• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Araga Jnanendra: ಗೃಹ ಸಚಿವರ ನಿವಾಸಕ್ಕೆ ABVP ಮುತ್ತಿಗೆ; ಇಂಟಲಿಜೆನ್ಸ್ ವೈಫಲ್ಯ ಒಪ್ಪಿಕೊಂಡ ನಗರ ಪೊಲೀಸ್ ಆಯುಕ್ತ

Araga Jnanendra: ಗೃಹ ಸಚಿವರ ನಿವಾಸಕ್ಕೆ ABVP ಮುತ್ತಿಗೆ; ಇಂಟಲಿಜೆನ್ಸ್ ವೈಫಲ್ಯ ಒಪ್ಪಿಕೊಂಡ ನಗರ ಪೊಲೀಸ್ ಆಯುಕ್ತ

ಗೃಹ ಸಚಿವ ಅರಗ ಜ್ಞಾನೇಂದ್ರ

ಗೃಹ ಸಚಿವ ಅರಗ ಜ್ಞಾನೇಂದ್ರ

ನಮ್ಮವರು ಮುನ್ಸೂಚನೆ ಕಲೆಕ್ಟ್ ಮಾಡಬೇಕಿತ್ತು. ಅದು ಅಗಲಿಲ್ಲ. ಈಗಾಗಲೇ ಹೆಚ್ಚುವರಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ತಪ್ಪು ಕಂಡು ಬಂದರೆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ.

  • Share this:

ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ರಾಜೀನಾಮೆ, SDPI ಮತ್ತು PFI ನಿಷೇಧಕ್ಕೆ ಒತ್ತಾಯಿಸಿ ಇಂದು ಎಬಿವಿಪಿ ಕಾರ್ಯಕರ್ತರು (ABVP Activist) ದಿಢೀರ್ ಪ್ರತಿಭಟನೆ ನಡೆಸಿದರು. ಅಸಮರ್ಥ ಸಿಎಂ ಬಸವರಾಜ್ ಬೊಮ್ಮಾಯಿ‌ ಎಂದು ಘೋಷಣೆ  ಕೂಗುತ್ತಾ ಬಂದ ಕಾರ್ಯಕರ್ತರು ಗೃಹ ಸಚಿವರ ನಿವಾಸದೊಳಗೆ ನುಗ್ಗಲು ಪ್ರಯತ್ನಿಸಿದರು. ಕೆಲವರು ಮುಂಭಾಗದ ಗೇಟ್ ಜಿಗಿದು, ಒಳ ಪ್ರವೇಶಿಸಿದ್ದರು. ಆದ್ರೆ ಈ ವೇಳೆ ಸಚಿವರ ನಿವಾಸದ ಭದ್ರತೆಯ ಕರ್ತವ್ಯದಲ್ಲಿ ಕೇವಲ ಏಳೆಂಟು ಪೊಲೀಸ್ (Police) ಸಿಬ್ಬಂದಿ ಮಾತ್ರ ಸ್ಥಳದಲ್ಲಿದ್ದರು. 50ಕ್ಕೂ ಅಧಿಕ ಕಾರ್ಯಕರ್ತರನ್ನು ನಿಯಂತ್ರಿಸಲು ಒಂದು ಕ್ಷಣ ಪೊಲೀಸರು ಕಷ್ಟವಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲಾ ಕಾರ್ಯಕರ್ತರನ್ನು ವಶಕ್ಕೆ (Detained) ಪಡೆದುಕೊಂಡರು.


ಇಷ್ಟು ದೊಡ್ಡ ಪ್ರಮಾಣದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮಾಹಿತಿ ಪೊಲೀಸರಿಗೆ ಇರಲಿಲ್ಲ. ಇದೀಗ ಮತ್ತೊಮ್ಮೆ ರಾಜ್ಯದ ಗುಪ್ತಚರ ಇಲಾಖೆ ವೈಫಲ್ಯ ಕಂಡು ಬಂದಿದೆ. ಇದನ್ನು ಸ್ವತಃ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.


ಇಂಟಲಿಜೆನ್ಸ್ ವೈಫಲ್ಯ


ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಇದು ಒಪ್ಪಿಕೊಳ್ಳುವಂತ ವಿಚಾರ ಅಲ್ಲ ಈ ಬಗ್ಗೆ ಮೊದಲೇ ಮುನ್ಸೂಚನೆ ಅರಿತು ಕೊಳ್ಳಬೇಕಿತ್ತು, ಅದು ನಮ್ಮಿಂದ ಆಗಿಲ್ಲ ಎಂದು ಪರೋಕ್ಷವಾಗಿ ಇಂಟಲಿಜೆನ್ಸ್ ವೈಫಲ್ಯ ಒಪ್ಪಿಕೊಂಡರು.


ನಮ್ಮ ಡಿಸಿಪಿ, ಹೆಚ್ಚುವರಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮಗೆ ಹತ್ತು ಗಂಟೆ ವಿಚಾರ ಗೊತ್ತಾಯ್ತು. ಗೃಹ ಸಚಿವರಿಗೆ ಮನವಿ ಪತ್ರ ಕೊಟ್ಟು, ಮೌನ ಪ್ರತಿಭಟನೆ ಮಾಡ್ತಾರೆ ಅಂತ ಮಾಹಿತಿ ಇತ್ತು. ಅಲ್ಲಿ ರೆಸಿಡೆನ್ಸಿಷಿಯಲ್ ಗಾರ್ಡ್ ಇದ್ದರು.


ಕಾನೂನು ಕ್ರಮ ಖಂಡಿತ


ಮೊದಲು ಮೌನವಾಗಿ ಪ್ರತಿಭಟನೆ ಮಾಡ್ತಿದ್ರು ಅಂತ ಗೊತ್ತಾಗಿದೆ.. ನಂತರ ಅಲ್ಲಿದ್ದ ಸಿಬ್ಬಂದಿ ಗೇಟ್ ಮುಚ್ಚಿದ್ದಾರೆ. ನಂತರ ಗೇಟ್ ತಳ್ಳಿಕೊಂಡು ಒಳ ನುಗ್ಗಲು ಪ್ರಯತ್ನಿಸಿದ್ದಾರೆ. ನಮ್ಮ ಪೊಲೀಸರು ಅವರನ್ನು ಹಿಡಿದುಕೊಂಡು, ವಶಕ್ಕೆ ಪಡೆದಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.


ಇದನ್ನೂ ಓದಿ:  CET Results 2022: ಈ ಬಾರಿ ಹುಡುಗರೇ ಟಾಪ್, ಈ ವಿಭಾಗದವರಿಗೆ ಸಿಕ್ಕಿದೆ ಗ್ರೇಸ್ ಮಾರ್ಕ್ಸ್


ನಮ್ಮವರು ಮುನ್ಸೂಚನೆ ಕಲೆಕ್ಟ್ ಮಾಡಬೇಕಿತ್ತು. ಅದು ಅಗಲಿಲ್ಲ. ಈಗಾಗಲೇ ಹೆಚ್ಚುವರಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ತಪ್ಪು ಕಂಡು ಬಂದರೆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಗೃಹ ಸಚಿವರಿಗು ಮಾಹಿತಿ ನೀಡಲಾಗಿದೆ, ನಾವು ಮಾತಾಡಿದ್ದೇವೆ. ಸಿಎಆರ್ ಗಾರ್ಡ್ ಇರುವಾಗ ಮನೆಗೆ ನುಗ್ಗುವುದು ಒಪ್ಪುವಂತದ್ದಲ್ಲ ಎಂದರು.


ಗೃಹ ಸಚಿವರ ನಿವಾಸಕ್ಕೆ ಸಂದೀಪ್ ಪಾಟೀಲ್ ಭೇಟಿ


ಗೃಹ ಸಚಿವರ ನಿವಾಸಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ, ಪರಶೀಲನೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಬೆಳಗ್ಗೆ 9.30 ಕ್ಕೆ ಕೆಲವು ಎವಿಬಿಪಿ ಕಾರ್ಯಕರ್ತ ಏಕಾಏಕಿ ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡೋಕೆ ಮುಂದಾದಾಗ ಸ್ಥಳದಲ್ಲಿ ಬಂದೋಬಸ್ತ್ ನಲ್ಲಿದ್ದ ಸಿಆರ್, ಸ್ಥಳೀಯ ಪೊಲೀಸರು ಗೇಟ್ ಹತ್ತಿರವೇ ಅವರನ್ನ ನಿಲ್ಲಿಸಿದ್ದರು.


ಇದನ್ನೂ ಓದಿ:  Siddaramaiah: ಧರ್ಮಕ್ಕಾಗಿ ಕೊಲೆ ಮಾಡಿದ್ದೇವೆ ಎಂದವರನ್ನು ಯಾವ ದೇವರೂ ಕ್ಷಮಿಸಲಾರ -ಬಹಿರಂಗ ಪತ್ರದಲ್ಲಿ ಸಿದ್ದರಾಮಯ್ಯ ಆಕ್ರೋಶ


40 ಜನರ ದಸ್ತಗಿರಿ


ಇದನ್ನು ಲೆಕ್ಕಿಸದೇ ಗೇಟ್ ಓಪನ್ ಮಾಡಿಕೊಂಡು ಮನೆ ಒಳಗೆ ನುಗ್ಗುವ ಪ್ರಯತ್ನ ಪಟ್ಟಾಗ ಪೊಲೀಸರು ಅವರನ್ನ ವಶಕ್ಕೆ ಪಡೆದುಕೊಂಡು. ಈಗಾಗಲೇಸುಮಾರು 40 ಜನರನ್ನ ದಸ್ತಗಿರಿ ಮಾಡಿದ್ದೀವಿ. ಮತ್ತೆ ವಿವರವಾದ ವರದಿಯನ್ನು ಡಿಸಿಪಿ ನೀಡ್ತಾರೆ. ಭದ್ರತೆ ನೀಡುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು

Published by:Mahmadrafik K
First published: