ಭೂಸೇನಾ ನಿಗಮದ ಎಂಜಿನಿಯರ್ ವೀರಭದ್ರಪ್ಪ ನಿವಾಸದ ಮೇಲೆ ಎಸಿಬಿ ದಾಳಿ

news18
Updated:July 10, 2018, 3:33 PM IST
ಭೂಸೇನಾ ನಿಗಮದ ಎಂಜಿನಿಯರ್ ವೀರಭದ್ರಪ್ಪ ನಿವಾಸದ ಮೇಲೆ ಎಸಿಬಿ ದಾಳಿ
news18
Updated: July 10, 2018, 3:33 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ ( ಜುಲೈ 10) : ಕಲಬುರ್ಗಿಯಲ್ಲಿ ಇಂದು ಎಸಿಬಿ ದಾಳಿ ನಡೆದಿದೆ. ಕಲಬುರ್ಗಿಯ ಎನ್.ಜಿ.ಒ ಕಾಲೋನಿಯಲ್ಲಿ ಭೂಸೇನಾ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ವೀರಭದ್ರಪ್ಪ ಕಲಗುರ್ಕಿ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಎಸಿಪಿ ಡಿವೈಎಸ್ಪಿ ಜೇಮ್ಸ್ ಮಿಸೇಜಿಸ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಆದಾಯಕ್ಕಿಂತ ಅಧಿಕ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ.  ಒಂದು ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೀರಭದ್ರಪ್ಪ ಅವರಿಗೆ ಸಂಬಂಧಿಸಿ ಮೂರು ಕಡೆ ಏಕ ಕಾಲಕ್ಕೆ ದಾಳಿ ಮಾಡಲಾಗಿದೆ. ಎನ್.ಜಿ.ಓ ಕಾಲೋನಿಯಲ್ಲಿರುವ ನಿವಾಸ, ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ಮಲ್ಲಿಕಾರ್ಜುನ ಇಂಡಸ್ಟ್ರೀಸ್, ಸೇಡಂ ರಸ್ತೆಯಲ್ಲಿರುವ ಲ್ಯಾಂಡ್ ಆರ್ಮಿ ಕಛೇರಿಗಳಲ್ಲಿ ಏಕ ಕಾಲಕ್ಕೆ ದಾಳಿ ಮಾಡಲಾಗಿದೆ.

ಸದ್ಯ ಕೆಲಸದ ನಿಮಿತ್ಯ ವೀರಭದ್ರಪ್ಪ ಕಲಗುರ್ಕಿಬೆಂಗಳೂರಿಗೆ ತೆರಳಿದ್ದಾರೆ. ಮನೆಯಲ್ಲಿನ ಆಸ್ತಿಯ ದಾಖಲೆಗಳನ್ನು ಮತ್ತಿತರ ವಸ್ತುಗಳ ಪರಿಶೀಲನೆ ನಡೆಸಲಾಗಿದೆ. ಎಸಿಬಿ ಅಧಿಕಾರಿಗಳ ಪರಿಶೀಲನೆ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ಬೆಳಕಿಗೆ ಬಂದಿದೆ.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...