲಿ 1.31 ಕೋಟಿ ರೂಪಾಯಿ ಹಣ ಇರೋದು ದಾಳಿ ವೇಳೆ ಬೆಳಕಿಗೆ ಬಂದಿದೆ.

ನಿವೃತ್ತ ಅಧಿಕಾರಿ ವಾಸುದೇವ್

ನಿವೃತ್ತ ಅಧಿಕಾರಿ ವಾಸುದೇವ್

  • Share this:
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಾಳಿಗೆ (ACB Raid) ಒಳಗಾಗಿದ್ದ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೆಶಕ ವಾಸುದೇವ್ ಬಂಧನವಾಗಿದೆ, ಶನಿವಾರ ರಾತ್ರಿ ವಾಸುದೇವ್ ಬಂಧನವಾಗಿದ್ದು, ಪರಪ್ಪನ ಅಗ್ರಹಾರಕ್ಕೆ (Parappana Agrahara) ಶಿಫ್ಟ್ ಮಾಡಲಾಗಿದೆ. ಎಸಿಬಿ ದಾಳಿ ವೇಲೆ ವಾಸುದವೇವ್ ಮನೆಯಲ್ಲಿ ಆದಾಯಕ್ಕಿಂತ ಶೇ.1408ರಷ್ಟು ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅತಿ ಹೆಚ್ಚು ಪ್ರಮಾದಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದ್ರು ಅಧಿಕಾರಿಗಳ ಪ್ರಶ್ನೆಗೆ ವಾಸುದೇವ್ ಉತ್ತರಿಸಿಲ್ಲ. ತನಿಖೆಗೆ ಸಹಕಾರ ನೀಡದ ಹಿನ್ನೆಲೆ ಹಾಗೂ ಭ್ರಷ್ಟಾಚಾರ (Corruption) ಆರೋಪದಡಿ ವಾಸುದೇವ್ ಬಂಧನವಾಗಿದೆ.  ದಾಳಿ ನಡೆಸಿದ ಅಧಿಕಾರಿಗಳು ವಾಸುದೇವ್ ಅಕ್ರಮ ಆಸ್ತಿ ಕಂಡು ಶಾಕ್ ಆಗಿದ್ದಾರೆ.

ಪತ್ನಿ ಮಕ್ಕಳು ಹಾಗೂ ತನ್ನ ಹೆಸರುನಲ್ಲಿ ಕೋಟ್ಯಾಂತರ ಆಸ್ತಿ ಮಾಡಿರುವ ದಾಖಲೆಗಳು ಎಸಿಬಿ ಲಭ್ಯವಾಗಿದೆ. ನಾಳೆ ಮತ್ತೆ ಕುಟುಂಬಸ್ಥರ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆ  ನಡೆಯಲಿದೆ. ವಾಸುವೇವ್ ಬೇನಾಮಿಯಲ್ಲಿ ವ್ಯವಹಾರ ಮಾಡಿರುವ ಅನುಮಾನಗಳು ವ್ಯಕ್ತವಾಗಿವೆ.

ಮನೆಯಲ್ಲಿ ಚಿನ್ನ, ಬೆಳ್ಳಿ, ನಗದು, ಐಷಾರಾಮಿ ಕಾರ್ ಗಳು

ಇನ್ನು ವಾಸುದೇವ್ ಮನೆಯಲ್ಲಿ 925 ಗ್ರಾಂ ಚಿನ್ನ, 9 ಕೆಜಿ ಬೆಳ್ಳಿ ವಸ್ತುಗಳು, ಬೆಂಜ್, ಸ್ಕೋಡಾ, ವೋಲ್ಟೋ ಸೇರಿದಂತೆ ಒಟ್ಟು 5 ಐಷಾರಾಮಿ ಕಾರುಗಳಿವೆ.  17.2 ಲಕ್ಷ ನಗದು ಮತ್ತು ವಿವಿಧ ಬ್ಯಾಂಕ್ ಗಳ ಖಾತೆಯಲ್ಲಿ 1.31 ಕೋಟಿ ರೂಪಾಯಿ ಹಣ ಇರೋದು ದಾಳಿ ವೇಳೆ ಬೆಳಕಿಗೆ ಬಂದಿದೆ.  ಬಾಡಿಗೆ ನೀಡುವ ಉದ್ದೇಶದಿಂದ 5 ಕಡೆ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಕುಟುಂಬಸ್ಥರ ಹೆಸರಿನಲ್ಲಿ 28 ಮನೆಗಳ ದಾಖಲೆಗಳಿವೆ.

ಇದನ್ನೂ ಓದಿ: BDA ಮೇಲೆ ACB ದಾಳಿ; ಅಧ್ಯಕ್ಷನಾಗಿ ಭ್ರಷ್ಟಾಚಾರ ತಡೆಯಲು ಆಗಲಿಲ್ಲ ಎಂದು ಒಪ್ಪಿಕೊಂಡ S.R.Vishwanath

ವಾಸುದೇವ್ ಆಸ್ತಿ ವಿವರ ಹೀಗಿದೆ

ಕೆಂಗೇರಿ ಉಪನಗರ  ನಂ- 100 ವಾಸದ ಮನೆ, ಕೆಂಗೇರಿ ಉಪನಗರಶಾಂತಿ ವಿಳಾಸ ಲೇಔಟ್ ನಂ -80,  ಮಲ್ಲೇಶ್ವರಂ 18 ಕ್ರಾಸ್ ನಂ -04 ವಾಸದ ಮನೆ, ಕೆಂಗೇರಿ ಉಪನಗರ ನಂ -167 ವಾಸದ ಮನೆ,  ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ  ನಂ -49 ಸರ್ವೆ ನಂ 112/2,  ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ  ಗ್ರಾಮ ಸಂಖ್ಯೆ -50 ಸರ್ವೇನಂ-111/2,  ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ ಸಂಖ್ಯೆ -32 ಸರ್ವೇ ನಂ 111/2.,

ಹೆಸರಘಟ್ಟ ಸರ್ವೇನಂ 276/2/5,  ಕೆಂಗೇರಿ ಸೂಲಿಗೆರೆ ಗ್ರಾಮ ಸರ್ವೇನಂ1/3/4,  ಅರ್ಕಾವತಿ ಲೇಔಟ್ ನಲ್ಲಿ ಒಟ್ಟು ಮೂರು ಸೈಟ್ ಗಳು ನಿವೇಶನ ಸಂಖ್ಯೆ2477/ 2303/2596, ಯಲಹಂಕ 44/80 ಸರ್ವೇ ನಂ 1163, ಕೆಂಗೇರಿ ಉಪನಗರ ಕೆಹೆಚ್ ಬಿ  ಕಾಲೋನಿ ನಂ-113, ಜ್ಞಾನಭಾರತಿ ಬಿಡಿಎ ಸೈಟ್ ಸೈಟ್ ನಂ-11, ವಿಶ್ವೇಶ್ವರ ಲೇಔಟ್ ಬಿಡಿಎ ಸೈಟ್ ನಂ-340, ವಿಶ್ವೇಶ್ವರ ಲೇಔಟ್ ನಲ್ಲಿ ಎರಡು ಸಂಖ್ಯೆ 2807, ಹೊಸಕೇರೆಹಳ್ಳಿ ಅಪಾರ್ಟ್ಮೆಂಟ್ ಫ್ಲಾಂ ನಂ-804, ಕೆಂಗೇರಿ ಉಪನಗರ ವಾರ್ಡ್ ನಂ- 159 ನಿವೇಶನ ಸಂಖ್ಯೆ -37.

ಮನೆಯ ಪೈಪ್ ನಲ್ಲಿ ನೋಟಿನ ಕಂತೆಗಳು

ಕಲಬುರಗಿಯ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್​ ಆಗಿರುವ ಶಾಂತನಗೌಡ ಬಿರಾದಾರ್ (Engineer Shanta Gowda Biradar) ಮನೆಯ ಪೈಪ್ ನಲ್ಲಿ ನೋಟಿನ ಕಂತೆಗಳು  ಪತ್ತೆಯಾಗಿದ್ದವು. ನೀರಿನ ಪೈಪ್​ನಿಂದ ಬರೋಬ್ಬರಿ 13 ಲಕ್ಷ ಹಣವನ್ನು ಅಧಿಕಾರಿಗಳು ಬಕಿಟ್​ಗೆ ಇಳಿಸಿಕೊಂಡಿದ್ದರು. ನೀರಿನ ಪೈಪ್​ನಿಂದ ಹಣ ತೆಗೆಯುವ ವಿಡಿಯೋ ಸದ್ಯ ದೇಶಾದ್ಯಂತ ವೈರಲ್​ ಆಗಿತ್ತು.

ಇದನ್ನೂ ಓದಿ:  ACB Raid ವೇಳೆ ಯಾರ ಮನೆಯಲ್ಲಿ ಎಷ್ಟು ಚಿನ್ನ-ಬೆಳ್ಳಿ-ಹಣ ಸಿಕ್ಕಿದೆ? ಇಲ್ಲಿದೆ ನೋಡಿ ಧನಕನಕಗಳ Photos

. ಈ ಸಮಯದಲ್ಲಿ ಮನೆಯಲ್ಲಿದ್ದ ಲಕ್ಷ ಲಕ್ಷ ನಗದನ್ನು ಬಚ್ಚಿಡಲು ಮುಂದಾಗಿದ್ದಾರೆ. ಕೈ ಸಿಕ್ಕಷ್ಟು ಹಣವನ್ನು  ಗಾಬರಿಯಲ್ಲಿ ಬಚ್ಚಿಡಲು ಮುಂದಾಗಿದ್ದಾರೆ. ಈ ವೇಳೆ‌ ಮನೆಯ ಟೆರೆಸ್ ಮೇಲಿನ ಪೈಪ್ ಒಳಗೆ ಆತುರಾತುರವಾಗಿ ಹಣ ತುರುಕಿದ್ದಾರೆ. ಗಾಬರಿಯಲ್ಲಿ ಹಣ ತುರುಕಿ ಬಳಿಕ ಪೈಪ್ ಮೇಲೆ ಕಲ್ಲಿಟ್ಟು ಕೆಳಗೆ ಬಂದಿದ್ದರು.
Published by:Mahmadrafik K
First published: