ಆದಾಯ ಮೀರಿ ಸಂಪಾದನೆ; ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಎಸಿಬಿ

news18
Updated:July 17, 2018, 5:58 PM IST
ಆದಾಯ ಮೀರಿ ಸಂಪಾದನೆ; ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಎಸಿಬಿ
news18
Updated: July 17, 2018, 5:58 PM IST
ಗಂಗಾಧರ್​ , ನ್ಯೂಸ್​ 18 ಕನ್ನಡ

ಬೆಂಗಳೂರು (ಜು.17):  ಆದಾಯ ಮೀರಿ ಸಂಪಾದನೆ ಮಾಡಿರುವ ಭ್ರಷ್ಟರಿಗೆ ಬಿಸಿಮುಟ್ಟಿಸಿರುವ ಎಸಿಬಿ ಅಧಿಕಾರಿಗಳು ಇಂದು ಮೂರು ಕಡೆ  ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನ ಎಸಿಎಫ್ ಕೆ.ಎನ್.ರಂಗಸ್ವಾಮಿ, ಬೆಂಗಳೂರಿನಲ್ಲಿ ಕೈಮಗ್ಗ, ಜವಳಿ ಜಂಟಿ ನಿರ್ದೇಶಕ ವಿಜಯ್ ಕುಮಾರ್ ಹಾಗೂ ಜವಳಿ ಇಲಾಖೆ ಉಪನಿರ್ದೇಶಕ ಗಂಗಯ್ಯ ಮನೆ ಮತ್ತು ಕಚೇರಿ ದಾಳಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಸಹಾಯಕ ಉಪ ಸಂರಕ್ಷಣಾಧಿಕಾರಿಯಾದ ರಂಗನಾಥಸ್ವಾಮಿ‌ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದೆ.

ಕೈ ಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ವಿಜಯ್​ ಕುಮಾರ್​ ಅವರ ಬೆಂಗಳೂರಿನ ರಾಜಾಜಿನಗರದ ಮನೆ ಮೇಲೆ ದಾಳಿ ನಡೆಸಲಾಗಿದೆ.  ಜವಳಿ ಇಲಾಖೆ ಉಪ ನಿರ್ದೇಶಕರಾಗಿರುವ ಗಂಗಯ್ಯ ಅವರ ಚನ್ನರಾಯಪಟ್ಟಣದ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಅವರ ತೋಟದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಈ ಅಧಿಕಾರಿಗಳ ಮೇಲೆ ಆದಾಯ ಮೀರಿದ ಸಂಪಾದನೆ ಆರೋಪ ಹೊಂದಿದ್ದು ಒಟ್ಟು 8 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ.
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...