ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣ: ‘ಟೈಪಿಸ್ಟ್’ ಮೋಹನ್ ಬಂಧನ; ವಿಚಾರಣೆ ವೇಳೆ ಮಹತ್ವದ ವಿಚಾರ ಬೆಳಕಿಗೆ

ವಿಧಿವಿಜ್ಞಾನ ಪ್ರಯೋಗಾಲಯದಿಂದ ಮೋಹನ್ ಮಾಡಿರುವ ಕರೆ ಮತ್ತು ಮೆಸೇಜ್​ಗಳ ವಿವರಗಳು ಸಿಕ್ಕ ಬಳಿಕ ಈ ಪ್ರಕರಣದಲ್ಲಿ ಇನ್ನಷ್ಟು ಟ್ವಿಸ್ಟ್ ಸಿಕ್ಕುವ ಸಾಧ್ಯತೆ ಇದೆ.

Vijayasarthy SN | news18
Updated:January 8, 2019, 11:25 PM IST
ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣ: ‘ಟೈಪಿಸ್ಟ್’ ಮೋಹನ್ ಬಂಧನ; ವಿಚಾರಣೆ ವೇಳೆ ಮಹತ್ವದ ವಿಚಾರ ಬೆಳಕಿಗೆ
ಮೋಹನ್
Vijayasarthy SN | news18
Updated: January 8, 2019, 11:25 PM IST
- ಕಿರಣ್ ಕೆ.ಎನ್.,

ಬೆಂಗಳೂರು(ಜ. 08): ಮೊನ್ನೆಮೊನ್ನೆ ವಿಧಾನಸೌಧದಲ್ಲಿ ಹಣದ ಚೀಲ ಸಾಗಿಸುವಾಗ ಸಿಕ್ಕಿಬಿದ್ದಿದ್ದ ಮೋಹನ್ ಅವರನ್ನು ಎಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಇದಕ್ಕೂ ಮುನ್ನ ಪೊಲೀಸ್ ವಿಚಾರಣೆಯಲ್ಲಿ ಮೋಹನ್ ಹಲವು ಸ್ಫೋಟಕ ಮಾಹಿತಿ ನೀಡಿರುವುದು ತಿಳಿದುಬಂದಿದೆ. ಕಳೆದ ಶುಕ್ರವಾರಂದು ವಿಧಾನಸೌಧದ ವೆಸ್ಟ್ ಗೇಟ್ ಬಳಿ ಮೋಹನ್ ಅವರು 25.76 ಲಕ್ಷ ರೂ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಈ ದುಡ್ಡನ್ನು ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಲಂಚದ ರೂಪದಲ್ಲಿ ತಂದಿದ್ದಾಗಿ ಮೋಹನ್ ಒಪ್ಪಿಕೊಂಡಿದ್ದಾರೆ. ಮಲ್ಲೇಶ್ವರಮ್​ನಲ್ಲಿರುವ ಮೋಹನ್ ಮನೆಯನ್ನು ತಪಾಸಣೆ ಮಾಡಿದ ಎಸಿಬಿ ಅಧಿಕಾರಿಗಳಿಗೆ ಆತನ ಮೊಬೈಲ್ ಸಿಕ್ಕಿದೆ. ಈ ಮೊಬೈಲನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಗೆಯೇ ಮೋಹನ್ ಬಳಿ ಇರುವ ಹಾರ್ಡ್ ಡಿಸ್ಕ್​ನಿಂದ ಕೆಲ ದಾಖಲೆಗಳನ್ನು ಪಡೆಯಲಾಗಿದೆ. ಆತನ ಮನೆಯ ಮಹಜರು ನಡೆಸಿದ ಬಳಿಕ ಎಸಿಬಿ ಪೊಲೀಸರು ಮೋಹನ್​ನನ್ನು ಬಂಧಿಸಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದಿಂದ ಮೋಹನ್ ಮಾಡಿರುವ ಕರೆ ಮತ್ತು ಮೆಸೇಜ್​ಗಳ ವಿವರಗಳು ಸಿಕ್ಕ ಬಳಿಕ ಈ ಪ್ರಕರಣದಲ್ಲಿ ಇನ್ನಷ್ಟು ಟ್ವಿಸ್ಟ್ ಸಿಕ್ಕುವ ಸಾಧ್ಯತೆ ಇದೆ. ಇದೂವರೆಗಿನ ವಿಚಾರಣೆಯಲ್ಲಿ ಮೋಹನ್ ಈ 25 ಲಕ್ಷ ರೂಪಾಯಿಯ ಮೂಲದ ಬಗ್ಗೆ ಬಾಯಿಬಿಟ್ಟಿದ್ದಾರೆ.

ಟೈಪಿಸ್ಟ್ ಅಲ್ಲ ಈ ಮೋಹನ್:
ವಿಧಾನಸೌಧದಲ್ಲಿ ಹಣದ ಸಮೇತ ಸಿಕ್ಕಿಬಿದ್ದಾಗ ತಾನು ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ಟೈಪಿಸ್ಟ್ ಎಂದು ಈತ ಹೇಳಿಕೊಂಡಿದ್ದು ಹಸಿ ಸುಳ್ಳು ಎನ್ನಲಾಗಿದೆ. ಈತ ಟೈಪಿಸ್ಟ್ ಆಗಿಯೇ ಇರಲಿಲ್ಲ. ಈತ ವಿವಿಧ ರಾಜಕೀಯ ಮುಖಂಡರ ಕಚೇರಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ಒಬ್ಬ ಬ್ರೋಕರ್ ಎನ್ನಲಾಗಿದೆ.

ಮೂಲತಃ ಎಲೆಕ್ಟ್ರಿಶಿಯನ್ ಆಗಿದ್ದ ಮೋಹನ್ 2001ರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಶಿಯನ್ ಆಗಿ ಕೆಲಸಕ್ಕೆ ಸೇರಿರುತ್ತಾರೆ. ಇವರ ಈ ಗುತ್ತಿಗೆಯು ಇಲ್ಲಿಯವರೆಗೆ ನವೀಕರಣ ಆಗುತ್ತಲೇ ಬಂದಿದೆ. ಸರಕಾರದ ಮಟ್ಟದಲ್ಲಿ ಒಂದಷ್ಟು ಪ್ರಭಾವಿಗಳ ಸಂಪರ್ಕ ಹೊಂದಿದ್ದ ಈತ ನ್ಯಾಷನಲ್ ಪಾರ್ಕ್​ನಲ್ಲಿ ಪ್ರಾಣಿಗಳಿಗೆ ಮಾಂಸ ಸರಬರಾಜು ಮಾಡುವ ಗುತ್ತಿಗೆಯನ್ನೂ ಪಡೆದಿರುತ್ತಾರೆ.
Loading...

ಇವರು ಚೆನ್ನಗಪ್ಪ. ಸಿಟಿ ರವಿ, ಬಿಸಿ ಪಾಟೀಲ್, ರೋಷನ್ ಬೇಗ, ಉಮಾಶ್ರೀ ಹಾಗೂ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಕೆಲಸವನ್ನೂ ಮಾಡಿದ್ದಾರೆ. ಸಚಿವರಿಂದ ಕೆಲಸ ಮಾಡಿಸಿಕೊಳ್ಳಲು ಲಂಚದ ಹಣ ಸಂಗ್ರಹಿಸಿ ಅದನ್ನು ಸಚಿವರಿಗೆ ತಲುಪಿಸುವುದು ಈತನ ಕಾಯಕ. ಶುಕ್ರವಾರ ವಿಧಾನಸೌಧದಲ್ಲಿ ಸಿಕ್ಕ ಹಣವನ್ನು ಈತ ಅನಂತ, ಕೃಷ್ಣಮೂರ್ತಿ, ನಂದಾ, ಶ್ರೀನಿಧಿ ಸೇರಿ 5 ಮಂದಿಯಿಂದ ಹಣ ಸಂಗ್ರಹಿಸಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626