ಆರುಷಿ, ಹೇಮರಾಜ್ ಕೊಲೆ ಪ್ರಕರಣ; ತಲ್ವಾರ್ ದಂಪತಿಗೆ ಮತ್ತೆ ಸಂಕಷ್ಟ


Updated:August 10, 2018, 3:32 PM IST
ಆರುಷಿ, ಹೇಮರಾಜ್ ಕೊಲೆ ಪ್ರಕರಣ; ತಲ್ವಾರ್ ದಂಪತಿಗೆ ಮತ್ತೆ ಸಂಕಷ್ಟ

Updated: August 10, 2018, 3:32 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.10): ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ 2008ರಲ್ಲಿ ನೋಯ್ಡಾದಲ್ಲಿ ನಡೆದಿದ್ದ ಆರುಷಿ ಮತ್ತು ಮನೆಕೆಲಸದ ಆಳು ಹೇಮರಾಜ್ ಕೊಲೆ ಪ್ರಕರಣದಲ್ಲಿ ಕಳೆದ ವರ್ಷ ನಿರ್ದೋಷಿಗಳಾಗಿದ್ದ ಆರುಷಿ ಪೋಷಕರಾದ ದಂತವೈದ್ಯ ದಂಪತಿ ರಾಜೇಶ್ ಮತ್ತು ನೂಪುರ್ ತಲ್ವಾರ್ ಮತ್ತೆ ಸಂಕಷ್ಟ ಎದುರಾಗಿದೆ. ಆದೇಶ ವಿರುದ್ದ ಸಿಬಿಐ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ಸುಪ್ರೀಂಕೋರ್ಟ್ ಪುರಸ್ಕರಿಸಿದೆ.


ಕಳೆದ ವರ್ಷ ಅಕ್ಟೋಬರ್ 12ರಂದು ಅಲಹಾಬಾದ್ ಹೈಕೋರ್ಟ್ನಲ್ಲಿ ಜೋಡಿ ಕೊಲೆ ಪ್ರಕರಣದಲ್ಲಿ ತಲ್ವಾರ್ ದಂಪತಿ ಖುಲಾಸೆಗೊಂಡಿದ್ದರು. ಈ ಪ್ರಕರಣ ಸಂಬಂಧ ಹೇಮರಾಜ್ ಪತ್ನಿ ಸಲ್ಲಿಸಿದ್ದ ಅರ್ಜಿ ಬಾಕಿ ಉಳಿದಿದ್ದು, ಆ ವಿಚಾರವಾಗಿ ಸಿಬಿಐ ಮೇಲ್ಮನವಿ ಸಲ್ಲಿಸಿದೆ. ನ್ಯಾಯಮೂರ್ತಿ ರಂಜನ್ ಗೋಗಯ್ ಅವರಿರುವ ಏಕಸದಸ್ಯ ಪೀಠ ವಿಚಾರಣೆ ಆಲಿಸಲಿದೆ ಎಂದು ನ್ಯಾಯಮೂರ್ತಿ ನವೀನ್ ಸಿನ್ಹಾ ಮತ್ತು ನ್ಯಾ.ಕೆ.ಎಂ. ಜೋಸೆಫ್ ತಿಳಿಸಿದರು.


ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಮನೀಂದರ್ ಸಿಂಗ್ ವಾದ ಮಂಡಿಸಿದ್ದರು. ಸಿಬಿಐ ಮನವಿಯನ್ನು ಪುರಸ್ಕರಿಸಿರುವುದಾಗಿ ಪೀಠ ಹೇಳಿತು.2008ರಲ್ಲಿ ನಡೆದಿದ್ದ ಪುತ್ರಿ ಆರುಷಿ ಹಾಗೂ ಮನೆ ಕೆಲಸ ಆಳು ಹೇಮರಾಜ್ ಕೊಲೆ ಪ್ರಕರಣ ಸಂಬಂಧ ಪೋಷಕರಾದ ರಾಜೇಶ್ ಮತ್ತು ನುಪೂರ್ ತಲ್ವಾರ್ ಇಬ್ಬರನ್ನು ನಿರ್ದೋಷಿಗಳೆಂದು ಅಲಹಾಬಾದ್ ಹೈಕೋರ್ಟ್ ಕಳೆದ ವರ್ಷ ಆಕ್ಟೋಬರ್ 12ರಂದು ತೀರ್ಪು ನೀಡಿತ್ತು.


14 ವರ್ಷದ ಪುತ್ರಿ ಆರುಷಿ ಮನೆಕೆಲಸದ ಆಳು ಹೇಮರಾಜ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಆರುಷಿಯನ್ನು ಪೋಷಕರು ಕೊಲೆ ಮಾಡಿದ್ದಾಗಿ ಸಿಬಿಐ ಆರೋಪಿಸಿ ಪ್ರಕರಣ ದಾಖಲಿಸಿತ್ತು.


2008ರ ಮೇ ನಲ್ಲಿ ನೋಯ್ಡಾದಲ್ಲಿರುವ ತಲ್ವಾರ್ ದಂಪತಿ ನಿವಾಸದಲ್ಲಿ 14 ವರ್ಷದ ಆರುಷಿಯ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಕಂಡುಬಂದರೆ, 45 ವರ್ಷದ ಹೇಮರಾಜ್ ನಾಪತ್ತೆಯಾಗಿದ್ದ. ಎರಡು ದಿನಗಳ ನಂತರ ಹೇಮರಾಜ್ ಮೃತದೇಹ ಅದೇ ನಿವಾಸದ ಮಹಡಿ ಮೇಲೆ ಪತ್ತೆಯಾಯಿತು.


Loading...

ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ಉತ್ತರಪ್ರದೇಶದ ಪೊಲೀಸರು ಆರಂಭಿಸಿದ್ದರು. ಆನಂತರದಲ್ಲಿ ಪ್ರಕರಣ ದೇಶವ್ಯಾಪಿ ಬಹುದೊಡ್ಡ ಸುದ್ದಿ ಮಾಡಿದ್ದ ನಂತರ ಅಂದಿನ ಮುಖ್ಯಮಂತ್ರಿ ಮಾಯಾವತಿ ಅವರು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರು.

First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...