• Home
  • »
  • News
  • »
  • state
  • »
  • Surathkal Murder: ಜಲೀಲ್​​​ ಕೊಲೆ ಹಿಂದೆ 'ಅವಳ' ನೆರಳು! ಹಿಂದೂ ಮಹಿಳೆ ಜೊತೆಗಿನ ಅನೈತಿಕ ಸಂಬಂಧವೇ ಮುಳುವಾಯ್ತಾ?

Surathkal Murder: ಜಲೀಲ್​​​ ಕೊಲೆ ಹಿಂದೆ 'ಅವಳ' ನೆರಳು! ಹಿಂದೂ ಮಹಿಳೆ ಜೊತೆಗಿನ ಅನೈತಿಕ ಸಂಬಂಧವೇ ಮುಳುವಾಯ್ತಾ?

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

ಜಲೀಲ್ ಮತ್ತು ಸ್ಥಳೀಯ ಮಹಿಳೆ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದ್ದು, ಎರಡು ವರ್ಷಗಳ ಹಿಂದೆಯೂ ಸ್ಥಳೀಯವಾಗಿ ಗಲಾಟೆ ನಡೆದಿತ್ತಂತೆ. ಸದ್ಯ ಇದೇ ಕಾರಣಕ್ಕೆ ಕೊಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • Share this:

ಮಂಗಳೂರು: ಮಂಗಳೂರಿನ  (Mangaluru) ಕಾಟಿಪಳ್ಳದ ನಾಲ್ಕನೇ ಬ್ಲಾಕ್​​ನಲ್ಲಿ 40 ವರ್ಷದ‌ ಅಬ್ದುಲ್​ ಜಲೀಲ್ (Abdul Jaleel) ಎಂಬ ವ್ಯಕ್ತಿಯನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಬಂಧಿತರನ್ನು ಶೈಲೇಶ್ ಪೂಜಾರಿ, ಸವಿನ್ ಕಾಂಚನ್, ಪವನ್ ಅಲಿಯಾಸ್ ಪಚ್ಚು ಎಂದು ಗುರುತಿಸಲಾಗಿದೆ. ಈ ನಡುವೆ ಆರೋಪಿಗಳ ವಿಚಾರಣೆ ವೇಳೆ ಕೊಲೆ ಹಿಂದಿನ ಕಾರಣ ಬಯಲಾಗಿದೆ ಎನ್ನಲಾಗಿದೆ. ಮೃತ ಜಲೀಲ್​ ಕೊಲೆಗೆ ಹಿಂದೂ ಮಹಿಳೆಯ (Women) ಜೊತೆಗಿನ ಅಕ್ರಮ ಸಂಬಂಧವೇ (Illegal Relationship) ಕಾರಣವಂತೆ. ಜಲೀಲ್ ಮತ್ತು ಸ್ಥಳೀಯ ಮಹಿಳೆ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೆ ಎರಡು ವರ್ಷಗಳ ಹಿಂದೆಯೂ ಸ್ಥಳೀಯವಾಗಿ ಗಲಾಟೆ ನಡೆದಿತ್ತಂತೆ. ಸದ್ಯ ಇದೇ ಕಾರಣಕ್ಕೆ ಕೊಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಸುರತ್ಕಲ್​​ ಪೊಲೀಸ್​ ಠಾಣೆ ವ್ಯಾಪ್ತಿಯ ಕಾಟಿಪಳ್ಯ 4ನೇ ಬ್ಲಾಕ್​​​ನ ನೈತಂಗಡಿಯಲ್ಲಿ ಫ್ಯಾನ್ಸಿ ಅಂಗಡಿ ಹೊಂದಿದ್ದ ಅಬ್ದುಲ್​ ಜಲೀಲ್​​ರನ್ನು ಶನಿವಾರ ಕೊಲೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ 8 ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್​ 144 (Section 144) ಜಾರಿ ಮಾಡಲಾಗಿತ್ತು.


ಅಲ್ಲದೇ ಎರಡು ದಿನಗಳ ಕಾಲ ಸುರತ್ಕಲ್​ನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ನೈತಂಗಡಿಯಲ್ಲಿ ಫ್ಯಾನ್ಸಿ ಅಂಗಡಿ ಹೊಂದಿದ್ದ ಅಬ್ದುಲ್​ ಜಲೀಲ್​​ ಅವರನ್ನು ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಸ್ಥಳೀಯರು ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿರುವ ಪ್ರಯತ್ನ ಮಾಡಿದರು ಜಲೀಲ್​ ಮೃತಪಟ್ಟಿದ್ದರು.


suratkal zalil case ut khader insists to file a case under UAPA act mrq
ಸುರತ್ಕಲ್


ಇದನ್ನೂ ಓದಿ: Crime News: ಕ್ರಿಕೆಟ್​ ಆಡ್ತಿದ್ದ ವೇಳೆ ಚಾಕು ಇರಿತ; ಡಬಲ್​​ ಮರ್ಡರ್​ಗೆ ಬೆಚ್ಚಿಬಿದ್ದ ಬೆಳಗಾವಿ


ಆರೋಪಿಗಳು 14 ದಿನಗಳ ಕಾಲ ಪೊಲೀಸ್ ವಶಕ್ಕೆ


ಪ್ರಕರಣದ ಕುರಿತಂತೆ ಮಾಧ್ಯಮಗಳಿಗೆ ಇಂದು ಮಾಹಿತಿ ನೀಡಿದ್ದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಕಾಟಿಪಳ್ಳ ಜಲೀಲ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದು, ಸದ್ಯ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದೇವೆ. ಮುಂದಿನ 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇವರಲ್ಲಿ ಇಬ್ಬರು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದು, ಓರ್ವ ಅವರನ್ನು ಬೈಕ್ ನಲ್ಲಿ ತಂದು ಬಿಟ್ಟಿದ್ದ.


ಒಟ್ಟಾರೆ 10-12 ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು


ಮೂವರನ್ನು ನಿನ್ನೆ ರಾತ್ರಿ ವಶಕ್ಕೆ ಪಡೆಯಲಾಗಿತ್ತು. ಕೋರ್ಟ್​ನಿಂದ ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ಮಾಡುತ್ತೇವೆ. ಕೊಲೆಗೆ ಕಾರಣ ಏನು ಅನ್ನೋದನ್ನ ಪೂರ್ಣ ತನಿಖೆ ಬಳಿಕ ತಿಳಿಸುತ್ತೇವೆ. ಮೂವರಲ್ಲಿ ಇಬ್ಬರು ಈ ಹಿಂದೆ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು. 2021ರಲ್ಲಿ ನಡೆದ ಕೊಲೆ ಯತ್ನ ಕೇಸ್ ಒಂದರಲ್ಲೂ ಆರೋಪಿಗಳು ಭಾಗಿಯಾಗಿದ್ದರು. ಇದುವರೆಗೂ ಜಲೀಲ್ ಕೊಲೆ ಪ್ರಕರಣದಲ್ಲಿ ಮಹಿಳೆಯರೂ ಸೇರಿ 10-12 ಜನರನ್ನ ವಶಕ್ಕೆ ಪಡೆದಿದ್ದೇವು. ಜಲೀಲ್ ಕುಟುಂಬಸ್ಥರು ಸೇರಿ ಕೆಲವರ ವಿಚಾರಣೆ ನಡೆದಿದೆ. ಆದರೆ ಸದ್ಯ ಒಟ್ಟು 3 ಜನರನ್ನ ಮಾತ್ರ ಬಂಧನ ಮಾಡಲಾಗಿದೆ ಎಂದು ತಿಳಿಸಿದರು.


ಸುರತ್ಕಲ್


ಇದನ್ನೂ ಓದಿ: Karnataka Covid Guidelines: ಮಾಸ್ಕ್ ಮರೆಯಲ್ಲಿ ಹೊಸ ವರ್ಷದ ಸಂಭ್ರಮ, ಪಾರ್ಟಿಗಳಿಗೆ 1 ಗಂಟೆವರೆಗೆ ಡೆಡ್‌ಲೈನ್! ಸಚಿವರ ಸಭೆಯಲ್ಲಿ ಮಹತ್ವದ ನಿರ್ಧಾರ


ಸದನದಲ್ಲಿ ಜಲೀಲ್ ಹತ್ಯೆ ಕೇಸ್ ಸದ್ದು


ಇನ್ನು, ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಂಗಳೂರಿನ ಸುರತ್ಕಲ್​ ನಿವಾಸಿ ಜಲೀಲ್ ಹತ್ಯೆ ಪ್ರಕರಣವನ್ನು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರಸ್ತಾಪ ಮಾಡಿದರು. ಅನಾವಶ್ಯಕ ಗಲಾಟೆಗೆ ಸರ್ಕಾರ ಕ್ರಮ ತಗೊಂಡಿದ್ರೆ, ಅಲ್ಲಿ ಒಂದು ಕೊಲೆ ಆಗುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಅನೈತಿಕ ಗೂಂಡಾಗಿರಿ ಮಾಡುವರನ್ನು ಬೆಳಗ್ಗೆ ಬಂಧಿಸಿ, ಸಂಜೆ ಬಿಡುಗಡೆ ಮಾಡುತ್ತಾರೆ. ಕೊಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದರು. ಜಲೀಲ್ ಹತ್ಯೆ ಬಗ್ಗೆ ಉನ್ನತ ತನಿಖೆ ಆಗಬೇಕು. ಅಲ್ಲದೇ ಕೊಲೆಯಾದ ವ್ಯಕ್ತಿಯ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಸರ್ಕಾರವನ್ನು ಯು.ಟಿ.ಖಾದರ್ ಒತ್ತಾಯಿಸಿದ್ದರು.

Published by:Sumanth SN
First published: