• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bike Journey: 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ಕ್ಕೆ ಯುವಕರ ಸಾಹಸ; 25 ದಿನ, 7 ಸಾವಿರ ಕಿ.ಮೀ. ಬೈಕ್ ಜರ್ನಿ!

Bike Journey: 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ಕ್ಕೆ ಯುವಕರ ಸಾಹಸ; 25 ದಿನ, 7 ಸಾವಿರ ಕಿ.ಮೀ. ಬೈಕ್ ಜರ್ನಿ!

ಹಾಸನದ ಸಾಹಸಿ ಯುವಕರು

ಹಾಸನದ ಸಾಹಸಿ ಯುವಕರು

ಹಾಸನದ ಯುವ ತಂಡವೊಂದು ಬೈಕ್‌ ಸಾಹಸಕ್ಕೆ ಹೊರಟಿದೆ. ಇಡೀ ಪ್ರಪಂಚದಲ್ಲಿ ಎತ್ತರವಾದ ಹಾಗೂ ಸಮುದ್ರ ಮಟ್ಟಕ್ಕಿಂತ 19 ಸಾವಿರದ 300 ಅಡಿ ಎತ್ತರದಲ್ಲಿರುವ ಜಗತ್ತಿನ ಅತಿ ಎತ್ತರದ ಉಮ್ಮನಿಂಗಲ ಪಾಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಗೂ ಕನ್ನಡ ಬಾವುಟ ಹಾರಿಸುವುದು ಈ ಯುವ ತಂಡದ ಗುರಿ.

  • Share this:

ಹಾಸನ: ಸ್ವಾತಂತ್ರ್ಯದ ಅಮೃತ ಮಹೋತ್ಸವದ (Azadi ka Amrut Mahotsa) ಹಿನ್ನೆಲೆಯಲ್ಲಿ ಹಾಸನದ (Hassan) ‘ದಿ ಆಫ್ ಬೀಟ್ ಎಕ್ಸ್‌ಪ್ಲೋರರ್ಸ್ ಟೀಂ’ನ 15 ಜನ ಯುವಕರ ತಂಡ (Youth Team) ವಿಭಿನ್ನ ಸಾಹಸಕ್ಕೆ (Adventure) ಮುಂದಾಗಿದೆ. ಇಂದು ಹಾಸನದಿಂದ ಬೈಕ್‌ನಲ್ಲಿ (Bike) ಹೊರಟಿದ್ದು 25 ದಿನಗಳ ಕಾಲ ಏಳು ಸಾವಿರ ಕಿಲೋ ಮೀಟರ್ (7,000 KM) ಯಾತ್ರೆ (Journey) ನಡೆಸಲಿದ್ದಾರೆ. ಡಾಕ್ಟರ್, ಇಂಜಿನಿಯರ್ ಹಾಗೂ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಇವರು, ತಮ್ಮ ಕೆಲಸದ ಒತ್ತಡದ ನಡುವೆಯು ಬಿಡುವು ಮಾಡಿಕೊಂಡು ಈ ಸಾಹಸಮಯ ಬೈಕ್ ರೈಡ್ ಗೆ (Bike Ride) ಹೊರಟಿದ್ದಾರೆ. ಇಂದು ತಮ್ಮ ಬೈಕ್ ರೈಡ್ ಆರಂಭಿಸಿದ್ದು, ದಿನಕ್ಕೆ 700 ಕಿಲೋಮೀಟರ್ ಸಂಚರಿಸಲಿದ್ದಾರೆ. ಇನ್ನೊಂದು ತಿಂಗಳ ನಂತರ ವಾಪಸ್ಸಾಗಲಿದ್ದಾರೆ.


ದೇಶದ ಗಡಿಯುದ್ದಕ್ಕೂ ಪ್ರಯಾಣ


ಭಾರತ ದೇಶ ಎಲ್ಲಾ ಗಡಿಗಳನ್ನು ಸುತ್ತಿ,  ಅಮೃತಸರಕ್ಕೆ ತೆರಳಿ ದೇಶದ ಭಾವುಟ ಹಾರಿಸಲಾಗುವುದು. ಅಲ್ಲಿಂದ ಜಮ್ಮು ಕಾಶ್ಮೀರ, ಲಡಾಕ್, ವಾಗ ಬಾರ್ಡರ್, ಸೋನಾಮಾರ್ಗ್ಬ ಸೇತೊ ಪ್ರಮುಖ ಗಡಿಗಳನ್ನು ಬೈಕ್‌ನಲ್ಲಿ ಪ್ರಯಾಣಿಸಲಿದ್ದಾರೆ. ದೇಶದ ಬಾರ್ಡರ್ ಎಲ್ಲೆಲ್ಲಿ ಬರುತ್ತದೆ ಅಲ್ಲಿ ನಮ್ಮ ಪ್ರಯಾಣ ಸಾಗಲಿದೆ ಎಂದು ತಂಡ ವಾಸು ತಿಳಿಸಿದ್ದಾರೆ.


ಬಾನೆತ್ತರದಲ್ಲಿ ಹಾರಾಡಲಿದೆ ದೇಶ ಹಾಗೂ ರಾಜ್ಯದ ಬಾವುಟ


ಇಡೀ ಪ್ರಪಂಚದಲ್ಲಿ ಎತ್ತರವಾದ ಹಾಗೂ ಸಮುದ್ರ ಮಟ್ಟಕ್ಕಿಂತ 19 ಸಾವಿರದ 300 ಅಡಿ ಎತ್ತರದಲ್ಲಿರುವ ಜಗತ್ತಿನ ಅತಿ ಎತ್ತರದ ಉಮ್ಮನಿಂಗಲ ಪಾಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಗೂ ಕನ್ನಡ ಬಾವುಟ ಹಾರಿಸುವುದು ಈ ಯುವ ತಂಡದ ಗುರಿ.


ಇದನ್ನೂ ಓದಿ: Savandurga: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಸಾವನದುರ್ಗ, ಆದರೆ ಇಲ್ಲಿ ಭದ್ರತೆ ಬೇಕಿದೆ ಈಗ!


ಧ್ವಜ, ಬೈಕ್ ರೈಡಿಂಗ್ ಸುರಕ್ಷತೆ ಬಗ್ಗೆ ಜಾಗೃತಿ


ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಚಾರವಾಗಿ ಬಾವುಟದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬೈಕ್ ರೇಡಿಂಗ್ ಸುರಕ್ಷತೆ ಬಗ್ಗೆ ತಿಳಿಯುವುದು, ಭೂಪಟದಲ್ಲಿ ಯಾವ ಯಾವ ಜಾಗಗಳಿವೆ, ಅಲ್ಲಿನ ಜೀವನ ಶೈಲಿ, ಬಹು ಮುಖ್ಯವಾಗಿ ನಮ್ಮ ದೇಶದ ಬಾರ್ಡರ್‌ನಲ್ಲಿ ನಮ್ಮ ಯೋಧರು ಇರುವ ಸ್ಥಿತಿ ಹಾಗೂ ಜೀವನ ನಡೆಸುತ್ತಿರುವ ವಿಚಾರವನ್ನು ಅರಿತು ನಮ್ಮ ಜನರಿಗೆ ತಿಳಿಸುವುದರ ಜೊತೆಗೆ ಸಾರ್ವಜನಿಕರಿಗಾಗಿ ನಿರ್ಮಿಸಿರುವ ರಸ್ತೆಯನ್ನು ನೋಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.


25 ದಿನಗಳ ಸಾಹಸಮಯ ಪ್ರಯಾಣ


ಸ್ನೇಹಿತರೆಲ್ಲಾ ಸೇರಿ ಟೀಮ್ ಮೂಲಕ 25 ದಿನಗಳ ಸಾಹಸಮಯ ಪ್ರವಾಸ ಕೈಗೊಂಡಿದ್ದು, ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ ಎಂಬುದು ನಮ್ಮ ಘೋಷಣೆಯಾಗಿದೆ. ದುಬಾರಿ ಬೆಲೆಯ ಬಿಎಂಡಬ್ಲ್ಯೂ, ಕವಾಸಕಿ ನಿಂಜಾ, ಹಿಮಾಲಯನ್, ಟ್ರಿಂಪ್ ಟ್ರಿಪಲ್ ಬೈಕ್‌ಗಳಲ್ಲಿ ಹೊರಟಿದ್ದು, ಇವುಗಳ ಬೆಲೆ 3 ಲಕ್ಷದಿಂದ 16 ಲಕ್ಷದವರೆಗೂ ಇದೆ ಎಂದು ತಿಳಿಸಿದರು.


ಸಾಹಸಮಯ ಪ್ರವಾಸಕ್ಕಾಗಿ ಭರ್ಜರಿ ತಯಾರಿ


ಕೊರೊನಾ ಮಹಾಮರಿಯಿಂದ ಲಾಕ್ ಡೌನ್  ಆಯಿತು. ನಂತರ ಇತರೆ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದಲೂ ಪ್ರಯತ್ನ ಮಾಡಿದರೂ ಹೋಗುವುದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಈಗ ದೇವರ ಕೃಪೆಯಿಂದ ಲಡಾಕ್ ಪ್ರದೇಶಕ್ಕೆ ಹೋಗಲು 15 ಜನ ಸ್ನೇಹಿತರು ಮುಂದಾಗಿದ್ದೇವೆ. ಲಡಾಕ್ ಎಂದರೇ ಇಲ್ಲಿನ ಮತ್ತು ಅಲ್ಲಿನ ವಾತವರಣಕ್ಕೂ ಬಹಳ ವ್ಯತ್ಯಾಸವಿದೆ. ಪೂರ್ಣ ಪ್ರಮಾಣದ ವಾತಾವರಣ ಬದಲಾಗುತ್ತದೆ. ಬಿಸಿಯ ತಾಪ ತುಂಬ ಹೆಚ್ಚಾಗುತ್ತದೆ. ಈ ಪ್ರವಾಸ ಮಾಡಲೆಂದೆ ಕಳೆದ ಮೂರು ತಿಂಗಳಿನಿಂದ ವಾಕ್, ಯೋಗಭ್ಯಾಸ ಮಾಡಿಕೊಂಡಿದ್ದು ಯಾವ ಆಹಾರ ಸೇವಿಸಬೇಕೆಂದು ತಯಾರಾಗಿದ್ದೇವೆ ಅಂತ ಹೇಳಿದ್ದಾರೆ.


ಇದನ್ನೂ ಓದಿ: Karinjeshwara Temple: ಮತ್ತೆ ಕುಸಿಯುವ ಭೀತಿಯಲ್ಲಿ 1,000 ವರ್ಷ ಹಳೆಯ ಕಾರಿಂಜೇಶ್ವರ ಕ್ಷೇತ್ರ


 ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಂಡಿರುವ ತಂಡ


ಇನ್ನು ಸಂಚರಿಸುವ ವೇಳೆ ಏನಾದರೂ ಅಪಾಯ ಬಂದಾಗ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಸುರಕ್ಷತೆಯನ್ನು ಅಳವಡಿಸಿಕೊಂಡಿದ್ದೇವೆ. ಸೇಫ್ಟಿ ಜಾಕೆಟ್, ಹೆಲ್ಮೆಟ್‌ನಲ್ಲಿ ಅದರಲ್ಲಿ ಸಿಸಿ ಕ್ಯಾಮೆರ, ಬ್ಲೂ ಟೂತ್ ಇದ್ದು, ಅಪಾಯ ಕಂಡು ಬಂದಾಗ ಒಬ್ಬರಿಂದ ಒಬ್ಬರಿಗೆ ಕೂಡಲೇ ತಿಳಿಯುವ ಸಾಧ್ಯವಾಗುತ್ತದೆ. ಇದೊಂದು ಸವಾಲಿನ ಪ್ರಯಾಣವಾಗಿದ್ದು, ಆದರು ಕೂಡ ಸಂತೋಷದಿಂದ ಹೋಗಿ ವಾಪಸ್ ಬರುವುದಾಗಿ ವೈದ್ಯ ಮೋಹನ್ ವಿಶ್ವಾಸ ವ್ಯಕ್ತಪಡಿಸಿದರು.

Published by:Annappa Achari
First published: