6 ಫ್ಲಾಟ್‌ಗಳು ನಿಮ್ಮ ಹೆಸರಲ್ಲಿರುವುದು ನಿಮಗೆ ಗೊತ್ತಿಲ್ವಾ?; ಎಸಿಬಿ ಪ್ರಶ್ನೆಗೆ ತಬ್ಬಿಬ್ಬಾದ ಗೌಡಯ್ಯ ಪತ್ನಿ!

news18
Updated:October 10, 2018, 11:55 AM IST
6 ಫ್ಲಾಟ್‌ಗಳು ನಿಮ್ಮ ಹೆಸರಲ್ಲಿರುವುದು ನಿಮಗೆ ಗೊತ್ತಿಲ್ವಾ?; ಎಸಿಬಿ ಪ್ರಶ್ನೆಗೆ ತಬ್ಬಿಬ್ಬಾದ ಗೌಡಯ್ಯ ಪತ್ನಿ!
news18
Updated: October 10, 2018, 11:55 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಅ.10): ಬಿಡಿಎ ಎಂಜಿನಿಯರ್ ಗೌಡಯ್ಯನ ಮನೆ ಮೇಲೆ ಎಸಿಬಿ ಅಧಿಕಾರಿಗಳು ಕಳೆದ ವಾರ ದಾಳಿ ನಡೆಸಿ, ವಶಕ್ಕೆ ಪಡೆದ ಅಕ್ರಮ ಸಂಪತ್ತು ಮೂಲದ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ. ಗೌಡಯ್ಯ ತನ್ನ ಹೆಸರಿನಲ್ಲಿ ಮಾತ್ರವಲ್ಲದೇ, ಇಡೀ ಕುಟುಂಬದ ಹೆಸರಿನಲ್ಲಿ ಆಸ್ತಿ ಮಾಡಿರುವುದು ಇದೀಗ ಕುಟುಂಬ ಸದಸ್ಯರನ್ನೂ  ಸಂಕಷ್ಟಕ್ಕೆ ಸಿಲುಕಿದೆ!

ಗೌಡಯ್ಯನ ಬೇನಾಮಿ ಆಸ್ತಿಯಲ್ಲಿ ಬಹುಪಾಲು ಧರ್ಮಪತ್ನಿಯ ಹೆಸರಿನಲ್ಲಿ ಇದೆ. ಪತ್ನಿ ಮಾತ್ರ ಅಲ್ಲ ಸಹೋದರ ರಾಮಲಿಂಗೇಗೌಡನ ಹೆಸರಲ್ಲಿ ಕೋಟಿ ಕೋಟಿ ಆಸ್ತಿಯನ್ನು ಗೌಡಯ್ಯ ಮಾಡಿದ್ದಾರೆ. ದಾಳಿಯ ವೇಳೆ ಗೌಡಯ್ಯ ಪತ್ನಿ ಹೆಸರಿನಲ್ಲಿ ಸಿಕ್ಕ ದಾಖಲೆ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳ ಅದರ ಆಧಾರದ ಮೇಲೆ ಪತ್ನಿಯನ್ನು ವಿಚಾರಣೆ ನಡೆಸಿದ್ದಾರೆ. ಗೌಡಯ್ಯನ ಜೊತೆ ವಿಚಾರಣೆಗೆ ಹಾಜರಾಗಿದ್ದ ಗೌಡಯ್ಯನ ಪತ್ನಿ ಎಸಿಬಿ ಅಧಿಕಾರಿಗಳ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ.

ದಾಳಿ ವೇಳೆ 14 ಫ್ಲಾಟ್‌ಗಳ ದಾಖಲೆ ಪತ್ರಗಳು ದೊರಕ್ಕಿದ್ದವು. ಇವುಗಳಲ್ಲಿ ಆರು ಫ್ಲಾಟ್​ಗಳು ಗೌಡಯ್ಯ ಪತ್ನಿ ಹೆಸರಲ್ಲಿಇವೆ. ಈ ವಿಚಾರವಾಗಿ ಎಸಿಬಿ ಅಧಿಕಾರಿಗಳು ಅವರನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ: ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ; ಪೊಲೀಸರಿಂದ ಇಂದು ಮತ್ತೆ ವಿಚಾರಣೆ

14 ಫ್ಲಾಟ್​ಗಳ ಪೈಕಿ, 6 ಫ್ಲಾಟ್‌ಗಳು ನಿಮ್ಮ ಹೆಸರಲ್ಲಿಯೇ ಇದೆ ಹಾಗಾದ್ರೆ ನಿಮಗೆ ಗೊತ್ತಿಲ್ವಾ..? ಎಂದು ಅಧಿಕಾರಿಗಳು ಪ್ರಶ್ನಿಸಿದಾಗ ಗೌಡಯ್ಯ ಪತ್ನಿ ಉತ್ತರಿಸಲಾಗದೆ ತಬ್ಬಿಬ್ಬಾಗಿದ್ದಾರೆ. ನಂತರ ಅವರ ನೀಡಿದ ಹೇಳಿಕೆ ದಾಖಲಿಸಿಕೊಂಡು ವಿಚಾರಣೆಗೆ ಕರೆದಾಗ ಬರಬೇಕು ಎಂದು ಹೇಳಿ ಕಳುಹಿಸಿದ್ದಾರೆ.ಅಮಾನತು ಯಾವಾಗ?

ಕಳೆದ ವಾರ ಇಬ್ಬರು ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಆದಾಯಕ್ಕೂ ಮೀರಿದ ಸಂಪತ್ತನ್ನು ವಶಕ್ಕೆ ಪಡೆದಿದ್ದರು. ಮೇಲ್ನೋಟಕ್ಕೆ ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವುದು ಕಂಡುಬರುತ್ತಿದ್ದು, ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಎಸಿಬಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಎಲ್​. ಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ. ಇನ್ನು ಗೌಡಯ್ಯನ ಅಮಾನತು ಯಾವಾಗ ಎಂಬುದನ್ನು ಕಾದುನೋಡಬೇಕಿದೆ.
First published:October 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ