Davanagereಯಲ್ಲಿ ಸದ್ದಿಲ್ಲದೆ ನಡೆಯುತ್ತಿದೀಯಾ ಭ್ರೂಣ ಹತ್ಯೆ? ಒಂದು ವರ್ಷದಲ್ಲಿ ನಡೆದ ಗರ್ಭಪಾತಗಳೆಷ್ಟು ಗೊತ್ತಾ?
ಒಂದು ವರ್ಷದ ಅವಧಿಯಲ್ಲಿ ಸುಮಾರು 2,600 ಗರ್ಭಪಾತಗಳು ನಡೆದಿದೆ. ಇಷ್ಟೊಂದು ಸಂಖ್ಯೆಯಲ್ಲಿ ಗರ್ಭಪಾತ ನಡೆಯುತ್ತಿರೋದಕ್ಕೆ ಕಾರಣ ಏನ? ಗರ್ಭಪಾತಕ್ಕೆ ಮುಂದಾಗುವ ದಂಪತಿ ನೀಡಿರುವ ಮಾಹಿತಿಯನ್ನು ಮಮತಾ ಹೊಸಗೌಡರ್ ಕೇಳಿದ್ದಾರೆ. ಆದ್ರೆ ಜಿಲ್ಲಾ ಆರೋಗ್ಯಾಧಿಕಾರಿಗಳು ನೀಡಿರುವ ಮಾಹಿತಿಯಲ್ಲೂ ಹಲವು ಗೊಂದಲಗಳಿವೆ.
ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ (Davanagere) ಜಿಲ್ಲೆಯಲ್ಲಿ ಭ್ರೂಣ ಹತ್ಯೆ (Fetal murder) ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಒಂದು ವರ್ಷದ ಅವಧಿಯಲ್ಲಿ ನಡೆದ ಗರ್ಭಪಾತದ (Abortion) ಸಂಖ್ಯೆ. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಗರ್ಭಪಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ದಾವಣಗೆರೆ PC & PNDT ಕಮೀಟಿ ಅದ್ಯಕ್ಷೆ ಎಸಿ ಮಮತಾ ಹೊಸಗೌಡರ್, DHO ಬಳಿ ಮಾಹಿತಿ ಕೇಳಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಸುಮಾರು 2,600 ಗರ್ಭಪಾತಗಳು ನಡೆದಿದೆ. ಇಷ್ಟೊಂದು ಸಂಖ್ಯೆಯಲ್ಲಿ ಗರ್ಭಪಾತ ನಡೆಯುತ್ತಿರೋದಕ್ಕೆ ಕಾರಣ ಏನ? ಗರ್ಭಪಾತಕ್ಕೆ ಮುಂದಾಗುವ ದಂಪತಿ ನೀಡಿರುವ ಮಾಹಿತಿಯನ್ನು ಮಮತಾ ಹೊಸಗೌಡರ್ ಕೇಳಿದ್ದಾರೆ. ಆದ್ರೆ ಜಿಲ್ಲಾ ಆರೋಗ್ಯಾಧಿಕಾರಿಗಳು ನೀಡಿರುವ ಮಾಹಿತಿಯಲ್ಲೂ ಹಲವು ಗೊಂದಲಗಳಿವೆ.
2,600 ಗರ್ಭಪಾತ
2020 ರಿಂದ 2021 ರ ಅವಧಿಯಲ್ಲಿ 23,675 ಹೆರಿಗೆಗೆ ಹೆಸರು ನೊಂದಾಯಿಸಿದ್ದರು. ಅದರಲ್ಲಿ 20,360 ಮಹಿಳೆಯರಿಗೆ ಹೆರಿಗೆಯಾದ ಬಗ್ಗೆ ಮಾಹಿತಿ ನೀಡಿದ್ದರು. ಇನ್ನು ಇದರಲ್ಲಿ 2,600 ಜನರಿಗೆ ಗರ್ಭಪಾತ ಆಗಿರೋ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಗರ್ಭಪಾತ ಆಗಿದೆ ಅನ್ನೋದರ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿಲ್ಲ. ಇನ್ನೂ 715 ಗರ್ಭಿಣಿಯರ ಬಗ್ಗೆ ಏನಾಯಿತು ಎಂಬುವುದರ ಬಗ್ಗೆ ಮಾಹಿತಿಯೇ ಇಲ್ಲ.
ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಪಾತ ಆಗುತ್ತಿರುವುದಕ್ಕೆ ಎಸಿ ಮಮತಾ ಹೊಸಗೌಡರ್ ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಹೆಣ್ಣುಲಿಂಗ ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡಲಾಗ್ತಾ ಇದೀಯಾ ಅನ್ನೋ ಬಗ್ಗೆ ಅನುಮಾನ ಬಂದಿದೆ. ಜಿಲ್ಲೆಯಲ್ಲಿ ಈ ಮಟ್ಟಿನ ಗರ್ಭಪಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ತಿಳಿದುಕೊಳ್ಳಲಾಗುವುದು ಎಂದು ಮಮತಾ ಹೊಸಗೌಡರ್ ಹೇಳಿದ್ದಾರೆ. 2600 ಗರ್ಭಪಾತಕ್ಕೆ ಕಾರಣ, 715 ಜನರ ಗರ್ಭಿಯಣಿಗೆ ಏನಾಗಿದೆ ಅನ್ನೋದರ ಬಗ್ಗೆ 15 ದಿನಗಳಳೊಗೆ ಮಾಹಿತಿ ನೀಡುವಂತೆ ಮಮತಾ ಹೊಸಗೌಡರ್ ಕೇಳಿದ್ದಾರೆ.
5 ತಿಂಗಳ ಭ್ರೂಣ ಚರಂಡಿಯಲ್ಲಿ ಪತ್ತೆ
ದೊಡ್ಡಬಳ್ಳಾಪುರದ ಮಾನಸ ಆಸ್ಪತ್ರೆಯಲ್ಲಿ ಮನಕಲಕುವ ಈ ಧಾರುಣ ಘಟನೆ ಬೆಳಕಿಗೆ ಬಂದಿತ್ತು. ಆಸ್ಪತ್ರೆ ತ್ಯಾಜ್ಯ ಹೊರಗೆ ಹೋಗುವ ಕೊಳವೆಯಲ್ಲಿ ಭ್ರೂಣ ಪತ್ತೆಯಾಗಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ 5 ತಿಂಗಳ ಭ್ರೂಣ ಚರಂಡಿ ಪಾಲಾಗಿದೆ. ಭ್ರೂಣ ಹತ್ಯೆ ನಿಷೇಧ ಇದ್ದರೂ ಸಹ ಕಾನೂನು ಬಾಹಿರವಾಗಿ ವೈದ್ಯರು ಭ್ರೂಣ ಹತ್ಯೆ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿದ್ದವು.
ಹುಬ್ಬಳ್ಳಿಯ ಅಲ್ತಾಫ್ ಪ್ಲಾಟ್ ನಿವಾಸಿ ಶಾಹೀನ್ ಎಂಬುವವರಿಗೆ ಅಬಾರ್ಷನ್ ಆಗಿದೆ. ಹೊಟ್ಟೆಯಲ್ಲಿದ್ದ ಐದು ತಿಂಗಳ ಹಸುಗೂಸು ಮೃತಪಟ್ಟಿದೆ. ಮಗು ಸಾವಿಗೆ ತನ್ನ ಗಂಡ ಇಮ್ರಾನ್ ಖಾನ್ಜಾದೆ ಮತ್ತು ಅತ್ತೆ ಫಾತೀಮಾ ಕಾರಣ ಎಂದು ಶಾಹೀನ್ ಆರೋಪಿಸಿದ್ದಾಳೆ. ಗಂಡ ಮತ್ತು ಅತ್ತೆ ಸೇರಿಕೊಂಡು ವಿಷ ಮಿಶ್ರಿತ ಜ್ಯೂಸ್ ಕುಡಿಯಲು ಕೊಟ್ಟಿದ್ದರು. ಕಹಿಯಾಗಿದ್ದ ಜ್ಯೂಸ್ ಕುಡಿಯಲು ನಿರಾಕರಿಸಿದರೂ ಬಲವಂತವಾಗಿ ಕುಡಿಸಿದ್ದರು. ಹೊಟ್ಟೆ ನೋವಿನಿಂದ ಬಳಲಿದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ. ನೋವು ತಾಳದೆ ಪಕ್ಕದ ಮನೆಯವರಿಗೆ ವಿಷಯ ತಿಳಿಸಿ ಕಿಮ್ಸ್ಗೆ ಬಂದು ದಾಖಲಾಗಬೇಕಾಯಿತು. ಅಷ್ಟರಲ್ಲಿಯೇ ಮಗು ಮೃತಪಟ್ಟಿದೆ. ಗಂಡ ಮತ್ತು ಅತ್ತೆ ವಿಷ ಮಿಶ್ರಿತ ಜ್ಯೂಸ್ ಕೊಟ್ಟು ಭ್ರೂಣ ಹತ್ಯೆ ಮಾಡಿದ್ದಾರೆ ಎಂದು ಶಾಹೀನ್ ದೂರು ನೀಡಿದ್ದರು.
ಗಂಡ ಮತ್ತು ಅತ್ತೆ ಚಿತ್ರಹಿಂಸೆ ನೀಡುತ್ತಿದ್ದರು. ಈ ನಡುವೆ ಶಾಹೀನ್ ಗರ್ಭಿಣಿಯಾಗಿದ್ದಾಳೆ. ಸಹಿಸದ ಗಂಡ ಮತ್ತು ಅತ್ತೆ ಜ್ಯೂಸ್ನಲ್ಲಿ ವಿಷಹಾಕಿ ಕುಡಿಸಿದ್ದಾರೆ ಎಂದು ಶಾಹೀನ್ ಕುಟಂಬಸ್ಥರು ಆರೋಪಿಸಿದ್ದಾರೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ