• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Viral Letter: ಹ್ಯಾಪಿ ಬರ್ತ್‌ ಡೇ ಗಣಪ, ಪೊಲೀಸ್ ಕೆಲಸ ಕೊಡಿಸಪ್ಪ! ಹಬ್ಬದಂದು ಗಣೇಶನಿಗೆ ಪತ್ರ ಬರೆದ ಯುವಕ

Viral Letter: ಹ್ಯಾಪಿ ಬರ್ತ್‌ ಡೇ ಗಣಪ, ಪೊಲೀಸ್ ಕೆಲಸ ಕೊಡಿಸಪ್ಪ! ಹಬ್ಬದಂದು ಗಣೇಶನಿಗೆ ಪತ್ರ ಬರೆದ ಯುವಕ

ಗಣೇಶ ಚತುರ್ಥಿಯ ಸಂಗ್ರಹ ಚಿತ್ರ

ಗಣೇಶ ಚತುರ್ಥಿಯ ಸಂಗ್ರಹ ಚಿತ್ರ

ಆಗಸ್ಟ್ 31ರಂದು ಎಲ್ಲೆಡೆ ಗಣೇಶ ಚೌತಿ ಹಬ್ಬವನ್ನು ಆಚರಿಸಲಾಗಿತ್ತು. ಮನೆ, ದೇಗುಲ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಯನ್ನಿಟ್ಟು ಶ್ರದ್ಧಾ ಭಕ್ತಿಯಿಂದ, ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಇದೇ ದಿನ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಯುವಕನೊಬ್ಬ ಗಣಪತಿ ದೇವರಿಗೆ ಪತ್ರ ಬರೆದಿದ್ದಾನೆ.

ಮುಂದೆ ಓದಿ ...
  • Share this:

ಭಟ್ಕಳ, ಉತ್ತರ ಕನ್ನಡ: ಗೌರಿ ಗಣೇಶ ಹಬ್ಬದ (Gowri Ganesh Festival) ಸಂಭ್ರಮ ಇನ್ನೂ ಮುಂದುವರೆದಿದೆ. ಕಳೆದ ಆಗಸ್ಟ್ 30ರಂದು ಗೌರಿ ಆಗಮನವಾಗಿದ್ದರೆ, ಆಗಸ್ಟ್ 31ರಂದು ಗಣೇಶ ಮನೆ ಮನೆಗೆ ಬಂದಿದ್ದ. ರಾಜ್ಯ ಸೇರಿದಂತೆ ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು (Ganesh Chaturthi Festival) ಸಂಭ್ರಮ ಸಡಗರದಿಂದ ಆಚರಿಸಲಾಗಿತ್ತು. ಬಹುತೇಕ ಕಡೆಗಳಲ್ಲಿ ಗಣಪನನ್ನು (Ganapa) ಮರಳಿ ಕಳಿಸಿಕೊಟ್ಟಿದ್ದರೆ, ಇನ್ನೂ ಅನೇಕ ಕಡೆ ಗಣೇಶನ ಪೂಜೆ (Pooje) ಮುಂದುವರೆದಿದೆ. ಈ ನಡುವೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ (Bhatkal) ಯುವಕನೊಬ್ಬ ಗಣಪತಿಗೆ ಪತ್ರ (Letter) ಬರೆದಿದ್ದು, ಆ ಪತ್ರವೀಗ ವೈರಲ್ (Viral) ಆಗುತ್ತಿದೆ.


ಗಣೇಶನಿಗೆ ಪತ್ರ ಬರೆದ ಯುವಕ


ಕಳೆದ ಆಗಸ್ಟ್ 31ರಂದು ಎಲ್ಲೆಡೆ ಗಣೇಶ ಚೌತಿ ಹಬ್ಬವನ್ನು ಆಚರಿಸಲಾಗಿತ್ತು. ಮನೆ, ದೇಗುಲ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಯನ್ನಿಟ್ಟು ಶ್ರದ್ಧಾ ಭಕ್ತಿಯಿಂದ, ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಇದೇ ದಿನ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಯುವಕನೊಬ್ಬ ಗಣಪತಿ ದೇವರಿಗೆ ಪತ್ರ ಬರೆದಿದ್ದಾನೆ. ಆ ಪತ್ರವೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.


ಗಣಪನಿಗೆ ಯುವಕ ಬರೆದ ಪತ್ರ


“ಹಾಯ್ ಗಣಪ, ಹ್ಯಾಪಿ ಬರ್ತ್ ಡೇ”


ಹಾಯ್ ಗಣಪ ಹ್ಯಾಪಿ ಬರ್ತ್ ಡೇ ಅಂತ ಪತ್ರದಲ್ಲಿ ಯುವಕ ಬರೆದಿದ್ದಾನೆ. ಗಣಪ ನೀನು ನನ್ನ ಆಸೆ ಈಡೇರಿಸ್ತಿಯಾ ಅಲ್ವಾ? ಏನು ಇಲ್ಲ, ನನ್ನದು ಚಿಕ್ಕ ಆಸೆ. ನಾನು ಸ್ಟಡಿ ಮಾಡುತ್ತಾ ಇದ್ದೀನಿ. ಆರನೇ ತರಗತಿಯಿಂದ 10 ನೇ ತರಗತಿಯವರೆಗಿನ ಪುಸ್ತಕವನ್ನು ರೆಫರ್ ಮಾಡಿದ್ದೇನೆ. ಈಗಲೂ ಮಾಡ್ತಾ ಇದ್ದೇನೆ. ನನಗೆ ಚಿಕ್ಕ ವಯಸ್ಸಿನಿಂದ ಪೊಲೀಸ್ ಆಗಬೇಕು ಎನ್ನುವ ಆಸೆ ಇದೆ ಅದನ್ನು ಈಡೇರಿಸು ಅಂತ ಬರೆದಿದ್ದಾನೆ.


ಇದನ್ನೂ ಓದಿ: Lalbagh Ganesh: ಲಾಲ್‌ಬಾಗ್‌ ಗಣೇಶ ಅತೀ ಶ್ರೀಮಂತ! 5 ದಿನಗಳಲ್ಲಿ 2 ಕೋಟಿ ಹಣ, ಚಿನ್ನಾಭರಣ ಸಂಗ್ರಹ


“ಪೊಲೀಸ್ ಕೆಲಸ ಕೊಡಿಸು, ಎಲ್ಲರಿಗೂ ಒಳ್ಳೆಯದನ್ನೇ ಮಾಡು”


ಇನ್ನು ಮುಂದುವರೆದು ಪತ್ರದಲ್ಲಿ ಬರೆದಿರುವ ಯುವಕ, ನಾನು ಇಷ್ಟಪಟ್ಟು, ಕಷ್ಟಪಟ್ಟು ಓದುತ್ತೇನೆ. ಆದರೆ ನೀನೆ ಪರೀಕ್ಷೆಯಲ್ಲಿ ಪಾಸು ಮಾಡಬೇಕು. ಈ ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡುವ ಹಾಗೆ ಬುದ್ದಿ ಕೊಡು. ಆದಷ್ಟು ಬೇಗ ಪರೀಕ್ಷೆಯಲ್ಲಿ ಪಾಸ್ ಆಗೋತರ ಮಾಡ್ಬೇಕು. ಮಾಡ್ತಿಯಾ ಅಲ್ವಾ.? ಓಕೆ ಬಾಯ್ ಗಣಪ ಅಂತ ಬರೆದು, ಪತ್ರದಲ್ಲಿ ತನ್ನ ಮನವಿ ಸಲ್ಲಿಸಿದ್ದಾನೆ.


ಪೊಲೀಸ್ ಠಾಣೆ ಆವರಣದಲ್ಲಿದ್ದ ಗಣಪನಿಗೆ ಪತ್ರ


ಭಟ್ಕಳ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಪ್ರತಿಷ್ಠಾಪಿಸಿದ ಗಣಪತಿಯ ಕಾಣಿಕೆ ಹುಂಡಿಗೆ ಈ ಯುವ ಭಕ್ತ ಪತ್ರ ಬರೆದು, ಹಾಕಿದ್ದಾನೆ. ನನಗೆ ಪೊಲೀಸ್ ಕೆಲಸ ಕೊಡಿಸು ಅಂತ ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದ ಗಣಪನನ್ನು ಪ್ರಾರ್ಥಿಸಿದ್ದಾನೆ. ಭಟ್ಕಳ ನಗರ ಠಾಣೆ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಐದು ದಿನಗಳ ಕಾಲ ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡುವ ಮೂಲಕ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಇದೇ ವೇಳೆ ದೇವರ ದರ್ಶನ ಪಡೆಯಲು ಬಂದ ಯುವಕ ಗಣೇಶನಿಗೆ ತನ್ನ ಕನಸನ್ನು ಚೀಟಿಯಲ್ಲಿ ಬರೆದು, ಹುಂಡಿಗೆ ಹಾಕಿದ್ದಾನೆ.


ಇದನ್ನೂ ಓದಿ: Aishwarya Rai: ಶ್ರೀಮಂತ ಗಣಪನ ದರ್ಶನ ಪಡೆದ ಐಶ್ವರ್ಯಾ ರೈ! ಭಕ್ತಿಯಲ್ಲಿ ಮುಳುಗೆದ್ದ ಮಾಜಿ ವಿಶ್ವಸುಂದರಿ


ಗಣೇಶನ ಹಬ್ಬ ಮುಗಿದ ಬಳಿಕ ಪೊಲೀಸರು ಗಣಪನ ಹುಂಡಿಯಲ್ಲಿದ್ದ ಕಾಣಿಕೆಯನ್ನು ಲೆಕ್ಕಮಾಡುವ ವೇಳೆಯಲ್ಲಿ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಸಿಕ್ಕಿದೆ. ಇದೀಗ ಈ ಲೆಟರ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

top videos
    First published: