ಶಿವಮೊಗ್ಗ: ಸ್ಯಾಂಟ್ರೋ ರವಿ ಒಬ್ಬ (Santro Ravi) ಕಾಮುಕ ವ್ಯಾಪಾರಿ. ಆತನ ಮೇಲೆ ಸಾಕಷ್ಟು ಕೇಸುಗಳಾಗಿವೆ. ಈ ಹಿಂದೆ ಪೊಲೀಸ್ ಕಮಿಷನರ್ (Police Commissioner) ಆಗಿದ್ದ ಪ್ರವೀಣ್ ಸೂದ್ (Praveen Sood) ಅವರು ಅವನ ಮೇಲೆ ಸಾಕಷ್ಟು ಕೇಸುಗಳನ್ನು ಹಾಕಿದ್ದಾರೆ. ಅಶಕ್ತವಾಗಿರುವ ಸರ್ಕಾರ ಇಂತಹ ಹುಳ, ಹುಪ್ಟಟೆ, ನರಿಗಳ ಸಹಕಾರ ತೆಗೆದುಕೊಳ್ಳುತ್ತವೆ ಎಂದು ಆಮ್ ಆದ್ಮಿ (Aam Aadmi Party) ಪಕ್ಷದ ರಾಜ್ಯ (Karnataka) ಉಪಾಧ್ಯಕ್ಷ ಭಾಸ್ಕರ್ ರಾವ್ (Bhaskar Rao) ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಸ್ಕರ್ ರಾವ್ ಅವರು, ಅಶಕ್ತವಾಗಿರುವ ಸರ್ಕಾರದಲ್ಲಿ ಬ್ರೋಕರ್ ಗಳು ಏಜೆಂಟರ ಸಹಕಾರ ತೆಗೆದುಕೊಳ್ಳಲು ಹೋಗುತ್ತಾರೆ. ಜನರಿಗೆ ಉತ್ತರ ನೀಡುವ ಸರ್ಕಾರ ಹೇಗಿರಬೇಕು? ಗಟ್ಟಿಯಾಗಿರುವ ಸರ್ಕಾರಗಳಿಗೆ, ಇಂತಹ ರೌಡಿಗಳು, ತಲೆ ಹಿಡುಕರ ಸಹವಾಸ ಮಾಡುವ ಅಗತ್ಯವಿಲ್ಲ. ಈ ಹಿಂದೆ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ನಲ್ಲಿ ಗೂಂಡಾಗಳಿಗೆ ಪ್ರೋತ್ಸಾಹ ಕೊಟ್ಟರಾ? ಎಲ್ಲಾ ಗೂಂಡಾಗಳಿಗೆ ಆಗ ಬಲಿ ಹಾಕಿದ್ದರು ಅಲ್ವಾ? ನೀವು ಕೂಡ ಈ ರೀತಿಯ ಗೂಂಡಾಗಳಿಗೆ ಬಲಿ ಹಾಕಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಗ್ರಹಿಸಿದರು.
ಕುಂಬಳಕಾಯಿ ಕಳ್ಳ ಎಂದರೇ, ಹೆಗಲು ಮುಟ್ಟಿ ನೋಡಿದ ಎಂಬಂತಾಗಿದೆ
ಸಚಿವರ ಹೆಸರುಗಳನ್ನು ನಾನು ವೈಯುಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ, ರಾಜ್ಯದ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕಾರಣಿಗಳ ಬಗ್ಗೆ ಅಗೌರವವಾಗಿ ನೋಡುತ್ತಿದ್ದಾರೆ. ಸಿಡಿ ಪ್ರಕರಣ ಅದು, ಇದು ಅಂತಾ ನೋಡುತ್ತಿದ್ದಾರೆ.
ಏನು ಇಲ್ಲದೇ, ಅವರೆಲ್ಲಾ ಯಾಕೆ ಸ್ಟೇ ತೆಗೆದುಕೊಂಡು ಬಂದರು. ಏನಾದರೂ ಇದ್ದರೆ ತಾನೇ ಸ್ಟೇ ತೆಗೆದುಕೊಂಡು ಬರೋದು? ನಮ್ಮ ಮೇಲೆ, ನಿಮ್ಮ ಮೇಲೆ ಸಿಡಿ ಆರೋಪ ಬಂದರೆ, ಏನಾದರೂ ಮಾಡಿಕೊಂಡು ಹೋಗಿ ಅನ್ನುತ್ತೇವೆ. ಏಕೆಂದರೆ ನಾವು ಎಲ್ಲರೂ ಸ್ವಚ್ಛವಾಗಿರುವವರು.
ಸಿಡಿ ಬಿಡುಗಡೆ ಮಾಡುತ್ತೆ ಎಂದರೇ ಹೈಕೋರ್ಟಿನಲ್ಲಿ ಹೋಗಿ ಸ್ಟೇ ತೆಗೆದುಕೊಂಡು ಬರುತ್ತಾರೆ. ಹೀಗೆ ಮಾಡಿದರೆ ಕುಂಬಳಕಾಯಿ ಕಳ್ಳ ಎಂದರೇ, ಹೆಗಲು ಮುಟ್ಟಿ ನೋಡಿದ ಎಂಬಂತಾಗುತ್ತದೆ. ಸ್ಯಾಂಟ್ರೋ ರವಿ ನೋಟುಗಳನ್ನಿಟ್ಟುಕೊಂಡು ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ. ಇದೆಲ್ಲದರ ಹಿಂದೆ ರಾಜಕಾರಣಿಗಳಿದ್ದಾರೆ. ಇಂತಹವರನ್ನು ರಾಜಕಾರಣಿಗಳು ಹತೋಟಿಯಲ್ಲಿಟ್ಟುಕೊಳ್ಳಬೇಕು.
ರಾಜ್ಯದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ
ಕೇಂದ್ರ ಸರ್ಕಾರದಲ್ಲಿ ಒಂದು ಡಿಸಿಪ್ಲಿನ್ ಇದೆ. ಅದೇ ರೀತಿ ಇಲ್ಲಿಯೂ ಇರಬೇಕು. ಯಾರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ಬಗ್ಗೆ ಶಿಸ್ತು ಇರ್ಬೇಕು. ಬೆಂಗಳೂರಿನಲ್ಲಿ ಈ ರೀತಿಯ ಬಹಳಷ್ಟು ಅಫೆನ್ಸ್ ಗಳು ನಡೆಯುತ್ತಿವೆ.
ಇದನ್ನೂ ಓದಿ: Tippu Nija Kanasugalu: ಪುತ್ತೂರಿನಲ್ಲಿ ಇಂದು ವಿವಾದಿತ 'ಟಿಪ್ಪು ನಿಜ ಕನಸುಗಳು' ನಾಟಕ; ಎಸ್ಡಿಪಿಐನಿಂದ ವಿರೋಧ
ಆತ ನಾನು ಇವರ ಬಳಿ ಬಹಳ ಹತ್ತಿರ ಇದ್ದೆ. ಇವರು ನನ್ನ ಬಳಿ ಚೆನ್ನಾಗಿದ್ದಾರೆ ಎಂದು ಫೋಟೋ ತೋರಿಸುತ್ತಾನೆ. ಒನ್ ಟೂ ಒನ್ ನಾನು ಇವರ ಬಳಿ ಚೆನ್ನಾಗಿದ್ದೇನೆ ಎಂದು ಹೇಳುತ್ತಾರೆ. ಇದು ಹೊಸ ರೀತಿಯ ಟ್ರೆಂಡ್ ಒಂದು ಶುರುವಾಗಿದೆ. ರಾಜಕೀಯವಾಗಿ ಇವರೆಲ್ಲಾ ಸ್ಟ್ರಾಂಗ್ ಆಗಿ ಇಲ್ಲದೇ ಹೋದರೆ ಇವೆಲ್ಲಾ ನಡೆಯುತ್ತದೆ. ಮೊದಲು ರಾಜಕಾರಣಿಗಳು ಸ್ಟ್ರಾಂಗ್ ಆಗಿ ಇರಬೇಕು ಎಂದು ಹೇಳಿದರು.
ಕೋಟ್ಯಂತರ ರೂಪಾಯಿಯ ಕಂತೆ ಕಂತೆ ನೋಟುಗಳೊಂದಿಗೆ ಪೋಸ್ ಕೊಡ್ತಿರುವ ಸ್ಯಾಂಟ್ರೋ ರವಿಯ ಮಾಹಿತಿ ಇನ್ನೂ ಐಟಿ, ಇಡಿ ಕಚೇರಿಗಳಿಗೆ ತಲುಪಿಲ್ಲವೇ?
ಈ ಅಕ್ರಮ ಹಣದ ಮೂಲ ಹುಡುಕುವುದು ಇಡಿಗೆ ಇಷ್ಟವಿಲ್ಲವೇ ಅಥವಾ @BJP4Karnataka ಸರ್ಕಾರದ ಬುಡಕ್ಕೆ ಬರುವ ಸಂಗತಿಯನ್ನು ಮುಟ್ಟದಂತೆ ಯಜಮಾನರ ಆಜ್ಞೆಯಾಗಿದೆಯೇ?
ಇಡಿ ದಾಳಿ ಯಾವಾಗ @BJP4Karnataka? pic.twitter.com/LUgxMnqiAD
— Karnataka Congress (@INCKarnataka) January 6, 2023
ಇನ್ನು, ಸ್ಯಾಂಟ್ರೋ ರವಿ ಬಂಧನ, ವಿಚಾರಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಭಯೋತ್ಪಾಧನೆಗಿಂತ ದೊಡ್ಡ ವಿಚಾರ ಇದು. ಇಲಾಖೆಯ ಅಧಿಕಾರಿಗಳೇ ಆತನ ಸಂಪರ್ಕದಲ್ಲಿದ್ದಾರೆ. ಇಂತಹ ಅಧಿಕಾರಿಗಳಿಂದ ಏನು ತನಿಖೆ ಮಾಡ್ತೀರಿ. ನೂರಾರು ಪೊಲೀಸರೇ ಹಣ ಕೊಟ್ಟು ಆತನ ಸಹಕಾರ ಪಡೆದುಕೊಂಡಿದ್ದಾರೆ. ಆದ್ದರಿಂದ ಹೈಕೋರ್ಟ್ ನ್ಯಾಯಾಧೀಶರ ನೇಮಕ ಮಾಡಿ ತನಿಖೆ ನಡೆಸಿ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ