• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Agnipath: ಸರ್ಕಾರ ಯಾರನ್ನೂ ನಿರುದ್ಯೋಗಿಯಾಗಿರಲು ಬಿಡಲ್ಲ ಅಂದ್ರು ಗೃಹ ಸಚಿವರು; ಮಾತು ತಪ್ಪಿದ ಮೋದಿ ಅಂತ ಕಾಂಗ್ರೆಸ್ ಟೀಕೆ

Agnipath: ಸರ್ಕಾರ ಯಾರನ್ನೂ ನಿರುದ್ಯೋಗಿಯಾಗಿರಲು ಬಿಡಲ್ಲ ಅಂದ್ರು ಗೃಹ ಸಚಿವರು; ಮಾತು ತಪ್ಪಿದ ಮೋದಿ ಅಂತ ಕಾಂಗ್ರೆಸ್ ಟೀಕೆ

ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

ಇವತ್ತು ನಿರುದ್ಯೋಗ ತಾಂಡವ ಆಡುತ್ತಿದೆ. ಲಕ್ಷಗಟ್ಟಲೇ ಯುವಕರಿಗೆ ಉದ್ಯೋಗ ಸಿಗುತ್ತದೆ. ಮುಂದಿನ ಭವಿಷ್ಯ ಇವತ್ತೆ ಹೇಳೋಕೆ ಆಗುತ್ತಾ?  ಯಾವ ಆಧಾರದ ಮೇಲೆ ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ವರ್ಗ ಈ ಕೆಲಸ ಮಾಡ್ತಾ ಇದೆ ಅದರ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.

  • Share this:

ಇಂದು ಬೆಳಗ್ಗೆ ನಡೆದಿರುವ ಎಸಿಬಿ ದಾಳಿ (ACB Raid) ಮತ್ತು ಅಗ್ನಿಪಥ (Agnipath Scheme) ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಪ್ರತಿಕ್ರಿಯಿಸಿದರು. ಇಂದು ಬೆಳಗ್ಗೆ  21 ಅಧಿಕಾರಿಗಳ 80 ನಿವಾಸ ಮತ್ತು ಬೇರೆ ಬೇರೆ ಕಡೆ ದಾಳಿಯಾಗಿದೆ. 350 ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಒಟ್ಟಾರೆ ಶುದ್ಧ ಆಡಳಿತವನ್ನ ನೀಡಲು ಭ್ರಷ್ಟಾಚಾರ ಮುಕ್ತ ಆಡಳಿತ (Corruption free administration) ನೀಡಲು ಈ ರೀತಿ ರೈಡ್ ಗಳು ಆಗುತ್ತೆ. ಒಂದು ಸಾರಿ ದಾಳಿ ಆದ ಮೇಲೆ ಎಲ್ಲ ಆಸ್ತಿಗಳಿಗೆ ದಾಖಲೆ ಕೊಡಬೇಕಾಗುತ್ತದೆ. ಅವರ ಹಣ ಮತ್ತು ಅಸ್ತಿ ಎಲ್ಲಿಂದ ಬಂತು ಅಂತ ಸಾಬೀತು ಮಾಡಬೇಕಾಗುತ್ತದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದರು.


ಎಸಿಬಿ ದಾಳಿಗೆ ಒಳಗಾಗಿರುವ ಅಧಿಕಾರಿಗಳಿಗೆ ನ್ಯಾಯಲಯಕ್ಕೆ ಹೋಗಲು ಅವಕಾಶ ಇದೆ. ಹೀಗಾಗಿ ಪ್ರಕರಣಗಳು ವರ್ಷಾನುಗಟ್ಟಲೇ ನಡೆಯುತ್ತವೆ. ಆದ್ರೆ ಚುರುಕು ಮುಟ್ಟಿಸುವ ಕೆಲಸ ಎಸಿಬಿಯಿಂದ ಆಗುತ್ತದೆ ಎಂದು ಹೇಳಿದರು.


ಅಗ್ನಿಪಥ್ ಗೆ ವಿರೋಧ ಪಕ್ಷಗಳ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಭವಿಷ್ಯದಲ್ಲಿ ಎನು ಆಗುತ್ತೆ ಅಂತ ಇವತ್ತು ಬೆಂಕಿ ಹಚ್ಚುವ ಕೆಲಸ ಆಗಬಾರದು. ಈ ದೇಶದಲ್ಲಿ ಕೆಲವೊಂದು ವರ್ಗಗಳು ಯಾವ ಪರಿವರ್ತನೆ ಮಾಡಲು ಬಿಡುತ್ತಿಲ್ಲ ಎಂದು ಕಿಡಿ ಕಾರಿದರು.


ನಾಲ್ಕು ವರ್ಷ ತರಬೇತಿ ಜೊತೆ ಒಂದಷ್ಟು ಸೌಲಭ್ಯ


ಅಗ್ನಿಪಥ್ ತುಂಬಾ ಒಳ್ಳೆ ಯೋಜನೆ ಆಗಿದೆ. ಇಸ್ರೇಲ್ ಅಂತ ದೇಶಗಳಲ್ಲಿ ಯುವಕರು ಕಡ್ಡಾಯವಾಗಿ ಮಿಲಿಟರಿ ತರಬೇತಿ ಪಡೆದಿರಬೇಕು. ನಮ್ಮ ದೇಶದಲ್ಲಿ ನಾಲ್ಕು ವರ್ಷ ತರಬೇತಿ ಜೊತೆ ಒಂದಷ್ಟು ಸೌಲಭ್ಯ ಕೊಡಲಾಗುತ್ತದೆ. ಇದರಿಂದ ಶೇ 25 ರಷ್ಟು ಜನರನ್ನ ಸೇನೆಗೆ ಮತ್ತು ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲಾಗುತ್ತದೆ.


ಇದನ್ನೂ ಓದಿ:  Agnipath: ಸೈನಿಕರ ಅನ್ನ ಕಸಿಯಲು ಹೊರಟಿದೆ ದೇಶದ್ರೋಹಿ ಬಿಜೆಪಿ ಸರ್ಕಾರ; ಸಿದ್ದರಾಮಯ್ಯ


ಇವತ್ತು ನಿರುದ್ಯೋಗ ತಾಂಡವ ಆಡುತ್ತಿದೆ. ಲಕ್ಷಗಟ್ಟಲೇ ಯುವಕರಿಗೆ ಉದ್ಯೋಗ ಸಿಗುತ್ತದೆ. ಮುಂದಿನ ಭವಿಷ್ಯ ಇವತ್ತೆ ಹೇಳೋಕೆ ಆಗುತ್ತಾ?  ಯಾವ ಆಧಾರದ ಮೇಲೆ ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ವರ್ಗ ಈ ಕೆಲಸ ಮಾಡ್ತಾ ಇದೆ ಅದರ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.


ಮಾಸ್ಕ್ ಹಾಕೊಂಡು ಪ್ರತಿಭಟನೆ


ಕೇಂದ್ರ ಸರ್ಕಾರ ಯಾರನ್ನೂ ನಿರುದ್ಯೋಗಿ ಆಗಿರಲು ಇಷ್ಟ ಪಡಲ್ಲ. ಇದರ ಹಿಂದೆ ಯಾವ ಶಕ್ತಿ ಇದೆ ಅಂತ ನೋಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದ್ದು, ಮಾಸ್ಕ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.


ಆಗ್ನಿಪತ್ ಯೋಜನೆ ಬಗ್ಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ


ಸೇನೆಯ ಅಲ್ಪಾವಧಿ ನೇಮಕ ಯೋಜನೆ 'ಅಗ್ನಿಪಥ್' ವಿರುದ್ಧ ದೇಶಾದ್ಯಂತ ಯುವಕರ ಆಕ್ರೋಶ ಭುಗಿಲೆದ್ದಿದೆ. ಯುವಕರ ಆಕ್ರೋಶ ಸಹಜವಾದದ್ದೆ. ಕಳೆದ ಎರಡು ವರ್ಷಗಳಿಂದ ಸೇನೆಗೆ ನೇಮಕಾತಿ ನಡೆದಿಲ್ಲ. ಈಗ #AgnipathScheme ಮೂಲಕ ನೇಮಕಾತಿಯಾದರೂ ಅದು ಅಲ್ಪಾವಧಿಯಷ್ಟೆ.‌ ಕೇವಲ ನಾಲ್ಕು ವರ್ಷಕ್ಕೆ ಕಡ್ಡಾಯ ನಿವೃತ್ತಿಯಾಗಬೇಕು. ಆ ನಂತರ ಯುವಕರ ಭವಿಷ್ಯವೇನು ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.


ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವುದೇ ಬಡ ಮಧ್ಯಮ ವರ್ಗದ ಯುವಕರು. ಹೊಟ್ಟೆ ತುಂಬಿದ ಶ್ರೀಮಂತರ ಮಕ್ಕಳಾಗಲಿ, ನಕಲಿ ದೇಶಪ್ರೇಮದ ಭಾಷಣ ಬಿಗಿಯುವ ಸಂಘ ಪರಿವಾರದ ಹೆತ್ತ ಕುಡಿಗಳಾಗಲಿ ಸೈನ್ಯ ಸೇರುವುದಿಲ್ಲ. ಇದು ಕಟು ವಾಸ್ತವ. ಸೈನ್ಯಕ್ಕೆ ಸೇರಿದ ಬಡ ಮಧ್ಯಮ ವರ್ಗದ ಯುವಕರಿಗೆ ಸೇವಾ ಭದ್ರತೆ ಅತಿ ಅಗತ್ಯ. ಇದನ್ನು ಕೇಂದ್ರ ಅರಿಯಬೇಕು.


ಸೈನಿಕರಿಗೆ ಪಿಂಚಣಿ ಕೊಡುವುದು ಬೇಕಿಲ್ಲವೆ?


ಸೈನಿಕರ ಪಿಂಚಣಿ‌ ಹೊರೆ ತಪ್ಪಿಸಿಕೊಳ್ಳಲು ಕೇಂದ್ರ ಅಗ್ನಿಪಥ್ ಯೋಜನೆ ಜಾರಿಗೆ ಮುಂದಾಗಿದೆ. ದೇಶದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಸೇವೆ ಮಾಡಿದ ಸೈನಿಕರಿಗೆ ಪಿಂಚಣಿ ಕೊಡದಷ್ಟು ನಮ್ಮ ದೇಶ ನಿರ್ಗತಿಕವೇ? ತಮ್ಮ ರಾಜಕೀಯ ಲಾಭಕ್ಕೆ ಯೋಧರ ತ್ಯಾಗವನ್ನು ದುರ್ಬಳಕೆ ಮಾಡಿಕೊಳ್ಳುವ ಮೋದಿಯವರಿಗೆ, ಸೈನಿಕರಿಗೆ ಪಿಂಚಣಿ ಕೊಡುವುದು ಬೇಕಿಲ್ಲವೆ?


ಇದನ್ನೂ ಓದಿ:  Agnipath Protest: ಅಗ್ನಿಪಥ್ ವಿರೋಧಿಸಿ 2 ರೈಲುಗಳಿಗೆ ಬೆಂಕಿಯಿಟ್ಟ ಪ್ರತಿಭಟನಾಕಾರರು


ಮಾತು ತಪ್ಪಿದ ಮೋದಿ


ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಮೋದಿ ಮಾತು ತಪ್ಪಿದ್ದಾರೆ.‌ ಈಗ ಸಾರ್ವತ್ರಿಕ ಚುನಾವಣೆ ಹತ್ತಿರವಿರುವುದರಿಂದ ಮತ್ತೊಂದು ನಾಟಕಕ್ಕೆ ತಾಲೀಮು ನಡೆಸುತ್ತಿದ್ದಾರೆ. ಅಗ್ನಿಪಥ್ ಯೋಜನೆ ಮೂಲಕ ಸೇನೆಯಲ್ಲಿ ಕಾಲ್ಪನಿಕ ಹುದ್ದೆ ಸೃಷ್ಟಿಸುವುದು ಈ ನಾಟಕದ ಒಂದು ಭಾಗ. ಆದರೆ ಮೋದಿಯವರ ಈ ನಾಟಕ ನಂಬಲು ಯುವಕರು ಮೂರ್ಖರಲ್ಲ ಎಂದು ಕಿಡಿ ಕಾರಿದ್ದಾರೆ.

Published by:Mahmadrafik K
First published: