ರಾಜಧಾನಿ ಬೆಂಗಳೂರಿನಲ್ಲಿ ಎಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ

ಇನ್ನು ಪತ್ತೆಯಾದ ದಾಖಲೆಗಳ ಮೂಲ ಕೆದುಕಲು ಮುಂದಾದ ಎಸಿಬಿ ಅಧಿಕಾರಿಗಳು ಪಾಂಡುರಂಗ್ ಗರಗ್ ಜನ್ಮಜಾಲಾಡಿದ್ದಾರೆ. ಅಸಲಿಗೆ ಪಾಂಡುರಂಗ ಗರಗ್ ಕುಟುಂಬ ಮೂಲತಃ ರೈತಕುಟುಂಬ ವಾಗಿದ್ದು, ಗರಗ್ ರವರು ಕೆಎಎಸ್ ಅಧಿಕಾರಿಯಾಗಿ, ಸದ್ಯ ಸಹಕಾರ ಸಂಘಗಳ ಜಂಟಿ ನಿಬಂಧಕನಾಗಿ ಕಾರ್ಯನಿರ್ವಹಿಸುತಿದ್ದಾರೆ.

ದಾಳಿನಿರತ ಎಸಿಬಿ ಅಧಿಕಾರಿಗಳು.

ದಾಳಿನಿರತ ಎಸಿಬಿ ಅಧಿಕಾರಿಗಳು.

  • Share this:
ಬೆಂಗಳೂರು: ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ನಿದ್ದೆ ಕೆಡಿಸಿದ ಎಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲೂ ತಮ್ಮ ಭೇಟೆ ಮುಂದುವರೆಸಿದ್ದಾರೆ. ಸಹಕಾರ ಸಂಘಗಳ ಜಂಟಿ ನಿಬಂಧಕನಿಗೆ ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ ಎಸಿಬಿ ಅಧಿಕಾರಿಗಳು ಐದು ಕಡೆ ತಲಾಶ್ ನಡೆಸಿದ್ದಾರೆ. ಹೌದು, ಬೆಳ್ಳಂಬೆಳಗ್ಗೆ ಸಹಕಾರ ಸಂಘಗಳ ಜಂಟಿ ನಿಬಂಧಕ ಪಾಂಡುರಂಗ ಗರಗ್ ಗೆ ಎಸಿಬಿ ಶಾಕ್ ನೀಡಿದೆ. ಪಾಂಡುರಂಗ ಗರಗ್ ಗೆ ಸೇರಿದ ವಿಜಯನಗರದ ನಿವಾಸ, ಜಯನಗರ ಫ್ಲ್ಯಾಟ್, ಜಯನಗರದ ಪಾಂಡುರಂಗ ಅತ್ತೆ ಮನೆ,ಮಲ್ಲೇಶ್ವರಂ ನ ಕಚೇರಿ ಹಾಗೂ ಚಿತ್ರದುರ್ಗದ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಬೆಳಿಗ್ಗೆಯಿಂದ ತಡರಾತ್ರಿವರೆಗೂ ತಲಾಶ್ ನಡೆಸಿತು.

ಇನ್ನು ಪಾಂಡುರಂಗ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಬೆಳಿಗ್ಗೆ 7 ಗಂಟೆಗೆ ಪಾಂಡುರಂಗಗೆ ಸೇರಿದ ಐದು ಕಡೆ ದಾಳಿ ಮಾಡಿದ್ದರು. ಇನ್ನು ಬಹು ಮುಖ್ಯವಾಗಿ ವಿಜಯನಗರದ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಲ್ಲಿ ಪತ್ತೆಯಾದ ಚಿನ್ನಾಭರಣ ಹಾಗೂ ಬೆಳ್ಳಿ ಕಂಡು ಒಮ್ಮೆಲೆ ದಂಗಾಗಿ ಹೊಗಿದ್ದಾರೆ. ಅಸಲಿಗೆ ಸಹಕಾರ ಸಂಘಗಳ ಜಂಟಿ ನಿಬಂಧಕ ಪಾಂಡುರಂಗ ಮೇಲೆ ದಾಳಿ ಮಾಡಿದ ಎಸಿಬಿಗೆ ಸಿಕ್ಕ ಆಸ್ತಿ- ಪಾಸ್ತಿ ವಿವರ ಇಂತಿದೆ.

ಪಾಂಡುರಂಗಗೆ ಸೇರಿದ 2 ನಿವಾಸ, 1 ಫ್ಲ್ಯಾಟ್ ಪತ್ತೆಯಾಗಿದೆ, ಪಾಂಡುರಂಗಗೆ ಸೇರಿದ 1ಕೆಜಿ 166ಗ್ರಾಂ ಚಿನ್ನ, 31 ಕೆಜಿ ಬೆಳ್ಳಿ ಸಾಮನು, 20 ಲಕ್ಷ ಮೌಲ್ಯದ ವಿಮಾ ಪಾಲಿಸಿಗಳು, 10 ಎಕೆರೆ ಕೃಷಿ ಜಮೀನು, 4.40 ಲಕ್ಷ ನಗದು, 20 ಲಕ್ಷ ಮೌಲ್ಯದ ಗೃಹ ಉಪಯೋಗಿ ವಸ್ತುಗಳು ಪತ್ತೆಯಾಗಿವೆ. ಉಳಿದಂತೆ ಮೂರು ಕಾರ್, ಒಂದು ಟ್ರಾಕ್ಟರ್, 3 ದ್ವಿಚಕ್ರವಾಹನ ಪತ್ತೆಯಾಗಿದೆ.

ಇದನ್ನೂ ಓದಿ: ಪ್ರಲ್ಹಾದ್​ ಜೋಶಿಗೆ ಕೇರಳ ಚುನಾವಣಾ ಉಸ್ತುವಾರಿ, ಅಶ್ವತ್ಥ ನಾರಾಯಣಗೆ ಸಹ ಉಸ್ತುವಾರಿ

ಇನ್ನು ಪತ್ತೆಯಾದ ದಾಖಲೆಗಳ ಮೂಲ ಕೆದುಕಲು ಮುಂದಾದ ಎಸಿಬಿ ಅಧಿಕಾರಿಗಳು ಪಾಂಡುರಂಗ್ ಗರಗ್ ಜನ್ಮಜಾಲಾಡಿದ್ದಾರೆ. ಅಸಲಿಗೆ ಪಾಂಡುರಂಗ ಗರಗ್ ಕುಟುಂಬ ಮೂಲತಃ ರೈತಕುಟುಂಬ ವಾಗಿದ್ದು, ಗರಗ್ ರವರು ಕೆಎಎಸ್ ಅಧಿಕಾರಿಯಾಗಿ, ಸದ್ಯ ಸಹಕಾರ ಸಂಘಗಳ ಜಂಟಿ ನಿಬಂಧಕನಾಗಿ ಕಾರ್ಯನಿರ್ವಹಿಸುತಿದ್ದಾರೆ. ಇನ್ನು ನಿವೃತ್ತಿಗೆ ಇನ್ನು ಐದು ತಿಂಗಳು ಬಾಕಿ ಇದೆ ಎನ್ನಲಾಗಿದ್ದು, ಸದ್ಯ ನಡೆದ ಎಸಿಬಿ ಅಧಿಕಾರಿಗಳ ದಾಳಿ, ಪಾಂಡುರಂಗನ ಕಜಾನೆಗೆ ಕೊಳ್ಳಿ ಇಟ್ಟಂಗಾಗಿದೆ.

ಸದ್ಯ ಪಾಂಡುರಂಗನ ಸಂಪತ್ತಿನ ಲೆಕ್ಕಾಚರ ಮುಂದುವರೆಸಿರುವ ಎಸಿಬಿ ಅಧಿಕಾರಿಗಳು, ಗಳಿಕೆ ಮಾಡಿದ ಒಟ್ಟಾರೆ ಆಸ್ತಿಗಳ ಮೂಲ ಹುಡುಕಲು ಹೊರಟಿದ್ದಾರೆ..ಆಸ್ತಿ ಮತ್ತು ಬ್ಯಾಂಕ್ ಖಾತೆಗಳ ಪರಿಶೀಲನೆ ಮುಂದುವರೆದಿದೆ..ಹಣದ ವ್ಯವಹಾರದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ..ನ್ನು ಈ ಸಂಬಂಧ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗಲು ಪಾಂಡುರಂಗನಿಗೆ ಬುಲಾವ್ ಮಾಡಲಿದ್ದು, ಇದರಲ್ಲಿ ಎಷ್ಟು ಸಕ್ರಮ ಎಷ್ಟು ಅಕ್ರಮ ಅನ್ನೊದು ಬಯಲಾಗಲಿದೆ..
Published by:MAshok Kumar
First published: