• Home
  • »
  • News
  • »
  • state
  • »
  • Bengaluru Accident: ಬರ್ತ್‌ ಡೇ ದಿನವೇ ನಡೆಯಿತು ದುರಂತ, ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಯುವತಿ ಸಾವು! ಸಂಭ್ರಮದಲ್ಲಿದ್ದ ಯುವಕನ ಕೈ ಕಟ್

Bengaluru Accident: ಬರ್ತ್‌ ಡೇ ದಿನವೇ ನಡೆಯಿತು ದುರಂತ, ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಯುವತಿ ಸಾವು! ಸಂಭ್ರಮದಲ್ಲಿದ್ದ ಯುವಕನ ಕೈ ಕಟ್

(ಸಾಂದರ್ಭಿಕ ಚಿತ್ರ)

(ಸಾಂದರ್ಭಿಕ ಚಿತ್ರ)

ಯಲಹಂಕ ಏರ್‌ಪೋರ್ಟ್ ಫ್ಲೈ ಓವರ್ ಮೇಲೆ ಮಧ್ಯಾಹ್ನ 12 ಗಂಟೆಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯುವಕನ ಕೈ ಕಟ್​ ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಯುವತಿ ಸಾವನ್ನಪ್ಪಿದ್ದಾರೆ.

  • Share this:

ಯಲಹಂಕ ಏರ್ ಪೋರ್ಟ್ ರಸ್ತೆಯಲ್ಲಿ (Yalahanka Airport Road) ಭೀಕರ ಅಪಘಾತ ಸಂಭವಿಸಿದೆ. ಯಲಹಂಕ ಏರ್‌ಪೋರ್ಟ್ ಫ್ಲೈ ಓವರ್ ಮೇಲೆ ಬೈಕ್​ನಲ್ಲಿ ಬರ್ತಿದ್ದ ಯುವಕ ಕಂಟ್ರೋಲ್​ ತಪ್ಪಿ ವೇಗವಾಗಿ ಬಂದು ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ. ಯುವತಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡಿದ್ದ ಯುವಕ ವೇಗವಾಗಿ ಬೈಕ್​ ರೈಡ್​ ಮಾಡಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಯಲಹಂಕ ಏರ್‌ಪೋರ್ಟ್ ಫ್ಲೈ ಓವರ್ ಮೇಲೆ ಮಧ್ಯಾಹ್ನ 12 ಗಂಟೆಗೆ ಅಪಘಾತ (Accident) ಸಂಭವಿಸಿದೆ. ಅಪಘಾತದಲ್ಲಿ ಯುವಕನ ಕೈ ಕಟ್​ ಆಗಿದ್ದು, ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಯುವತಿ ಸಾವನ್ನಪ್ಪಿದ್ದಾರೆ.


ಹುಟ್ಟುಹಬ್ಬದ ಸೆಲೆಬ್ರೇಷನ್​ಗೆ ಹೊರಟಿದ್ದಾಗ ಅಪಘಾತ


ಯಲಹಂಕ ಫ್ಲೈ ಓವರ್ ಮೇಲೆ  ವೇಗವಾಗಿ ಬೈಕ್​ ಚಲಾಯಿಸಿಕೊಂಡು ಬರ್ತಿದ್ದ ಜಿಶಾನ್ (21) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಯುವತಿ ಸನಾ ಸಾಹಿಬಾ (18) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಯುವತಿ ಮೃತದೇಹ ಯಲಹಂಕ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿದೆ. ಇಬ್ಬರೂ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದರು.
ಇವತ್ತು ಜಿಶಾನ್ ಹುಟ್ಟುಹಬ್ಬ ಹಿನ್ನಲೆ ಇಬ್ಬರು ಸ್ನೇಹಿತರು ಬೈಕ್ ನಲ್ಲಿ ಬೆಂಗಳೂರಿನ ಕಡೆಗೆ ತೆರಳಿದ್ದರು. KA 04 JV 0146 ನಂಬರ್​ನ ಡ್ಯೂಕ್ ಬೈಕ್​ನಲ್ಲಿ ಬರ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿದ್ದು, ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ  ಸಾವು


ಬೆಂಗಳೂರಿನ ರಸ್ತೆಗುಂಡಿ ತಪ್ಪಿಸಲು ಕೆಎಸ್​ಆರ್​ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಉಮಾದೇವಿ ಸಾವನ್ನಪ್ಪಿದ್ದಾರೆ. ಅಪಘಾತ ಹಿನ್ನೆಲೆ ಕೆಎಸ್ಆರ್​​ಟಿಸಿ ಚಾಲಕ ಮಾರುತಿ ರಾವ್ ಎಂಬವರನ್ನು ಬಂಧಿಸಲಾಗಿದೆ. ಸೋಮವಾರ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಸ್ ಅಡಿ ಮಹಿಳೆ ಸಿಲುಕಿದ್ದರು. ಚಿಕಿತ್ಸೆ‌ ಫಲಕಾರಿಯಾಗಿದೆ ರಾಜಾಜಿನಗರ ಇಎಸ್​​ಐ ಆಸ್ಪತ್ರೆಯಲ್ಲಿ ಉಮಾದೇವಿ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಸುಜಾತ ಥಿಯೇಟರ್ ಬಳಿ ಗುಂಡಿ ತಪ್ಪಿಸಲು ಹೋಗಿ ಬಸ್ ಅಡಿ ತಾಯಿ ಮಗಳು ಸಿಲುಕಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು.


ಇದನ್ನೂ ಓದಿ: Potholes in Bengaluru: ಅಪಘಾತ ತಪ್ಪಿಸಲು ಅಖಾಡಕ್ಕಿಳಿದ ಖಾಕಿ! ಟ್ರಾಫಿಕ್ ಪೊಲೀಸರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ


ಹೆಚ್ಚಿನ ಚಿಕಿತ್ಸೆಗಾಗಿ ಮಧ್ಯಾಹ್ನ ರಾಜಾಜಿ ನಗರದ ಇಎಸ್​ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉಮಾದೇವಿ ಅವರನ್ನು ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಧ್ಯಾಹ್ನ ರಾಜಾಜಿ ನಗರದ ಇಎಸ್​ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉಮಾದೇವಿ ಅವರನ್ನು ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತ ಉಮಾದೇವಿ ಪುತ್ರಿ ವನಿತಾ ದೂರು ದಾಖಲು ಪ್ರಕರಣ ಸಂಬಂಧ KSRTC ಬಸ್ ಚಾಲಕ ಮಾರುತಿ ರಾವ್ ಬಂಧನ ಮಾಡಲಾಗಿದೆ. ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿತ್ತು.


ರಾಜಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಬಾಲಕ


ಬೆಂಗಳೂರು: ಆಟವಾಡುವಾಗ ಆಯತಪ್ಪಿ ಮೂರು ವರ್ಷದ ಗಂಡು ಮಗು ರಾಜಕಾಲುವೆಗೆ (Rajkaluve) ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರ ಬಾಲಕ (Boy) ರಾಜಕಾಲುವೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಬಾಲಕನಿಗಾಗಿ ಅಗ್ನಿಶಾಮಕದಳ (Fire Brigade) ಸಿಬ್ಬಂದಿ ನಿರಂತರ ಕಾರ್ಯಾಚರಣೆ (Operation) ನಡೆಸುತ್ತಿದ್ದರೂ ಇನ್ನೂ ಪತ್ತೆಯಾಗಿಲ್ಲ.


ಮೂರು ವರ್ಷದ ಕಬೀರ್ ಸೌದ್ ನಾಪತ್ತೆ

 ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆಯ ಅಪಾರ್ಟ್​ಮೆಂಟ್​ವೊಂದರ ಬಳಿ ರಾಜಕಾಲುವೆಗೆ ಮೂರು ವರ್ಷದ ಕಬೀರ್ ಸೌದ್ ಬಿದ್ದು ನಾಪತ್ತೆಯಾಗಿದ್ದಾನೆ. ನೇಪಾಳ ಮೂಲದ ಬಿನೋದ್ ಸೌದ್ ಹಾಗೂ ಸ್ವಪ್ನ ದಂಪತಿಯ ಪುತ್ರನಾಗಿರುವ ಕಬೀರ್, ನಿನ್ನೆ ಮಕ್ಕಳೊಂದಿಗೆ ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದಿದ್ದಾನೆ.

Published by:ಪಾವನ ಎಚ್ ಎಸ್
First published: