ACB Raid: ಪೈಪಿನೊಳಗಿಂದ ಒಂದೊಂದಾಗಿ ಹೊರಬಂತು 500 ರೂ ನೋಟುಗಳು, ಇದಪ್ಪಾ ಹಣ ಬಚ್ಚಿಡೋ ಜಾಗ! ವಿಡಿಯೋ ನೋಡಿ...

ಮನೆಯನ್ನು ಪೂರ್ಣವಾಗಿ ಪರಿಶೀಲನೆ ನಡೆಸುತ್ತಿದ್ದಾಗ ಅಧಿಕಾರಿಗಳಿಗೆ ಒಂದು ಶಾಕ್‌ ಕಾದಿತ್ತು. ಶಾಂತಗೌಡ ಬಿರಾದಾರ ಮನೆಯ ಬಾತ್‌ ರೂಮ್‌ ಪೈಪ್ ನ್ನು ಬಿಡದೇ ಹಣ ಬಚ್ಚಿಟ್ಟಿದ್ದರು ಎಂದು ತಿಳಿದು ಬಂದಿದೆ. ಕೂಡಲೇ ಬಾತ್‌ ಪೈಪ್ ನ್ನು ಕತ್ತರಿಸಿ ಹಣ ತೆಗಸಿದ್ದಾರೆ. ಪೈಪಿನೊಳಗಿಂದ 500 ರೂಪಾಯಿ ನೋಟುಗಳು ಹೊರಬಂದಿದ್ದು ಹೇಗೆ ನೋಡಿ...

ಬಾತ್‌ ರೂಮ್‌ ಪೈಪ್‌ ನಲ್ಲಿ ಹಣ

ಬಾತ್‌ ರೂಮ್‌ ಪೈಪ್‌ ನಲ್ಲಿ ಹಣ

 • Share this:
  ACB Raid in Karntaka: ಇಂದು ರಾಜ್ಯದ ವಿವಿದೆಡೆ ಭ್ರಷ್ಟ ನೌಕರರ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ(illicit property) ಪತ್ತೆ ಮಾಡಿ ಭ್ರಷ್ಟರಿಗೆ ಚಳಿಯಲ್ಲೂ ಬೆವರುವಂತೆ ಮಾಡಿದಂತು ನಿಜ, ಈ ಅಕ್ರಮ ಆಸ್ತಿ ಬಚ್ಚಿಡಲು ಭಷ್ಟ್ರರು ಮಾಡಿರುವ ಕಸರತ್ತುಗಳನ್ನು ಕಂಡು ಎಸಿಬಿ ಅಧಿಕಾರಿಗಳು ಸುಸ್ತಾಗಿ ಹೋಗಿದ್ದಾರೆ ಎಂದರೆ ತಪ್ಪಾಗಲಾದರು. ಅದರಲ್ಲು ಜೇವರ್ಗಿ ಯ ಲೋಕೋಪಯೋಗಿ ಇಲಾಖೆಯ (Department of Public Works) ಜಾಯಿಂಟ್ ಎಂಜಿನಿಯರ್ ಆದ ಶಾಂತಗೌಡ ಬಿರಾದಾರ(Shanthagowda Biradara) ಅವರು ಅಕ್ರಮ ಹಣ ಸಂಗ್ರಹಣೆಗೆ ಮಾಡಿದ ಉಪಾಯ ಇದೀಗ ಭಾರಿ ಸದ್ದು ಮಾಡಿದೆ. ಮಧ್ಯಾಹ್ನ ಎರಡು ಗಂಟೆಯಾದ್ರೂ ಶಾಂತಗೌಡ ಬಿರಾದಾರ ಅವರ ಮನೆಯಲ್ಲಿಟ್ಟ ಅಕ್ರಮ ಆಸ್ತಿಗಳನ್ನು ಎಸಿಬಿ ಅಧಿಕಾರಿಗಳ ಪತ್ತೆಹಚ್ಚುತ್ತಲೇ ಇದ್ದರು, ಮಧ್ಯಾಹ್ನದ ಊಟ ತರಿಸಿ ಅಲ್ಲಿಯೇ ತಿಂದು ನಂತರ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದರು.

  ಬಾತ್ ರೂಮ್ ಪೈಪನಲ್ಲಿ ಹಣ ಬಚ್ಚಿಟ್ಟ ಕುಳ
  ಕಲಬುರಗಿಯಲ್ಲಿ ದಾಳಿ ಪ್ರಕರಣದಲ್ಲಿ ಇಂದು ಬೆಳಿಗ್ಗೆ ಶಾಂತಗೌಡ ಬಿರಾದಾರ ಅವರ ಬಂಗಲೆಯ ಮೇಲೆ ಎಸಿಬಿ ಅಧಿಕಾರಿ ಗಳು ದಾಳಿ ನಡೆಸಿ ಇದ್ದ ಅಕ್ರಮ ವಸ್ತುಗಳನ್ನು ಕಂಡು ದಂಗಾಗಿದ್ದಾರೆ. ಮಧ್ಯಾಹ್ನವಾದರೂ ಬಿರಾದಾರ ಮನೆಯಲ್ಲಿ ಪರಿಶೀಲಿಸಿ ನಡೆಸಲಾಗಿತ್ತು.(bungalow this morning) ಮನೆಯನ್ನು ಪೂರ್ಣವಾಗಿ ಪರಿಶೀಲನೆ ನಡೆಸುತ್ತಿದ್ದಾಗ ಅಧಿಕಾರಿಗಳಿಗೆ ಒಂದು ಶಾಕ್‌ ಕಾದಿತ್ತು. ಶಾಂತಗೌಡ ಬಿರಾದಾರ ಮನೆಯ ಬಾತ್‌ ರೂಮ್‌‌ ಪೈಪ್‌ ನ್ನು ಬಿಡದೇ ಹಣ ಬಚ್ಚಿಟ್ಟಿದ್ದರು. ಕೂಡಲೇ ಬಾತ್‌ ಪೈಪ್ ನ್ನು ಕತ್ತರಿಸಿ 500 ರೂ ನೋಟುಗಳ ಕಂತೆ ಕಂತೆ ಹಣವನ್ನು ಹೊರ ತೆಗಸಿದ್ದಾರೆ. ಇದರ ವಿಡಿಯೋ ಇಲ್ಲಿದೆ:

  ಅದನ್ನು ಶೋಧಿಸಿದ ಅಧಿಕಾರಿಗಳು ಬಾತ್ ರೂಮ್ ಪೈಪನಲ್ಲಿ ಒಟ್ಟು 13 ಲಕ್ಷ 50 ಸಾವಿರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಿರಾದಾರ ಮನೆಯಲ್ಲಿ ಒಟ್ಟು 55 ಲಕ್ಷ ರೂ ನಗದು ಹಣ ಪತ್ತೆಯಾಗಿದೆ. ಈ ಕಾರ್ಯಾಚರಣೆಗೆ ಯಾವುದೆ ಅಡ್ಡಿಪಡೆಸದೇ ಜೆಇ ಶಾಂತಗೌಡ ಬಿರಾದಾರ ಸಹಕಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮನೆಯಲ್ಲಿನ ಟ್ರಜರಿ ಕೀಯನ್ನು ಕೊಡದೆ ಕೆಲಕಾಲ ಸತಾಯಿಸಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಲಾಕರ್ ಕತ್ತರಿಸುವ ಸಿಬ್ಬಂದಿ ಕರೆದು ಲಾಕರ್ ಕಟ್ (locker-cutting staff)ಮಾಡಿಸಿದ್ದಾರೆ ಎನ್ನಲಾಗಿದೆ. ಈ ಟ್ರಜರಿನಲ್ಲಿ ಭಾರಿ ಮೊತ್ತದ ಚಿನ್ನಾಭರಣ ಕೂಡಿಟ್ಟಿದ್ದರು.

  ಒತ್ತಡದಲ್ಲಿ ಜೆಇ(JE under pressure)

  ಎಸಿಬಿ ದಾಳಿಯಿಂದ‌ ಕಂಗೆಟ್ಟು ಶಾಂತಗೌಡ ಬಿರಾದಾರ ಅವರು ಮೌನಕ್ಕೆ ಶರಣಾಗಿದ್ದಾರೆ. ಯಾರೊಂದಿಗೂ ಸರಿಯಾಗಿ ಮಾತನಾಡದೇ ಒತ್ತಡಕೊಳ್ಳಗಾಗಿದ್ದಾರೆ.
  ಅಧಿಕಾರಿಗಳ ದಾಳಿಯನ್ನು ಮೌನದಿಂದ ನೋಡುತ್ತಾ ಮನೆಯ ಸೋಫಾ ಮೇಲೆ ಕೈ ಕಟ್ಟಿಕೊಂಡು ಕುಳಿತ ಬಿಟ್ಟಿದ್ದರು, ಶಾಂತಗೌಡ ಅವರು ಒತ್ತಡಕ್ಕೆ ಒಳಗಾದ ಹಿನ್ನಲೆ ವೈದ್ಯಕೀಯ ಸಿಬ್ಬಂದಿ(medical officer) ಕರೆಯಿಸಿ ತಪಾಸಣೆ ಮಾಡಲಾಗಿದೆ. ಎಸಿಬಿ ಕಾರ್ಯಚರಣೆ ನಡೆಯುತ್ತಿರುವಾಗಲೇ ಅವರ ಆರೋಗ್ಯ ದಲ್ಲಿ ಏರುಪೇರಾಗಬಹುದೆಂದು ವೈದ್ಯಾಧಿಕಾರನ್ನು  ಜೊತೆಗಿಟ್ಟುಕೊಂಡೆ ವಿಚಾರಣೆ ನಡೆಸಲಾಗಿದೆ.

  ಇದನ್ನು ಓದಿ:ACB Raid: ಬೆಳ್ಳಂಬೆಳಗ್ಗೆ ರಾಜ್ಯದ 60 ಕಡೆ 100 ಅಧಿಕಾರಿ, 300 ಸಿಬ್ಬಂದಿಯಿಂದ ದಾಳಿ

  ಎಸಿಬಿ ಎಸ್ಪಿ ಮೇಘಣ್ಣನವರ್ ಹೇಳಿಕೆ(Statement of ACB SP Meghananavar)

  ಎಸಿಬಿ ಅಧಿಕಾರಿಗಳ ತಂಡದಿಂದ ಶೋಧಕಾರ್ಯ ಇನ್ನು ಮುಂದುವರೆದಿದೆ. ಕಲಬುರಗಿ ಗುಬ್ಬಿ ಕಾಲೋನಿ ಮನೆಯಲ್ಲಿ 54 ಲಕ್ಷಕ್ಕೂ ಅಧಿಕ ನಗದು ಈವರೆಗೆ ಪತ್ತೆ‌‌‌‌ಯಾದರೆ, ಮನೆಯ ವಾಲ್ ಸೀಲಿಂಗ್ ಮೇಲೆ 6 ಲಕ್ಷ ನಗದು, 13.5 ಲಕ್ಷ ಪೈಪ್ ನಲ್ಲಿ ಪತ್ತೆಯಾಗಿದೆ ಎಂದು ಎಸಿಬಿ ಎಸ್ಪಿ ಮೇಘಣ್ಣನವರ್ ಅವರು ತಿಳಿಸಿದ್ದಾರೆ.
  ಇದರೊಂದಿಗೆ ಲಾಕರ್ ನ ಒಂದು ಬಾಕ್ಸ್ ನಲ್ಲಿ ೧೦೦ ಗ್ರಾಂ. ಚಿನ್ನಾಭರಣ ಪತ್ತೆಯಾಗಿದೆ. ಹಾಗೂ ತೋಟದ ಮನೆಯಲ್ಲೂ ವಾಹನಗಳು, ಐಶಾರಾಮಿ ರೂಂಗಳಿವೆ , ಜೊತೆಗೆ ಐಶಾರಾಮಿ ಕಾರುಗಳಿವೆ, ಟ್ರಾಕ್ಟರ್, ದ್ವಿಚಕ್ರ ವಾಹನಗಳಿವೆ ಇದರ ಜೊತೆಗೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದೆ . ಎಸಿಬಿ ಅಧಿಕಾರಿಗಳು ಸಂಜೆ 7 ಗಂಟೆಗೆ ವರೆಗೆ ಶೋಧಕಾರ್ಯಾಚರಣೆ ನಡೆಸಿ ಮಹತ್ವ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

  ಬಾತ್ ರೂಮ್ ಪೈಪ್ ನೋಡಲು ಜನವೋ ಜನ

  ಭ್ರಷ್ಟ್ರ ಅಧಿಕಾರಿ ಶಾಂತಗೌಡ ಬಿರಾದಾರ ಮನೆಯ ಬಾತ್ ರೂಮ್ ಪೈಪ್ ಪತ್ತೆಯಾದ ಹಣವನ್ನು ನೋಡಲು ಜನರು ಮುಗಿಬಿದ್ದ ಘಟನೆ ಕೂಡ ನಡೆದಿದೆ.
  ಎಸಿಬಿ ಅಧಿಕಾರಿಗಳಿಂದ ಪೈಪ್ ಕಟ್ ಮಾಡಿ ಬಕೆಟ್ ಹಿಡಿದು ಹಣ ಸಂಗ್ರಹ ಮಾಡಿದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಬಿರಾದಾರ ಮನೆಯತ್ತ ನೂರಾರು ಜನರು ಧಾವಿಸಿ ಬಾತ್ ರೂಮ್ ಪೈಪ್ ಇಟ್ಟಿದ ಹಣದ ಬಗ್ಗೆ ನೋಡುತ್ತ ದಂಗಾದ್ದರು. ಭಾರಿ ಕುತೂಹಲದಿಂದ ಶಾಂತಗೌಡನ ಮನೆಯ ಹಿಂಭಾಗ ಜಮಾಯಿಸುತ್ತಾ ಏನಾದರು ನೋಡಲು ಸಾಧ್ಯವೇ ಎಂದು ಇಣುಕಿ ನೋಡುತ್ತಿದ್ದರು. ಒಟ್ಟಿನಲ್ಲಿ ಅಕ್ರಮ ಹಣ ಇಟ್ಟಿದ್ದ ಭಷ್ಟ್ರ ಅಧಿಕಾರಿಯ ಐಡಿಯವನ್ನು ನೋಡಲು ಜನಸ್ತೋಮವೇ ಹರಿದು ಬಂದಿದೆ. ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಭ್ರಷ್ಟ ಅಧಿಕಾರಿ ಮನೆಯಿದೆ.

  ACB Raid: ಎಸಿಬಿ ದಾಳಿಗೆ ಒಳಗಾದ 15 ಅಧಿಕಾರಿಗಳ ಸಂಪೂರ್ಣ ವಿವರ ಇಲ್ಲಿದೆ

  ಏಕಕಾಲದಲ್ಲಿ ದಾಳಿ

  ಇಂದು ಕೆಎಎಸ್ ಅಧಿಕಾರಿ ಸೇರಿ ೧೫ ಮಂದಿ ಭ್ರಷ್ಟ ನೌಕರರ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು (ACB officials today raided the home of a KAS officer and a corrupt employee.)ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ರಾಜ್ಯದ ಸುಮಾರು ೬೦ ಕ್ಕೂ ಹೆಚ್ಚು ಕಡೆಗಳಲ್ಲಿ ೮ ಮಂದಿ ಎಸ್‌ಪಿಗಳು, ೧೦೦ ಮಂದಿ ಅಧಿಕಾರಿಗಳು ಸೇರಿ ೪೦೮ ಕ್ಕೂ ಹೆಚ್ಚಿನ ಸಿಬ್ಬಂದಿಯು ಏಕಕಾಲದಲ್ಲಿ ದಾಳಿ ಪತ್ತೆಹಚ್ಚಿರುವ ಚಿನ್ನ ಬೆಳ್ಳಿ ನಗದು ಬಂಗಲೆ ಮನೆಗಳು ನಿವೇಶನಗಳು ಆಸ್ತಿಪಾಸ್ತಿ ಕಂಡು ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಬಲೆಗೆ ಬಿದ್ದರುವ ಅಧಿಕಾರಿಗಳು ಗಳಿಸಿರುವ ಅಕ್ರಮ ಆಸ್ತಿ ಬಗ್ಗೆ ಬಂದ ನೂರಾರು ದೂರುಗಳ ಹಿನ್ನಲೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಏಕಕಾಲಕ್ಕೆ ದಾಳಿ ನಡೆಸಿದಾಗ ಪತ್ತೆಯಾದ ಅಕ್ರಮ ಆಸ್ತಿಪಾಸ್ತಿಗಳನ್ನು ಒಂದೆಡೆ ಕಲೆ ಹಾಕಿ ಲೆಕ್ಕ ಮಾಡುವುದೇ ಅಧಿಕಾರಿಗಳಿಗೆ ಸಾಕು ಸಾಕಾಗಿ ಹೋಗಿದೆ.
  Published by:vanithasanjevani vanithasanjevani
  First published: