• Home
  • »
  • News
  • »
  • state
  • »
  • Crime News: ಸರ್ವಿಸ್ ಕೊಡ್ತೀಯಾ? 50 ಸಾವಿರ ಕೊಡ್ತೀನಿ! ಪತ್ರ ಬರೆದೇ ಯುವತಿಗೆ ಕಿರುಕುಳ ಕೊಟ್ಟ ಕಾಮುಕ!

Crime News: ಸರ್ವಿಸ್ ಕೊಡ್ತೀಯಾ? 50 ಸಾವಿರ ಕೊಡ್ತೀನಿ! ಪತ್ರ ಬರೆದೇ ಯುವತಿಗೆ ಕಿರುಕುಳ ಕೊಟ್ಟ ಕಾಮುಕ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಪಾರ್ಟ್‍ಮೆಂಟ್‍ಯೊಂದರಲ್ಲಿ ವಾಸವಿರುವ ಮಹಿಳೆಗೆ ಅಪರಿಚಿತನೊಬ್ಬ ಫ್ಲಾಟ್‍ನ ಡೋರ್‌ನಲ್ಲಿ ಲೇಟರ್ ಇಟ್ಟು ಕಾಲಿಂಗ್ ಬೆಲ್ ಬಾರಿಸಿದ್ದಾನೆ. 'ಯಾರೇ ನೀನು ಚೆಲುವೆ' ಸಿನಿಮಾದ ರೀತಿಯ ಪ್ರೇಮಪತ್ರ ಇರಬಹುದಾ ಅಂತ ನೋಡಿದ್ರೆ ಅಲ್ಲಿ ಇದ್ದುದ್ದು ಅಶ್ಲೀಲ ಬರಹ!

  • Share this:

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು (Crime Cases) ಜಾಸ್ತಿಯಾಗುತ್ತವೇ ಇದೆ. ಮೊನ್ನೆ ಮೊನ್ನೆಯಷ್ಟೇ ಶಾಲಾ ಬಸ್‌ನಲ್ಲಿ (School Bus) ಮಹಿಳೆಯನ್ನು (Ladies) ಹತ್ತಿಸಿಕೊಂಡು, ಆಕೆ ಮೇಲೆ ಅತ್ಯಾಚಾರ (Rape) ನಡೆಸಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಕಹಿ ಘಟನೆಯ ತನಿಖೆ (Enquiry) ನಡೆಯುತ್ತಿರುವಾಗಲೇ ಮತ್ತೊಂದು ಲೈಂಗಿಕ ದೌರ್ಜನ್ಯ (sexually harassement) ನಡೆದಿರುವುದು ಬೆಳಕಿಗೆ ಬಂದಿದೆ. ಈ ಕಾಮುಕ ಸ್ವಲ್ಪ ವಿಚಿತ್ರ ರೀತಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಪತ್ರ ಬರೆದು ಆಕೆಗೆ ಹಿಂಸೆ ನೀಡುತ್ತಿದ್ದಾನಂತೆ. ಅಪಾರ್ಟ್‌ಮೆಂಟ್‌ (Apartment) ಒಂದರಲ್ಲಿ ವಾಸವಾಗಿರುವ ಯುವತಿಗೆ (Young Girl) ಪತ್ರ (Letter) ಬರೆಯುವ ಅಪರಿಚಿತ, ಪತ್ರದಲ್ಲಿ ಆಕೆ ವಿರುದ್ಧ ಅಶ್ಲೀಲವಾಗಿ ಬರೆದಿದ್ದಾನಂತೆ!


ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಚಿತ್ರ ಪ್ರಕರಣ


ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದ ಯುವತಿಗೆ ಅಪರಿಚಿತ ವ್ಯಕ್ತಿಯೊಬ್ಬ ಪತ್ರ ಬರೆದು ಲೈಂಗಿಕ ಕಿರುಕುಳ ನೀಡುತ್ತಿದ್ದಾನಂತೆ.


ಮನೆ ಬಾಗಿಲ ಬಳಿ ಲೆಟರ್ (ಸಾಂದರ್ಭಿಕ ಚಿತ್ರ)


ಪತ್ರದಲ್ಲಿ ಅಶ್ಲೀಲವಾಗಿ ಬರೆಯುವ ಯುವಕ


ಅಪಾರ್ಟ್‍ಮೆಂಟ್‍ಯೊಂದರಲ್ಲಿ ವಾಸವಿರುವ ಮಹಿಳೆಗೆ ಅಪರಿಚಿತನೊಬ್ಬ ಫ್ಲಾಟ್‍ನ ಡೋರ್‌ನಲ್ಲಿ ಲೇಟರ್ ಇಟ್ಟು ಕಾಲಿಂಗ್ ಬೆಲ್ ಬಾರಿಸಿದ್ದಾನೆ. ಪತ್ರದಲ್ಲಿ ಅಸಭ್ಯ ಹಾಗೂ ಅಶ್ಲೀಲ ಪದ ಬಳಸಲಾಗಿದೆ ಎನ್ನಲಾಗಿದೆ.


ಇದನ್ನೂ ಓದಿ: Marriage Cancel: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!


ಅಪರಿಚಿತ ಬರೆದ ಪತ್ರದಲ್ಲಿ ಏನಿತ್ತು?


ಪತ್ರದಲ್ಲಿ, “ನನಗೆ ನೀವು ಒಳ್ಳೆಯ ಸರ್ವಿಸ್‌ ಕೊಡುತ್ತೀರಾ? ಹಾಗಾದ್ರೆ ಇದೇ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್‍ಗೆ ಬನ್ನಿ. ನಾನು ನಿಮಗೆ ಒಂದು ದಿನಕ್ಕೆ 50 ಸಾವಿರ ರೂಪಾಯಿ ಕೊಡುತ್ತೇನೆ” ಎಂದು ಅಶ್ಲೀಲವಾಗಿ ಬರೆದಿದ್ದಾನಂತೆ.


ಅಶ್ಲೀಲ ಲೆಟರ್ ಬರೆದು ಕಿರುಕುಳ ಮನೆ ಬಾಗಿಲ ಬಳಿ ಲೆಟರ್ (ಸಾಂದರ್ಭಿಕ ಚಿತ್ರ)


ಅಪರಿಚಿತನ ಪತ್ರದಿಂದ ಯುವತಿಗೆ ಕಿರಿಕಿರಿ


ಈ ರೀತಿ ಅಶ್ಲೀಲವಾಗಿ ಬರೆದ ಪತ್ರ ಓದಿ ಯುವತಿ ಆಘಾತಗೊಂಡಿದ್ದಾಳೆ. ಆತ ಯಾರು? ನನ್ನನು ಯಾಕೆ ಟಾರ್ಗೆಟ್ ಮಾಡಿದ್ದಾನೆ? ನನಗೇ ಯಾಕೆ ಅಸಹ್ಯವಾಗಿ ಪತ್ರ ಬರೆದಿದ್ದಾನೆ ಅಂತ ಯೋಚಿಸಿದ್ದಾಳೆ. ಇನ್ನೂ  ‌ಪತ್ರವನ್ನು ಮಹಿಳೆ ಕೂಡಲೇ ಅಪಾರ್ಟ್‍ಮೆಂಟ್‍ನ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಬಳಿಕ ಈ ಬಗ್ಗೆ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.


ಕೋಣನಕುಂಟೆ ಪೊಲೀಸ್ ಠಾಣೆ


ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು


ಇನ್ನು ಸದ್ಯ ಪತ್ರದ ಮೂಲಕ ಲೈಂಗಿಕ ಕಿರುಕುಳ ಎಂದು ಅಪರಿಚಿತನ ವಿರುದ್ಧ ಸಂತ್ರಸ್ತ ಮಹಿಳೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಕೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಅಪಾರ್ಟ್‍ಮೆಂಟ್‍ನಲ್ಲಿರುವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.


ವಿದೇಶಿ ಮಹಿಳೆಗೆ ನಡುರಸ್ತೆಯಲ್ಲಿ ಕೈ ಹಿಡಿದು ಎಳೆದಾಡಿ ಮುತ್ತು ಕೊಟ್ಟ!


 ಇತ್ತೀಚಿನ ದಿನಗಳಲ್ಲಿ ಕೊಲೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಶೋಷಣೆ ಮುಂತಾದ ಅಪರಾಧಗಳು ದಿನೇ ದಿನೇ ಹೆಚ್ಚಾಗುತ್ತಾನೆ ಇದೆ. ಸರ್ಕಾರ ಎಷ್ಟೇ ಕಡಿವಾಣ ಹಾಕಿದರೂ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಅದರಲ್ಲೂ ಮಹಿಳೆಯರಿಗೆ ಕೊಡುವ ಲೈಂಗಿಕ ಕಿರುಕುಳ ಶೋಷಣೀಯ ಎಂದರೆ ತಪ್ಪಾಗಲಾರದು.  ವಾಣಿಜ್ಯ ನಗರಿಯಾದ ಮುಂಬೈನಲ್ಲಿ   ವಿದೇಶಿ ಮಹಿಳೆಯೊಬ್ಬರಿಗೆ ಇಬ್ಬರು ವ್ಯಕ್ತಿಗಳು ಲೈಂಗಿಕ ಕಿರುಕುಳ ಕೊಟ್ಟ ಘಟನೆ ನಡೆದಿದೆ. ವಿದೇಶಿ ಮಹಿಳೆ ಮೂಲತಃ ದಕ್ಷಿಣ ಕೊರಿಯಾದವರು.  ಇವರು ಯೂಟ್ಯೂಬರ್ ಆಗಿದ್ದಾರೆ.


ಇದನ್ನೂ ಓದಿ: Thailand Monks: ಡ್ರಗ್ಸ್ ನಶೆಯಲ್ಲಿ ಬೌದ್ಧ ಭಿಕ್ಷುಗಳ ತೇಲಾಟ! ಟೆಸ್ಟ್‌ನಲ್ಲಿ ಎಲ್ಲರೂ ಫೇಲ್!


ಮುಂಬೈನ ಖಾರ್ ಪ್ರದೇಶದಲ್ಲಿ ದಕ್ಷಿಣ ಕೊರಿಯಾದ ಮಹಿಳೆ ಯೂಟ್ಯೂಬರ್‌ಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರನ್ನು ಮುಂಬೈ ಪೊಲೀಸರು (ಡಿ. 01 ) ಬಂಧಿಸಿದ್ದಾರೆ. ಮೊಬೀನ್ ಚಂದ್ ಮೊಹಮ್ಮದ್ ಶೇಖ್(19) ಮತ್ತು ಮೊಹಮ್ಮದ್ ನಕೀಬ್ ಸದರಿಯಾಲಂ ಅನ್ಸಾರಿ(20) ಬಂಧಿತ ಆರೋಪಿಗಳಾಗಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು