73ನೇ ಸ್ವಾತಂತ್ರ್ಯ ದಿನಾಚರಣೆ; ನಿರುದ್ಯೋಗ, ಭ್ರಷ್ಟಚಾರ, ಅಸಮಾನತೆ ವಿರುದ್ಧದ ಹೋರಾಟಕ್ಕೆ ಆಪ್​​ ಪಣ

ಸಮಾಜಕ್ಕೆ ಮಾರಕವಾಗಿರುವ ನಿರುದ್ಯೋಗ, ಆರ್ಥಿಕ ಅಸಮಾನತೆ, ಮಹಿಳೆಯ ಮೇಲಿನ ದೌರ್ಜನ್ಯಗಳಂತಹ ಕೆಡಕುಗಳನ್ನು ಕಿತ್ತೊಗೆದು ಸ್ವಾತಂತ್ರ್ಯದ ಆಶಯಗಳನ್ನು ಈಡೇರಿಸಲು ಆಮ್ ಆದ್ಮಿ ಪಕ್ಷವು ಸಜ್ಜಾಗಿದೆ.

news18
Updated:August 15, 2019, 7:27 PM IST
73ನೇ ಸ್ವಾತಂತ್ರ್ಯ ದಿನಾಚರಣೆ; ನಿರುದ್ಯೋಗ, ಭ್ರಷ್ಟಚಾರ, ಅಸಮಾನತೆ ವಿರುದ್ಧದ ಹೋರಾಟಕ್ಕೆ ಆಪ್​​ ಪಣ
ಆಪ್​​ ಪಾರ್ಟಿ
  • News18
  • Last Updated: August 15, 2019, 7:27 PM IST
  • Share this:
ಬೆಂಗಳೂರು(ಆಗಸ್ಟ್​​.15): ಕರ್ನಾಟಕದ ಆಮ್​​​ ಆದ್ಮಿ ಪಕ್ಷವೂ 73ನೇ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಂಡಿತ್ತು. ಸ್ವಾತಂತ್ರ್ಯ ದಿನಾಚರಣೆಯಂದೇ ಆಪ್​​ ಮುಖಂಡರು, ತಮ್ಮ ನೂತನ ಕಛೇರಿ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಾಡಿನ ಹಿರಿಯ ಸಂಶೋಧಕ ಎಂ ಚಿದಾನಂದ ಮೂರ್ತಿಯವರು, ನಿನ್ನೆಯನ್ನು ಮರೆತವನು ನಾಳೆ ಬದುಕಲಾರ. ಹೀಗಾಗಿ ಭಾರತದ ಇತಿಹಾಸ ಮತ್ತು ಸ್ವಾತಂತ್ರ್ಯದ ಆಶಯಗಳೊಂದಿಗೆ ನಾವು ಮುನ್ನಡೆಯಬೇಕು ಎಂದು ತಿಳಿಸಿದರು.

ನಮ್ಮ ದೇಶ ಭಾರತ, ಇಂಡಿಯಾ ಅಲ್ಲ. ಬ್ರಿಟಿಷರ ಅನುಕೂಲಕ್ಕೋಸ್ಕರ ಕರೆದುಕೊಳ್ಳಲಾದ ಹೆಸರನ್ನು ನಾವಿನ್ನೂ ಮುಂದುವರೆಸುತ್ತಿದ್ದೇವೆ. ಎಲ್ಲೆಡೆ ಇಂಡಿಯಾ ಹೆಸರನ್ನು ತೆಗೆದು ಭಾರತ ಎಂದು ಕರೆಯಬೇಕು ಎಂದು ಹಿರಿಯ ಸಂಶೋಧಕ ಎಂ ಚಿದಾನಂದ ಮೂರ್ತಿಯವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಹೀಗೆಯೇ ಮಾತು ಮುಂದುವರೆಸಿದ ಅವರು, ಇಂದು ಇಡೀ ದೇಶವೇ ದೆಹಲಿಯತ್ತ ನೋಡುತ್ತಿದೆ. ಸ್ವಾತಂತ್ರ್ಯದ ಸಮಾನತೆಯ ಆಶಯಗಳೊಂದಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಖಾತರಿ ಯೋಜನೆಗಳೊಂದಿಗೆ ರಾಜ್ಯವನ್ನು ಮುನ್ನಡೆಸುತ್ತಿರುವ ದೆಹಲಿಯ ಆಮ್ ಆದ್ಮಿ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿವೆ. ಕರ್ನಾಟಕವನ್ನೂ ಅಂತಹ ಮಾದರಿ ರಾಜ್ಯವನ್ನಾಗಿಸಲು ಆಮ್ ಆದ್ಮಿ ಪಕ್ಷ ಉತ್ತಮ ಯೋಜನೆಗಳೊಂದಿಗೆ ಸಜ್ಜಾಗಲಿ ಎಂದು ಸಲಹೆ ನೀಡಿದರು.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಬಿಬಿಎಂಪಿ ಉಸ್ತುವಾರಿ ಶಾಂತಲಾ ದಾಮ್ಲೆಯವರು, ಹಲವಾರು ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಆದರೆ ಪ್ರಜಾತಂತ್ರ ವಿರೋಧಿ ರಾಜಕಾರಣದಿಂದ ಸ್ವಾತಂತ್ರ್ಯದ ಆಶಯಗಳು ಕನಸಾಗಿಯೇ ಉಳಿದಿವೆ. ಪ್ರಜಾಪ್ರಭುತ್ವವೆಂದರೆ ಎಲ್ಲರನ್ನೂ ಒಳಗೊಳ್ಳುವುದೇ ಹೊರತು, ನಮ್ಮನಾಳುವ ಸರ್ವಾಧಿಕಾರಿಯನ್ನು ಆಯ್ಕೆ ಮಾಡುವುದಲ್ಲ ಎಂದರು.

ಅಲ್ಲದೇ ಸಮಾಜಕ್ಕೆ ಮಾರಕವಾಗಿರುವ ನಿರುದ್ಯೋಗ, ಆರ್ಥಿಕ ಅಸಮಾನತೆ, ಮಹಿಳೆಯ ಮೇಲಿನ ದೌರ್ಜನ್ಯಗಳಂತಹ ಕೆಡಕುಗಳನ್ನು ಕಿತ್ತೊಗೆದು ಸ್ವಾತಂತ್ರ್ಯದ ಆಶಯಗಳನ್ನು ಈಡೇರಿಸಲು ಆಮ್ ಆದ್ಮಿ ಪಕ್ಷವು ಸಜ್ಜಾಗಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಯ ಅಸಮರ್ಥತೆಯಿಂದ ಕಸ, ಕೊಳಚೆ, ಕುಡಿಯುವ ನೀರಿನ ಕೊರತೆಯಂತಹ ಸಮಸ್ಯೆಗಳು ಹೆಚ್ಚಾಗುತ್ತಾ ಇವೆ. ಇಂತಹ ಸಮಸ್ಯೆಗಳಿಂದ ಬೆಂಗಳೂರನ್ನು ಸ್ವಾತಂತ್ರ್ಯಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಶಾಂತಲಾ ದಾಮ್ಲೆಯವರು ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ: “ನಡುರಾತ್ರಿ ಸ್ವಾತಂತ್ರ್ಯೋತ್ಸವ”; ದೊರೆಸ್ವಾಮಿ, ರಾವಣ, ಪ್ರಗತಿಪರರ ಉಪಸ್ಥಿತಿಯಲ್ಲಿ ಮಧ್ಯರಾತ್ರಿ ಆರೋಹಣವಾಯಿತು ರಾಷ್ಟ್ರಧ್ವಜ

ಶಾಂತಲಾ ದಾಮ್ಲೆಯವರ ಬೆನ್ನಲ್ಲೇ ಮಾತನಾಡಿದ ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿಯವರು ಬಿಬಿಎಂಪಿಯು ಭ್ರಷ್ಟರ ಕೂಟವಾಗಿ ಮಾರ್ಪಟ್ಟಿದೆ. ಭ್ರಷ್ಟಾಚಾರದಿಂದ ಬಿಬಿಎಂಪಿಯನ್ನು ಸ್ವಾತಂತ್ರ್ಯಗೊಳಿಸಿ ಬೆಂಗಳೂರಿಗೆ ಅಂಟಿರುವ ಸ್ವಜನ ಪಕ್ಷ ಪಾತ, ದುರಾಡಳಿತದಂತಹ ರೋಗಗಳನ್ನು ಒದ್ದೋಡಿಸುವ ಸವಾಲು ನಮ್ಮ ಮುಂದಿದೆ. ಬಿಬಿಎಂಪಿಯಲ್ಲಿ ಸ್ವಚ್ಛ ಮತ್ತು ಪ್ರಾಮಾಣಿಕ ಆಡಳಿತವನ್ನು ತಂದು ಬೆಂಗಳೂರಿನ ಜನರಿಗೆ ದೊರಕಬೇಕಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಮತ್ತು ಬೆಂಗಳೂರನ್ನು ಸ್ವಚ್ಛ ನಗರವನ್ನಾಗಿಸಲು ಆಮ್ ಆದ್ಮಿ ಪಕ್ಷವು ಪಣತೊಟ್ಟಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Loading...

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನೀ, ಪಕ್ಷದ ಮಾಜಿ ರಾಜ್ಯ ಸಂಚಾಲಕರಾದ ಸಿದ್ಧಾರ್ಥ ಶರ್ಮ,  ವಿಜಯ ನಗರ ಕ್ಷೇತ್ರ ಅಧ್ಯಕ್ಷರಾದ ಚನ್ನಪ್ಪಗೌಡ ಹಾಗೂ ಸ್ಥಳೀಯ ಮುಖಂಡರಾದ ಸೀತಾರಾಮ್, ಜ್ಯೋತಿಷ್ ಕುಮಾರ್  ಮತ್ತು ರೇಣುಕಾರವರು ಉಪಸ್ಥಿತರಿದ್ದರು.
-----------
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...