ಅಭಿಷೇಕ್ ಅಂಬರೀಶ್ ಚಿತ್ತ ರಾಜಕೀಯದತ್ತ ಅಥವಾ ಸಿನಿಮಾದತ್ತ? ಇಲ್ಲಿದೆ ಉತ್ತರ

ಅಭಿಯನ್ನು ರೆಬೆಲ್ ನಾಯಕನಾಗಿ ರೂಪಿಸಲು ತೆರೆ ಮರೆಯ ಪ್ರಯತ್ನಗಳ ನಡುವೆ  ಚಿತ್ರರಂಗದಿಂದ ಜೂನಿಯರ್ ರೆಬೆಲ್​ಸ್ಟಾರ್​ ಕಳೆದು ಹೋಗಲಿದ್ದಾರೆ ಎನ್ನಲಾಗುತ್ತಿದೆ. 

zahir | news18
Updated:March 16, 2019, 8:11 PM IST
ಅಭಿಷೇಕ್ ಅಂಬರೀಶ್ ಚಿತ್ತ ರಾಜಕೀಯದತ್ತ ಅಥವಾ ಸಿನಿಮಾದತ್ತ? ಇಲ್ಲಿದೆ ಉತ್ತರ
ಅಭಿಷೇಕ್ ಅಂಬರೀಶ್
zahir | news18
Updated: March 16, 2019, 8:11 PM IST
ರೆಬೆಲ್​ ​ಸ್ಟಾರ್ ಅಂಬರೀಶ್ ಅವರ ಸುಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ 'ಅಮರ್' ಬಿಡುಗಡೆ ಹೊಸ್ತಿಲಲ್ಲಿದೆ. ಇತ್ತ ಅಮ್ಮ ಸುಮಲತಾ ಅಂಬರೀಶ್​ ಮಂಡ್ಯ ಕ್ಷೇತ್ರದಿಂದ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಈ ಕಡೆ ಮತಯಾಚನೆ, ಆ ಕಡೆ ಮೊದಲ ಚಿತ್ರ. ಇವರೆಡರ ಮಧ್ಯೆ ಜೂನಿಯರ್ ರೆಬೆಲ್​ ಸ್ಟಾರ್​ ಈಗ ಫುಲ್​ ಟೈಂ ಬ್ಯುಸಿಯಾಗಿ ಬಿಟ್ಟಿದ್ದಾರೆ.

ತಾಯಿಗಾಗಿ ಮಂಡ್ಯದಲ್ಲಿ ಮತಯಾಚನೆಗೆ ಇಳಿದಿರುವ ಅಭಿಷೇಕ್ ರಾಜಕೀಯ ವಿದ್ಯಮಾನಗಳನ್ನು ಅರಿಯುವ ಪ್ರಯತ್ನದಲ್ಲಿದ್ದಾರೆ. ಸುಮಲತಾ ಅವರು ಈ ಬಾರಿ ಸ್ಪರ್ಧಿಸುತ್ತಿರುವುದು ಕೂಡ ಅಭಿಗೆ ರಾಜಕೀಯ ನೆಲೆ ಒದಗಿಸಿ ಕೊಡಲು ಎಂಬ ಮಾತುಗಳು ಕೂಡ ಮಂಡ್ಯದಿಂದ ಕೇಳಿ ಬರುತ್ತಿದೆ. ಏಕೆಂದರೆ ಈ ಹಿಂದೆ ಮಂಡ್ಯದಿಂದ ಜೂನಿಯರ್ ರೆಬೆಲ್​ಸ್ಟಾರ್ ಸ್ಪರ್ಧಿಸುವಂತೆ ಅಂಬಿ ಅಭಿಮಾನಿಗಳು ಆಗ್ರಹಿಸಿದ್ದರು. ಆದರೆ ಅಭಿಷೇಕ್ ಸಣ್ಣ ಹುಡುಗ ಎಂಬ ಕಾರಣಕ್ಕಾಗಿ ಅಂಬಿ ಕುಟುಂಬದಿಂದ ಮಗನ ಬದಲು ತಾಯಿ ಚುನಾವಣೆಗೆ ಧುಮುಕ್ಕಿದ್ದರು.

ಅಂದರೆ ಅಭಿಷೇಕ್​ ರನ್ನು ರಾಜಕೀಯ ನಾಯಕನ್ನಾಗಿ ಮಾಡುವುದು ಸುಮಲತಾ ಅವರ ಪ್ಲ್ಯಾನ್. ಹೀಗಾಗಿಯೇ ಮಂಡ್ಯದ ಗಂಡಿನ ಕ್ಷೇತ್ರವನ್ನು ಬಿಟ್ಟು ಕೊಡದೇ ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಏಕೆಂದರೆ ಒಂದು ಬಾರಿ ಮಂಡ್ಯ ಕ್ಷೇತ್ರ ಕೈ ತಪ್ಪಿದರೇ ಮುಂದೆ ಅಭಿಷೇಕ್​ಗೆ ಆ ಕ್ಷೇತ್ರದಲ್ಲಿ ನೆಲೆಯೂರುವುದು ಕಷ್ಟಸಾಧ್ಯ ಎಂಬುದನ್ನು ಸುಮಲತಾ ಅವರಿಗೆ ಮನವರಿಕೆ ಆಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸುಮಲತಾ ಅವರ ಸ್ಫರ್ಧೆ ಅಭಿಷೇಕ್ ರಾಜಕೀಯ ಎಂಟ್ರಿಯ ಪೂರ್ವ ತಯಾರಿ ಎಂದೇ ಬಿಂಬಿಸಲಾಗುತ್ತಿದೆ.

ಅಭಿಯನ್ನು ರೆಬೆಲ್ ನಾಯಕನಾಗಿ ರೂಪಿಸಲು ತೆರೆ ಮರೆಯ ಪ್ರಯತ್ನಗಳ ನಡುವೆ  ಚಿತ್ರರಂಗದಿಂದ ಜೂನಿಯರ್ ರೆಬೆಲ್​ಸ್ಟಾರ್​ ಕಳೆದು ಹೋಗಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಅಭಿಷೇಕ್ ಅಭಿಷೇಕ್ ಚಿತ್ರರಂಗದಲ್ಲಿ ಮುಂದುವರೆಯುವುದಿಲ್ವಾ? ಎಂಬ ಪ್ರಶ್ನೆ ಸಹ ಹುಟ್ಟಿಕೊಂಡಿದೆ. ಈ ಪ್ರಶ್ನೆಯ ಜಾಡನ್ನು ಬೆನ್ನೆತ್ತಿದಾಗ ಅಭಿಷೇಕ್ ಸಿನಿಮಾವನ್ನು ಬಿಡುವ ಚಾನ್ಸೇ ಇಲ್ಲ. ನೋ ವೇ..ಎಂಬ ಉತ್ತರವೊಂದು ಸಿಗುತ್ತದೆ.

ಏಕೆಂದರೆ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಅಭಿಷೇಕ್ ಅಭಿನಯದ ಮತ್ತೊಂದು ಚಿತ್ರಕ್ಕೆ ಮರೆಯ ತಯಾರಿಗಳು ಆರಂಭವಾಗಿದೆ. ಜೂನಿಯರ್​ ರೆಬಲ್​ಸ್ಟಾರ್​ಗೆ ಚಿತ್ರರಂಗದಲ್ಲಿ ಗಟ್ಟಿ ನೆಲೆ ಒದಗಿಸಲು ರಾಕ್​ಲೈನ್ ವೆಂಕಟೇಶ್​ ಯೋಜನೆ ಹಾಕಿಕೊಂಡಿದ್ದಾರೆ.

ಇದಕ್ಕಾಗಿ 'ಅಂಬಿ ನಿಂಗ್ ವಯಸ್ಸಾಯ್ತೊ' ಖ್ಯಾತಿಯ ನಿರ್ದೇಶಕ ಗುರುದತ್​ ಈಗಾಗಲೇ ಪೆನ್​ ಹಿಡಿದು ಕಥೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. 'ಅಮರ್' ಸಿನಿಮಾ ಬಿಡುಗಡೆಯ ಬಳಿಕ ಈ ಹೊಸ ಚಿತ್ರ ಸೆಟ್ಟೇರಲಿದೆ ಎಂದು ಹೇಳಲಾಗಿದೆ.
Loading...

ಗುರುದತ್ ಹಾಗೂ ಅಭಿಷೇಕ್​ ಉತ್ತಮ ಗೆಳೆಯರಾಗಿದ್ದು, ಹೀಗಾಗಿ ಅಭಿಗೆ ಸಂಪೂರ್ಣವಾಗಿ ಹೊಂದುವಂತಹ ಕಥೆ ರೆಡಿ ಮಾಡುವಂತೆ ರಾಕ್​ಲೈನ್ ವೆಂಕಟೇಶ್ ಹೇಳಿದ್ದಾರಂತೆ. ಈ ಹಿನ್ನೆಲೆಯಲ್ಲಿ ಗುರು ತಮ್ಮ ಇತರೆ ಕೆಲಸಗಳ ನಡುವೆ ಒಂದಷ್ಟು ಸಮಯ ಬಿಡುಗಡೆ ಮಾಡಿಕೊಂಡು ಕಥೆಯ ಸಿದ್ಧತೆಯಲ್ಲಿದ್ದಾರೆ.

ಅಂಬರೀಶ್ ಅವರಿಗೆ ಆ್ಯಕ್ಷನ್ ಕಟ್​ ಹೇಳಿದ ಕಿರಿಯ ನಿರ್ದೇಶಕರಾಗಿರುವ ಗುರುದತ್ ಅಭಿಷೇಕ್​ಗಾಗಿ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢ. ಆದರೆ ರಾಕ್​ಲೈನ್ ವೆಂಕಟೇಶ್​ ನಿರ್ಮಾಣದಲ್ಲಿ ಅಭಿಷೇಕ್ ಚಿತ್ರ ಬರುವುದಂತು ಪಕ್ಕಾ ಎನ್ನುತ್ತಿದೆ ಗಾಂಧಿನಗರ.

ಸದ್ಯ ತಾಯಿಯೊಂದಿಗೆ ಮಂಡ್ಯ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರಕ್ಕೆ ಇಳಿದಿರುವ ಅಭಿಷೇಕ್ ಮುಂದಿನ ನಡೆ ರಾಜಕೀಯದತ್ತ ಎಂದವರಿಗೆ, ಜೂನಿಯರ್ ರೆಬೆಲ್​ಸ್ಟಾರ್ ಅವರ ಹೊಸ​ ಚಿತ್ರದ ಸುದ್ದಿ ಉತ್ತರವಾಗಿದೆ. ಒಟ್ಟಾರೆ ಈ ಸುದ್ದಿಯಿಂದ ರೆಬೆಲ್​ಸ್ಟಾರ್ ಅಭಿಮಾನಿಗಳು ಮಾತ್ರ ಫುಲ್ ಖುಷ್ ಆಗಿರುವುದಂತು ಸುಳ್ಳಲ್ಲ.

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626