ಎಸಿಬಿಯಿಂದ ಭ್ರಷ್ಟ ಅಧಿಕಾರಿಗಳ ಬೇಟೆ; ಮೂಟೆ ಮೂಟೆ ನಗದು ಪತ್ತೆ

news18
Updated:October 5, 2018, 5:16 PM IST
ಎಸಿಬಿಯಿಂದ ಭ್ರಷ್ಟ ಅಧಿಕಾರಿಗಳ ಬೇಟೆ; ಮೂಟೆ ಮೂಟೆ ನಗದು ಪತ್ತೆ
ಬಿಡಿಎ ಮುಖ್ಯ ಇಂಜಿನಿಯರ್ ಗೌಡಯ್ಯ ಮತ್ತು ಕೆಐಎಡಿಬಿ ಚೀಪ್ ಡೆವಲಪ್ ಮೆಂಟ್ ಆಫೀಸರ್ ಪಿ.ಆರ್ .ಸ್ವಾಮಿ
news18
Updated: October 5, 2018, 5:16 PM IST
ಕಿರಣ್ ಕೆ.ಎನ್. ನ್ಯೂಸ್ 18 ಕನ್ನಡ

ಬೆಂಗಳೂರು (ಅ.5): ದೊಡ್ಡ ಮಟ್ಟದಲ್ಲಿ ಭ್ರಷ್ಟರ ಬೇಟೆಗೆ ಮುಂದಾಗಿರುವ ಎಸಿಬಿ ಅಧಿಕಾರಿಗಳು ಶುಕ್ರವಾರ ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿ ಎಂಟು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ನೂರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಬಿಡಿಎ ಸೂಪರಿಟೆಂಡೆಂಟ್​ ಎನ್ ಜಿ ಗೌಡಯ್ಯ ಮತ್ತು ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್​. ಸ್ವಾಮಿ ಇಬ್ಬರ ಮೇಲೂ ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದರಿಂದ ಶುಕ್ರವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಬ್ಬರು ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರು ಸೇರಿ 8 ಸ್ಥಳಗಳಲ್ಲಿ ದಾಳಿ ನಡೆದಿದೆ. ಬಿಡಿಎ ಸೂಪರಿಟೆಂಡೆಂಟ್ ಗೌಡಯ್ಯ ಮನೆ, ಬೆಂಗಳೂರಿನ ಸಂಬಂಧಿಕರ ಮನೆ, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮನೆ ಮೇಲೆ ದಾಳಿಯಾಗಿದೆ. ಗೌಡಯ್ಯ ಕರ್ತವ್ಯ ನಿರ್ವಹಿಸುತ್ತಿದ್ದ ಬಿಡಿಎ ಕಚೇರಿ ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಕೆಐಎಡಿಬಿ ಮುಖ್ಯ ಅಭಿವೃದ್ದಿ ಅಧಿಕಾರಿ ಟಿ ಆರ್ ಸ್ವಾಮಿ ಪ್ಲಾಟ್ ನಲ್ಲಿ ಪರಿಶೀಲನೆ ನಡೆದಿದೆ. ಸ್ವಾಮಿ ಬೆಂಗಳೂರಿನ ‌ನಿವಾಸ ಸೇರಿ ನಗರದಲ್ಲಿ ಇಬ್ಬರು ಸಂಬಂಧಿಕರ ಮನೆ ಮೇಲೆ ದಾಳಿ ಮಾಡಲಾಗಿದೆ. ಸ್ವಾಮಿಯವರ ಕಚೇರಿಯಲ್ಲೂ ಪರಿಶೀಲನೆಯಾಗುತ್ತಿದೆ. ಸುಮಾರು 42 ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಇದ್ದಾರೆ ಎಂದು ಎಸಿಬಿ ಐಜಿಪಿ ಚಂದ್ರಶೇಖರ್ ಮಾಹಿತಿ ನೀಡಿದರು.

ಗೌಡಯ್ಯ ಮನೆಯಲ್ಲಿ ಎಸಿಬಿ ಅಧಿಕಾರಿಗಳು 4 ಕೆ.ಜಿ. ಚಿನ್ನ, 90 ‌ಲಕ್ಷ ನಗದು ಹಾಗೂ ಮನೆ, ಅಪಾರ್ಟ್​ಮೆಂಟ್, ಜಮೀನು ಕಾಗದಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಗೌಡಯ್ಯ ತನ್ನ ತಮ್ಮ ರಾಮಲಿಂಗೇಗೌಡ ಹೆಸರಿನಲ್ಲಿ ನೂರಾರು ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದ್ದು,  ಕೆಂಗೇರಿಯಲ್ಲಿರುವ ರಾಮಲಿಂಗೇಗೌಡ ಮನೆ ಮೇಲೂ ದಾಳಿಯಾಗಿದೆ. ಆದರೆ, ದಾಳಿ ವಿಷಯ ತಿಳಿಯುತ್ತಿದ್ದಂತೆ ರಾಮಲಿಂಗೇಗೌಡ ನಾಪತ್ತೆಯಾಗಿದ್ದಾರೆ. ಗೌಡಯ್ಯ ತನ್ನ ಪ್ರಭಾವ ಬಳಸಿ ಬಿಡಿಎ ಗುತ್ತಿಗೆಯನ್ನು ತಮ್ಮನಿಗೆ ಕೊಡಿಸುತ್ತಿದ್ದರು.
ಸಹೋದರನ ಹೆಸರಲ್ಲೇ ಸುಮಾರು 500 ಕೋಟಿಗೂ ಹೆಚ್ಚು ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
Loading...



ಬಿಡಿಎನಲ್ಲಿ ಕಳೆದ ಹತ್ತು ವರ್ಷಗಳಿಂದ ವಸತಿ ವಿಭಾಗದಲ್ಲಿ ಕೆಲಸ ಮಾಡಿದ್ದ ಗೌಡಯ್ಯ  ಹಲವು ಕನ್ಸ್​ಸ್ಟ್ರಕ್ಷನ್ ಕಂಪನಿಗಳಿಂದ ಕಿಕ್ ಬ್ಯಾಕ್ ಪಡೆದಿರುವ ಆರೋಪ ಕೇಳಿಬಂದಿದೆ. ಹಲವು ಪ್ರಾಜೆಕ್ಟ್ ಗಳಲ್ಲಿ ಕೋಟ್ಯಂತರ ರೂಪಾಯಿ ಲಂಚ ಪಡೆದ ಆರೋಪ ಗೌಡಯ್ಯ ಮೇಲಿದೆ. ಮಾಳಗಾಲ, ಕೊಮ್ಮಗಟ್ಟ‌ ಸೇರಿದಂತೆ ಹಲವೆಡೆ ಬಿಡಿಎ ಅಪಾರ್ಟ್​ಮೆಂಟ್ ನಿರ್ಮಾಣ ಗುತ್ತಿಗೆಯಲ್ಲಿ ಭಾರೀ ಗೋಲ್ಮಾಲ್ ನಡೆಸಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎನ್ನಲಾಗಿದೆ.

ಬಿಡಿಎ ಗೆ ಬಂದ ಎಲ್ಲಾ ಕಮಿಷನರ್​​ಗಳಿಗೂ ಗೌಡಯ್ಯ ಫೇವರೆಟ್ ಆಫೀಸರ್. ಆತ ಏನೇ ಮಾಡಿದ್ರೂ ಕಣ್ಮುಚ್ಚಿಕೊಂಡು ಒಪ್ಪಿಗೆ ಸೂಚಿಸುತ್ತಿದ್ದ. ನಯವಾದ ಮಾತುಗಳ ಮೂಲಕ‌ ಕಮಿಷನರ್​ಗಳಿಗೂ ಮಂಕು ಬೂದಿ ಎರಚುತ್ತಿದ್ದ ನಾಜೂಕಯ್ಯ. ಸಚಿವ ಡಿಕೆಶಿ ಹೆಸರೇಳಿ ಇಡೀ ಬಿಡಿಎಯನ್ನು ತನ್ನ ಕಂಟ್ರೋಲ್​ನಲ್ಲಿ ಇಟ್ಟುಕೊಂಡಿದ್ದ ಗೌಡಯ್ಯ. ಹೆಚ್ಚು ಆಸ್ತಿ ಮಾಡಿದರೆ, ಗೊತ್ತಾಗುತ್ತೆಂದು ಸಂಬಂಧಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಗೌಡಯ್ಯನಿಗೆ ಶಾಸಕರಾದ ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಅವರ ಕೃಪಕಟಾಕ್ಷವೂ ಇದೆ ಎನ್ನಲಾಗುತ್ತಿದೆ.



ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಟಿ.ಆರ್​. ಸ್ವಾಮಿ ಮನೆಯಲ್ಲೂ ಭಾರೀ ಪ್ರಮಾಣದಲ್ಲಿ ನಗದು ಹಾಗೂ ಆಸ್ತಿ ಪತ್ತೆಯಾಗಿದೆ. ಕೋಟಿಗಟ್ಟಲೇ ಬೆಲೆಬಾಳುವ ಹಲವು ಕಾರುಗಳು ಈತನ ಬಳಿ ಇವೆ. ಮಗಳಿಗೆ ಒಂದು ಕಾರು, ಮಗನಿಗೆ ಐಷಾರಾಮಿ ಮಿನಿ ಬಿಎಂಡಬ್ಲು ಕೂಪರ್ ಎಸ್ ಕಾರ್ ಕೊಡಿಸಿದ್ದ.

ಎಸಿಬಿ ಅಧಿಕಾರಿಗಳನ್ನು ಕಾಣುತ್ತಿದ್ದಂತೆ ಸ್ವಾಮಿ 14ನೇ ಮಹಡಿಯಿಂದ ಹಣದ ಚೀಲವನ್ನು ಕೆಳಗೆ ಬೀಸಾಡಿದ್ದಾನೆ. ಇದನ್ನು ತಿಳಿದ ಅಧಿಕಾರಿಗಳು, ಹಣವಿದ್ದ ಚೀಲವನ್ನು ವಶಕ್ಕೆ ಪಡೆದುಕೊಂಡರು. ಮನೆಯಲ್ಲಿ ಸುಮಾರು 5.40 ಕೋಟಿ ರೂ., ನಗದು, ಒಂದೂವರೆ ಕೆ.ಜಿ.ಚಿನ್ನಾಭರಣ ಹಾಗೂ ಕೋಟ್ಯಂತರ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿದೆ ಎಂದು ನ್ಯೂಸ್ 18 ಗೆ ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಲವ್ ಮಾಡಿ ಬೇಸ್ತು ಬಿದ್ದ ಟೀಚರ್; ಕೈ ಕೊಟ್ಟ ಮಿಸ್ಡ್ ಕಾಲ್ ಹುಡುಗಿ !



ಸ್ವಾಮಿ ಮನೆಯಲ್ಲಿ ಎಷ್ಟು ಸಿಕ್ಕಿದೆ ಅಂತ ಈಗಲೇ ನಿಖರವಾಗಿ ಹೇಳಲು ಆಗುವುದಿಲ್ಲ. ಶೋಧನೆ ಮುಂದುವರೆದಿದೆ. ಸ್ವಾಮಿ ಮೇಲೆ ಹಲವು ದೂರುಗಳು ಎಸಿಬಿಗೆ ಬಂದಿದ್ದವು.  ಹೀಗಾಗಿ ರೈಡ್ ಮಾಡಿದ್ದೇವೆ. ಸಂಜೆ 7 ರಿಂದ 8 ಗಂಟೆಯವರಿಗೂ ದಾಳಿ ಮುಂದುವರೆಯುತ್ತೆ. ಎರಡು ಹಣ ಎಣಿಕೆ ಯಂತ್ರ ತಂದು ಹಣ ಎಣಿಕೆ ಮಾಡಲಾಗುತ್ತಿದೆ. ಸಾಕಷ್ಟು ಪ್ರಮಾಣದ ದಾಖಲೆ ಪತ್ರಗಳು ಸಿಕ್ಕಿವೆ. ಸಂಪೂರ್ಣ ಪರಿಶೀಲನೆ ಬಳಿಕ ಸ್ವಾಮಿಯವರ ಆಸ್ತಿಪಾಸ್ತಿ ಎಷ್ಟು ಇದೆ ಅಂತ ವಿವರ ನೀಡುತ್ತೇವೆ ಎಂದು ಎಸಿಬಿ ಐಜಿಪಿ ಚಂದ್ರಶೇಖರ್ ಹೇಳಿದ್ದಾರೆ.
First published:October 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626