HOME » NEWS » State » ABSCOND COMPLAINT REGESTER AGAINST REBEL CONGRESS MLAS HK

ಯಲ್ಲಾಪುರದ ಶಾಸಕರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ ಉತ್ತರ ಕನ್ನಡ ಕಾಂಗ್ರೆಸ್ ಜಿಲ್ಲಾ ಸಮಿತಿ

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್​​ ಹೆಬ್ಬಾರ್ ಶಾಸಕ ಸ್ಥಾನಕ್ಕೆ ಕೆಲವು ದಿನಗಳ ಹಿಂದೆ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು. ನಮ್ಮ  ಕಾಂಗ್ರೆಸ್ ಪಕ್ಷದ ಯಲ್ಲಾಪುರ  ವಿಧಾನಸಭೆ ಕ್ಷೇತ್ರದ ಶಾಸಕರಾದ ಶಿವರಾಮ್ ಹೆಬ್ಬಾರ್​ ಅವರ ಸುಮಾರು 10 ದಿನಗಳಿಂದ ಕಾಣೆಯಾಗಿದ್ದಾರೆ.

G Hareeshkumar | news18
Updated:July 18, 2019, 5:20 PM IST
ಯಲ್ಲಾಪುರದ ಶಾಸಕರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ ಉತ್ತರ ಕನ್ನಡ ಕಾಂಗ್ರೆಸ್ ಜಿಲ್ಲಾ ಸಮಿತಿ
ಶಾಸಕ ಶಿವರಾಮ್​​​ ಹೆಬ್ಬಾರ್
  • News18
  • Last Updated: July 18, 2019, 5:20 PM IST
  • Share this:
ಬೆಂಗಳೂರು(ಜುಲೈ 18) : ಶಾಸಕ ಶಿವರಾಮ್​ ಹೆಬ್ಬಾರ್ ಎಲ್ಲಿದ್ದಾರೆ ದಯವಿಟ್ಟು ಹುಡುಕಿಕೊಡಿ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪೊಲೀಸ್ ಠಾಣೆಯಲ್ಲಿ​​ ದೂರು ದಾಖಲಿಸಿದ್ದಾರೆ. ಶಿರಸಿ ಡಿವೈಎಸ್​ಪಿ​ ಕಚೇರಿಗೆ ತೆರಳಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನಿಯೋಗ ದೂರು ಸಲ್ಲಿಸಿದೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್​​ ಹೆಬ್ಬಾರ್ ಶಾಸಕ ಸ್ಥಾನಕ್ಕೆ ಕೆಲವು ದಿನಗಳ ಹಿಂದೆ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು. 'ನಮ್ಮ ಕಾಂಗ್ರೆಸ್ ಪಕ್ಷದ ಯಲ್ಲಾಪುರ  ವಿಧಾನಸಭೆ ಕ್ಷೇತ್ರದ ಶಾಸಕರಾದ ಶಿವರಾಮ್ ಹೆಬ್ಬಾರ್​ ಅವರು ಸುಮಾರು 10 ದಿನಗಳಿಂದ ಕಾಣೆಯಾಗಿದ್ದಾರೆ. ಶಾಸಕರನ್ನು ಸಂಪರ್ಕಿಸಲು ಸತತವಾಗಿ ಅನೇಕ ಬಾರಿ ಪ್ರಯತ್ನಪಟ್ಟರು ಫಲಕಾರಿಯಾಗಿಲ್ಲ. ಈ ಕ್ಷೇತ್ರದ  ಜನತೆಗೆ ಕುಡಿಯುವ ನೀರಿನ ಅಭಾವ ತಲೆದೋರಿದೆ. ಬರಗಾಲ ಪೀಡಿತ ಪ್ರದೇಶವಾಗಿರುವುದರಿಂದ ಜನತೆ ಕಂಗಾಲಾಗಿದ್ದಾರೆ. ಈ ಶಾಸಕರನ್ನು ಕೆಲವು ಪಟ್ಟಭದ್ರ ಹಿತಾಶಕ್ತಿ ಜನರು ಅಪಹರಣ ಮಾಡಿ ಅವರನ್ನು ಅಕ್ರಮವಾಗಿ ಹಾಗೂ ಬಲವಂತವಾಗಿ ಕೂಡಿ ಹಾಕಿರಬಹುದೆಂಬ ಸಂಶಯ  ಬಲವಾಗಿದೆ. ತಾವುಗಳು ದಯಮಾಡಿ ಶಾಸಕರನ್ನು ಹುಡುಕಿಕೊಂಡಿ' ಎಂದು  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ದೂರಿನಲ್ಲಿ ಮನವಿ ಮಾಡಿದ್ದಾರೆ.

ದೂರಿನ ಪ್ರತಿ


ಇನ್ನೂ  ದೂರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ  ಪ್ರತಿಕ್ರಿಯೆ ನೀಡಿದ  ರೆಬಲ್​​ ಶಾಸಕ ಶಿವರಾಮ್​​ ಹೆಬ್ಬಾರ್ 'ನಿನ್ನೆ DCC ಅಧ್ಯಕ್ಷರಾದ ಭೀಮಣ್ಣ ನಾಯಕರು, ನಾನು ಕಾಣೆಯಾಗಿದ್ದೇನೆ ಹುಡುಕಿಕೊಡಿ ಎಂಬ ಅಭೂತಪೂರ್ವ ರಾಜಕೀಯ ಕಾಳಜಿ ತೋರಿದ್ದಾರೆ! ಅವರ ಈ ಮನವಿಯ ಹಿಂದಿನ ವಿಶೇಷ ಕಾಳಜಿ ಆಶ್ಚರ್ಯಕರ'


ಇದನ್ನೂ  ಓದಿ : ಬಾಯ್ತಪ್ಪಿ ನಾನು ವಿಪಕ್ಷ ನಾಯಕ ಎಂದ ಸಿದ್ದರಾಮಯ್ಯ; ಸಂತಸದಲ್ಲಿ ತೇಲಿದ ಬಿಜೆಪಿ ನಾಯಕರು

'ನಾನು ಕೆಲ ದಿನಗಳಿಂದ ಕ್ಷೇತ್ರದಿಂದ ಹೊರಗಿದ್ದರೂ ಕಾರ್ಯಕರ್ತರ ಹಾಗೂ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದೇನೆ, ಈ ನಡುವೆ ಮಳೆಯಿಂದಾದ ಹಾನಿ ಹಾಗೂ ತರ್ತು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳ ಮೂಲಕ ಕ್ರಮ ಕೈಗೊಂಡಿದ್ದೇನೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ನನ್ನ ಕಛೇರಿ/ಕಾರ್ಯದರ್ಶಿಗಳು ಸದಾ ಸಿದ್ದವಿದ್ದಾರೆ. ನಾನೂ ಕೂಡ ನಿರಂತರ ಸಂಪರ್ಕದಲ್ಲಿರುತ್ತೇನೆ ಎಂದು ಹೇಳಿದ್ದಾರೆ.ಮತದಾರಿಂದ ದೂರು ದಾಖಲು

ಇದೇ ರೀತಿಯಾಗಿ ಶಾಸಕರಾದ ಮಹೇಶ್ ಕುಮಟಳ್ಳಿ, ಬೈರತಿ ಬಸವರಾಜ್​​​ ಹಾಗೂ ಎಸ್​ ಟಿ ಸೋಮಶೇಖರ್ ಕಾಣೆಯಾಗಿದ್ದಾರೆ  ಎಂದು ದೂರು ದಾಖಲಾಗಿದೆ.  ಶಾಸಕ ಮುನಿರತ್ನ ವಿರುದ್ಧ ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ  ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿದೆ.

ದೂರಿನ ಪ್ರತಿ


ಶಾಸಕ  ಮುನಿರತ್ನ ವಿರುದ್ದ ನೀಡಿದ ದೂರಿನಲ್ಲಿ ಕ್ಷೇತ್ರದ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಆಘಾತವಾಗಿದೆ. ಕ್ಷೇತ್ರದಲ್ಲಿ ಜನತೆ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಿಸುತ್ತಿದ್ದು. ಸಾರ್ವಜನಕರ ಹಲವಾರು ಕುಂದು ಕೊರತೆಗಳಿಗೆ ಸ್ಪಂದಿಸಬೇಕಿದ್ದ ಮಾನ್ಯ ಶಾಸಕರು ಕಾಣೆಯಾಗಿರುವುದು ಕ್ಷೇತ್ರದ ಜನತೆಯಲ್ಲಿ ಆತಂಕವಾಗಿದೆ. ಶಾಸಕರನ್ನು ಹುಡುಕಿಕೊಡಿ ಎಂದು ಜನರುಮನವಿ ಮಾಡಿದ್ದಾರೆ. 

 
First published: July 18, 2019, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories