Crime News: ಸರ್ಕಾರಿ ಕೆಲಸ ಸಿಗದ್ದಕ್ಕೆ ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ!

ಸರ್ಕಾರಿ ಕೆಲಸಕ್ಕೆ ಜನ ನಾನಾ ರೀತಿ ಕಸರತ್ತು ನಡೆಸ್ತಾರೆ. ಸರ್ಕಾರಿ ಕೆಲಸ ಪಡೆದುಕೊಂಡು ಆರಾಮಾಗಿ ಇರ್ಬೋದು ಅಂತಾ ಎಲ್ಲರೂ ಬಯಸ್ತಾರೆ. ಕೊನೆಗೆ ಕೆಲಸ ಸಿಗದಾಗ ಅನಾಹುತ ಮಾಡ್ಕೋತಾರೆ. ಹೀಗೆ ಸರ್ಕಾರಿ ಕೆಲಸ ಸಿಕ್ಕಿಲ್ಲಾಂತ 22 ವರ್ಷದ ಮಹಿಳೆ ಸಾವಿನ ದಾರಿ ಹಿಡಿದಿದ್ದಾರೆ.

ಮೃತ ಉಷಾ

ಮೃತ ಉಷಾ

  • Share this:
ಸರ್ಕಾರಿ ಕೆಲಸ ಅನ್ನೋದು ಎಲ್ಲರ ಕನಸು. ಒಂದು ಸರ್ಕಾರಿ ಕೆಲಸ (Government Job) ಸಿಕ್ರೆ ಸಾಕು ಅಂತಾ ಎಲ್ಲರೂ ಕಾಯ್ತಾ ಇರ್ತಾರೆ. ಪರೀಕ್ಷೆ (Exam) ಬರೆಯೋಕೆ ಕೋಚಿಂಗ್ (Coaching) ಪಡೆದುಕೊಂಡು ಎಕ್ಸಾಂ ಮೇಲೆ ಎಕ್ಸಾಂ ಅಟೆಂಡ್ ಮಾಡ್ತಾರೆ. ಈಗೀಗ ಅಂತು ಸರ್ಕಾರಿ ಕೆಲಸದಲ್ಲಿ ಅವ್ಯವಹಾರ (Dealing) ನಡೆದೋಗ್ತಾ ಇದೆ. ಲಕ್ಷ, ಕೋಟಿ ಡೀಲಿಂಗ್ ಆಗ್ತಿದೆ. ಇದರಿಂದ ಆಕಾಂಕ್ಷಿಗಳು ಕೂಡ ಬೇಸತ್ತು ಹೋಗಿದ್ದಾರೆ. ಚಿತ್ರದುರ್ಗದಲ್ಲಿ ಮಹಿಳೆಯೊಬ್ಬರು ಸರ್ಕಾರಿ ಕೆಲಸ ಸಿಗದ್ದಕ್ಕೆ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ನನ್ನ ಸಾವಿಗೆ ಕುಟುಂಬ ಕಾರಣ ಅಲ್ಲ, ವ್ಯವಸ್ಥೆ ಕಾರಣ ಎಂದು ಡೆತ್ ನೋಟ್​​ನಲ್ಲಿ (Death note) ಬರೆದು ನೇಣುಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ.

ಸರ್ಕಾರಿ ಕೆಲಸಕ್ಕೆ ಜನ ನಾನಾ ರೀತಿ ಕಸರತ್ತು ನಡೆಸ್ತಾರೆ. ಸರ್ಕಾರಿ ಕೆಲಸ ಪಡೆದುಕೊಂಡು ಆರಾಮಾಗಿ ಇರ್ಬೋದು ಅಂತಾ ಎಲ್ಲರೂ ಬಯಸ್ತಾರೆ. ಕೊನೆಗೆ ಕೆಲಸ ಸಿಗದಾಗ ಅನಾಹುತ ಮಾಡ್ಕೋತಾರೆ. ಹೀಗೆ ಸರ್ಕಾರಿ ಕೆಲಸ ಸಿಕ್ಕಿಲ್ಲಾಂತ 22 ವರ್ಷದ ಮಹಿಳೆ ಸಾವಿನ ದಾರಿ ಹಿಡಿದಿದ್ದಾರೆ.

ಸರ್ಕಾರಿ ಕೆಲಸ ಸಿಕ್ಕಿಲ್ಲ ಎಂದು ಆತ್ಮಹತ್ಯೆ

ಸರ್ಕಾರಿ ಕೆಲಸ ಸಿಕ್ಕಿಲ್ಲ ಎಂದು ಉಷಾ (22) ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

A young woman committed suicide by hanging herself for not getting a government job
ಮೃತ ಉಷಾ


ನನ್ನ ಸಾವಿಗೆ ಕುಟುಂಬ ಕಾರಣ ಅಲ್ಲ. ಈ ವ್ಯವಸ್ಥೆ ಕಾರಣ. ಬ್ಲಡಿ ಸಿಸ್ಟಮ್ ಅಂತಾ ಉಷಾ ಬರೆದಿಟ್ಟಿದ್ದಾರೆ. ಡೆತ್ ನೋಟ್​ನಲ್ಲಿ ಬರೆದು ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪರಶುರಾಮಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಇದನ್ನೂ ಓದಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು‌ ಹಂತಕರನ್ನು ಬಂಧಿಸಿದ ತಂಡಕ್ಕೆ ಬಹುಮಾನ

ಟ್ರಿಪ್​ಗೆ ಕರೆದೊಯ್ದು ಮಹಿಳೆಯ ಆತ್ಮಹತ್ಯೆ

ಮಂಡ್ಯದಲ್ಲಿ ಮಹಿಳೆಯೊಬ್ಬರನ್ನು ಪ್ರವಾಸಕ್ಕೆ ಕರೆದೊಯ್ದು ಕೊಲೆಗೈದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಒಂದು ವರ್ಷದ ಹಿಂದಿನ ಅಪರಿಚಿತ ಮಹಿಳೆಯ ಕೊಲೆ ಪ್ರಕರಣದ ಆರೋಪಿಗಳನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಲಕ್ಷ್ಮಿ ಮತ್ತು ನಾರಾಯಣ ಬಂಧಿತ ಆರೋಪಿಗಳು.

ಬೆಂಗಳೂರಿನ ಚಾಮರಾಜಪೇಟೆಯ ಶೋಭಾ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಕೊಲೆಯಾದ ಮಹಿಳೆ ಶೋಭಾ ಮತ್ತು ಲಕ್ಷ್ಮೀ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ರು. ಶೋಭಾ ಶ್ರೀಮಂತಳೆಂದು ತಿಳಿದು ಆರೋಪಿ ಲಕ್ಷ್ಮಿ ಸಂಚು ರೂಪಿಸಿ ಪ್ರಿಯಕರ ನಾರಾಯಣ ಜೊತೆ ಸೇರಿ ಟ್ರಿಪ್​​ಗೆ ಕರದೊಯ್ದು ಹತ್ಯೆಗೈದಿದ್ದರು.

ಬೆಂಗಳೂರಿನಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಹತ್ಯೆ!

ಬೆಂಗಳೂರಿನಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವೃದ್ಧನನ್ನ ಕೊಲೆಗೈದ ಆರೋಪಿಯನ್ನು ಬಂಧಿಸಲಾಗಿದೆ. ರಾಜಗೋಪಾಲನಗರ ಪೊಲೀಸರು ಆರೋಪಿಗಳಾದ ಅನೀಜ್, ಸೈಯದ್ ಅಕ್ಮಲ್​ ಎಂಬಾತನನ್ನು ಬಂಧಿಸಿದ್ದಾರೆ. ಆಗಸ್ಟ್ 17ರಂದು ಹೆಗ್ಗನಹಳ್ಳಿ ಅಜಿಮುಲ್ಲಾ ಖಾನ್​ನ ಕೊಲೆ ನಡೆದಿತ್ತು.

A young woman committed suicide by hanging herself for not getting a government job
ಕೊಲೆಗೈದ ಆರೋಪಿ ಅನೀಜ್


ಗುಜಿರಿ ಕೆಲಸ ಮಾಡಿಕೊಂಡಿದ್ದ ಅಜಿಮುಲ್ಲಾ ಖಾನ್ ಮತ್ತು ಅನೀಜ್ ತಂದೆ ಅಕ್ಮಲ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸಿಟ್ಟಿಗೆದ್ದ ಅನೀಜ್, ಅಜಿಮುಲ್ಲಾಖಾನ್ ಗೆ ಚಾಕುವಿನಿಂದ ಇರಿದಿದ್ದ. ಸದ್ಯ ರಾಜಗೋಪಾಲನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಗೆಳೆಯನ ತಮಾಷೆಗೆ ಬಲಿಯಾದ ಯುವಕ, ಬರ್ತ್​ಡೇ ಪಾರ್ಟಿಯಲ್ಲಿ ದುರಂತ!

ಮಂಗಳೂರಿನಲ್ಲಿ ಆರೋಪಿ ಕಾಲಿಗೆ ಗುಂಡೇಟು

ಮಂಗಳೂರಿನಲ್ಲಿ ಕೊಲೆಯತ್ನದ ಆರೋಪಿ ಕಾಲಿಗೆ ಗುಂಡು ಹೊಡೆಯಲಾಗಿದೆ. ಸ್ಥಳ ಮಹಜರುಗಾಗಿ ಆರೋಪಿ ಮಿಸ್ಟ @ ಎಮ್.ಡಿ.ಮುಸ್ತಾಕ್​ನನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಅಟ್ಯಾಕ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಪೊಲೀಸರು ಶೂಟ್​ ಮಾಡಿ ಬಂಧಿಸಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಳ ಗ್ರಾಮದಲ್ಲಿ ಘಟನೆ ನಡೆದಿದೆ.
Published by:Thara Kemmara
First published: