ಜಿ.ಪಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿರಾದಾರ ನಿವಾಸದ ಮೇಲೆ ಎಸಿಬಿ ದಾಳಿ

news18
Updated:July 24, 2018, 1:37 PM IST
ಜಿ.ಪಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿರಾದಾರ ನಿವಾಸದ ಮೇಲೆ ಎಸಿಬಿ ದಾಳಿ
news18
Updated: July 24, 2018, 1:37 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ - (  ಜುಲೈ.24) :  ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ನಿವಾಸದ ಮೇಲೆ ಎಸಿಬಿ ದಾಳಿ ಮಾಡಲಾಗಿದೆ.  ಅಧ್ಯಕ್ಷೆ ಸವರ್ಣಾ ಮಾಲಾಜಿ ಆಪ್ತ ಕಾರ್ಯದರ್ಶಿ ದೇವೇಂದ್ರಪ್ಪ ಬಿರಾದಾರ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಜಯನಗರದಲ್ಲಿನ ಮನೆ, ರಾಮ ಮಂದಿರದ ಬಳಿಯಿರುವ ಮನೆ ಮತ್ತು ಕಾಂಪ್ಲೆಕ್ಸ್ ಗಳ ಮೇಲೆ ಏಕ ಕಾಲಕ್ಕೆ ದಾಳಿ. ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ.

ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಮುಂದೆ ಕೆಲ ಶಾಸಕರ ಆಪ್ತ ಕಾರ್ಯದರ್ಶಿಯಾಗಿ, ನಂತರ ಜಿ.ಪಂ. ಅಧ್ಯಕ್ಷೆ ಸುವರ್ಣ ಮಾಲಾಜಿ ಆಪ್ತ ಕಾರ್ಯದರ್ಶಿಯಾಗಿದ್ದ ಬಿರಾದಾರ. ಎಸಿಬಿ ಡಿ.ವೈ.ಎಸ್.ಪಿ ಜೇಮ್ಸ್ ಮಿಸೇಜಿನ್ ನೇತೃತ್ವದಲ್ಲಿ ನಡೆದ ದಾಳಿ ನಡೆದಿದ್ದು, ಬಿರಾದಾರ ನಿವಾಸದಲ್ಲಿ ಕಡತಗಳ ಪರಿಶೀಲನೆ ಮುಂದುವರಿದಿದೆ.

ಹಿಂದೆ ಶಾಸಕರ ಆಪ್ತ ಸಹಾಯಕನಾಗಿದ್ದ ವೇಳೆಯೂ ಬಿರಾದಾರ ಮೇಲೆ ಭ್ರಷ್ಟಾಚಾರ ಮತ್ತಿತರ ಆರೋಪಗಳು ಕೇಳಿ ಬಂದಿದ್ದವು. ಆರೋಗ್ಯ ಇಲಾಖೆಯಲ್ಲಿ ನೇಮಕವಾಗಿರುವ ದೇವೆಂದ್ರಪ್ಪಾ, ಆಪ್ತ ಸಹಾಯಕನಾಗಿ, ಆಪ್ತ ಕಾರ್ಯದರ್ಶಿಯಾಗಿಯೇ ಹೆಚ್ಚು ಕೆಲಸ ಮಾಡಿದ್ದಾರೆ. ಇದೀಗ ಆತನ ನಿವಾಸದ ಮೇಲೆ ದಾಳಿ ನಡೆದಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

 

 
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...