ದೆಹಲಿಯ ಕೆಂಪುಕೋಟೆ (Delhi Red fort) ಮೇಲೆ ಕೇಸರಿ ಧ್ವಜ (Saffron Flag) ಹಾರಿಸುವ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ವಿರುದ್ಧ ದೆಹಲಿಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ (Rajyasabha MP Sanjay Singh) ದೆಹಲಿಯ ನಾರ್ಥ್ ಅವೆನ್ಯೂ ಠಾಣೆಯಲ್ಲಿ ಈಶ್ವರಪ್ಪ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕೆ.ಎಸ್.ಈಶ್ವರಪ್ಪ ಹೇಳಿಕೆ ಖಂಡಿಸಿ, ಕಾಂಗ್ರೆಸ್ (Congress Protest) ಅಧಿವೇಶನದ ವೇಳೆ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿತ್ತು.
ಅಂದು ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?
ಹಿಜಾಬ್ ಗಲಾಟೆ ವೇಳೆ ಶಿವಮೊಗ್ಗ ಕಾಲೇಜಿನ ಧ್ವಜಸ್ತಂಭದ ಮೇಲೆ ಕೆಲ ಪುಂಡ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದರು. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ವೇಳೆ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ನವರು ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಅಲ್ಲಿ ಹಾಗೆ ನಡೆದಿಲ್ಲ. ಕೇಸರಿ ಧ್ವಜವನ್ನು ಎಲ್ಲಿ ಬೇಕಾದರೂ ಹಾಕಬಹುದು. ಇಂದಲ್ಲ ನಾಳೆ ಕೆಂಪು ಕೋಟೆಯಲ್ಲೂ ಕೇಸರಿ ಧ್ವಜ ಹಾರಬಹುದು. ಇವತ್ತೆ ಅಂತ ಹೇಳುತ್ತಿಲ್ಲ. ಮುಂದೊಂದು ದಿನ ಈ ಘಟನೆ ನಡೆಯಬಹುದು ಅಂತ ಹೇಳಿದ್ದರು.
ಇದನ್ನೂ ಓದಿ: Ramanagara: ಸಿದ್ದರಾಮಯ್ಯ ಸನ್ಯಾಸತ್ವ ಪಡೆಯಲಿ ಎಂದ ಅಶ್ವಥ್ ನಾರಾಯಣ್
ಇವತ್ತು ದೇಶದಲ್ಲಿ ತ್ರಿವರ್ಣ ಧ್ವಜ ಇದೆ. ಅದಕ್ಕೆ ಎಲ್ಲರೂ ಗೌರವ ನೀಡಬೇಕು. ರಾಷ್ಟ್ರಧ್ವಜ ಗೌರವಿಸದವನು ರಾಷ್ಟ್ರದ್ರೋಹಿ ಆಗುತ್ತಾನೆ. ತ್ರಿವರ್ಣ ಧ್ವಜ ಹಾರಿಸಲು ಕೆಲವು ನಿಯಮಗಳಿವೆ. ಅದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದರು.
ವಿವಾದಿತ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಈಶ್ವರಪ್ಪ
ಇನ್ನೂ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಈಶ್ವರಪ್ಪ ಅವರು ಸ್ಪಷ್ಟನೆ ನೀಡುವ ಪ್ರಯತ್ನವನ್ನು ಮಾಡಿದ್ದರು. ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ರಾಷ್ಟ್ರಧ್ವಜ (National Flag) ನನ್ನ ತಾಯಿ ಸಮಾನ. ಇಂತಹದ್ದಕ್ಕೆಲ್ಲಾ ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ. ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕೆಂಬ ಅಭಿಲಾಷೆ ರಾಜ್ಯದ ಜನರದ್ದು, ವಿಧಾನಸಭೆ(Assembly)ಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದೆ.
ಜನ ಸಾಮಾನ್ಯರ ಕಷ್ಟ, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಈ ಸಮಸ್ಯೆ ಇಟ್ಟುಕೊಂಡು, ಜನರ ಮಧ್ಯೆ ಹೋಗೋಣ ಬನ್ನಿ. ರಾಷ್ಟ್ರ ಧ್ವಜದ ಬಗ್ಗೆ ಜನರೇ ತೀರ್ಮಾನ ಮಾಡಲಿ. ಅವರು ಬರಲಿ, ನಾವು ಹೋಗೋಣ ಬನ್ನಿ. ಮತ್ತೊಮ್ಮೆ ಈ ಬಗ್ಗೆ ನಾನು ಮಾತನಾಡಲ್ಲ. ಈ ವಿಚಾರವನ್ನು ನಾನು ಇಲ್ಲಿಯೇ ಕೈ ಬಿಡಿ ಎಂದು ಈಶ್ವರಪ್ಪ ಮನವಿ ಮಾಡಿಕೊಂಡಿದ್ದರು.
ಬಿಜೆಪಿ ಯಾವತ್ತೂ ರಾಷ್ಟ್ರಧ್ವಜದಿಂದ ಸ್ಪೂರ್ತಿ ಪಡೆದಿಲ್ಲ
ರಾಷ್ಟ್ರಧ್ವಜಕ್ಕೆ ಅವಮಾನ ಆದರೂ ಸುಮ್ಮನೆ ಕುಳಿತುಕೊಳ್ಳಬೇಕಾ? ಇದರ ಬಗ್ಗೆ ಕೇಳಿದ್ರೆ ಜವಾಬ್ದಾರಿ ಇಲ್ಲ ಅಂತಾರೆ. ರಾಷ್ಟ್ರಧ್ವಜಕ್ಕೆ ಅಗೌರವ ಮಾಡೋದು ದೇಶ ಭಕ್ತಿನಾ? ಅಂಥವರು ಸಚಿವರಾಗಿ ಇರಬೇಕಾ?. ಬಿಜೆಪಿ ಯಾವತ್ತೂ ರಾಷ್ಟ್ರಧ್ವಜದಿಂದ ಸ್ಪೂರ್ತಿ ಪಡೆದವರಲ್ಲ. ಅವರಿಗೆ ತ್ರಿವರ್ಣ ಧ್ವಜದ ಮಹತ್ವ ಗೊತ್ತಿಲ್ಲ. ಅವರಿಂದ ನಾವು ದೇಶಭಕ್ತಿ ಬಗ್ಗೆ ಕಲಿಯುವ ಅಗತ್ಯವಿಲ್ಲ ಎಂದು ಕೆ.ಎಸ್.ಈಶ್ವರಪ್ಪ ವಿರುದ್ಧ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದರು.
ಇದನ್ನೂ ಓದಿ: Karnataka Politics: ಟಿಪ್ಪು, ಬಾಬರ್, ಘಜ್ನಿ ಬಗ್ಗೆ ಟೀಕೆ ಮಾಡಿದ್ರೆ ಸಿದ್ದರಾಮಯ್ಯ ಏಕೆ ಎದೆ ಬಡಿದುಕೊಳ್ತಾರೆ; ಸಿ ಟಿ ರವಿ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷದವರು ಅವರಿಂದ ಕಲಿಯಬೇಕಾ? ನಮ್ಮ ಹೋರಾಟ ಮುಂದುವರೆಯಲಿದೆ. ಇದಾದ ಮೇಲೆ ನಾವು ಜನರ ಬಳಿ ಹೋಗ್ತೇವೆ. ಅವರು ಸಂವಿಧಾನಕ್ಕೆ ವಿರುಧ್ಧ ಇರೋರು ಎಂದು ಕಿಡಿಕಾರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ