Online Fraud: ನಿಮಗೆ ಕರೆ ಮಾಡಿದ ಚಂದಾದಾರರು ನಿಮ್ಮ ಖಾತೆಯಿಂದ 43 ಸಾವಿರ ಕದ್ದಿದ್ದಾರೆ!
ಮೊಬೈಲ್ನಲ್ಲಿ Any Desk ಆಪ್ ಇನ್ಸ್ಟಾಲ್ ಮಾಡಲು ಯುವಕನಿಗೆ ವಂಚಕರು ತಿಳಿಸಿದ್ದಾನೆ. ಆ ಆ್ಯಪ್ ಡೌನ್ಲೋಡ್ ಆಗದೇ ಇದ್ದುದ್ದಕ್ಕೆ ಲಿಂಕ್ ಕಳಿಸಿದ್ದಾರೆ. ಆ ಲಿಂಕ್ ಕ್ಲಿಕ್ ಮಾಡಿದಾಗ ಈತನ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ!
ಕೊಡಗು: ನೀವು ಯಾವುದಾದರೂ ಕಸ್ಟಮರ್ ಕೇರ್ (Customer Care) ನಂಬರ್ (Number) ಬೇಕು ಅಂದ್ರೆ ಥಟ್ ಅಂತ ಗೂಗಲ್ (Google) ಅಥವಾ ಇನ್ನಿತರ ವೆಬ್ಸೈಟ್ನಲ್ಲಿ (Website) ಹುಡುಕಾಡ್ತೀರಾ? ಅಲ್ಲಿ ಸಿಕ್ಕ ಸಿಕ್ಕ ನಂಬರ್ಗೆಲ್ಲ ಕಾಲ್ (Call) ಮಾಡ್ತೀರಾ? ಹಾಗಿದ್ರೆ ನೀವು ಈ ಸುದ್ದಿಯನ್ನು ಓದಲೇ ಬೇಕು. ಗೂಗಲ್ ಎಷ್ಟೇ ಸುರಕ್ಷತೆ (Safety) ಕೈಗೊಂಡರೂ ಆನ್ಲೈನ್ (Online) ವಂಚಕರು ಯಾವುದಾದರೊಂದು ಮಾರ್ಗದಲ್ಲಿ ಗೂಗಲ್ ಒಳಹೊಕ್ಕು, ಜನರನ್ನು ಮೋಸ ಮಾಡೋದಕ್ಕೆ ಹೊಂಚು ಹಾಕುತ್ತಾ ಇರುತ್ತಾರೆ. ಇದೀಗ ಇಲ್ಲೂ ಅದೇ ಆಗಿದ್ದು. ಗೂಗಲ್ನಲ್ಲಿ ಸಿಕ್ಕಿದ ನಂಬರ್ಗೆ ಕಾಲ್ ಮಾಡಿದ ಯುವಕ, ಇದೀಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಆಗಿದೆ.
ಮಡಿಕೇರಿ ಯುವಕನಿಗೆ ವಂಚನೆ
ಕೊಡಗು ಜಿಲ್ಲೆಯ ಮಡಿಕೇರಿಯ ಯುವಕ ಇದೀಗ ಆನ್ಲೈನ್ ವಂಚನೆಗೆ ಒಳಗಾಗಿದ್ದಾನೆ. ಸುಂಟಿಕೊಪ್ಪ 2ನೇ ವಿಭಾಗದ ಸಮೀರ್ ( ಕಿಣ್ಣುಸ್) ಎಂಬವರು ಹಣ ಕಳೆದುಕೊಂಡವರಾಗಿದ್ದಾರೆ. ಗೂಗಲ್ನಲ್ಲಿ ಸಿಕ್ಕಿದ ನಂಬರ್ಗೆ ಕಾಲ್ ಮಾಡಿದ ಯುವಕ, ಇದೀಗ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 43 ಸಾವಿರ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ.
ಆನ್ಲೈನ್ ವಂಚನೆ ನಡೆದಿದ್ದು ಹೇಗೆ?
ಯುವಕ ಸಮೀರ್ ಝೆಡ್ ಮನಿ ಎಂಬ ಆಪ್’ನಿಂದ 38 ಸಾವಿರ ಮೌಲ್ಯದ ಮೊಬೈಲ್’ನ್ನು ಇಎಂಐ ಮೂಲಕ ಸಾಲವಾಗಿ ಖರೀದಿಸಿದ್ರು. ಇದೇ ಏಪ್ರಿಲ್ 4 ರಂದು ಈ ತಿಂಗಳ ಕೊನೆಯ ಕಂತು ಇವರ ಬ್ಯಾಂಕ್ ಖಾತೆಯಿಂದ ಪಾವತಿಯಾಗಿದೆ. ಆದರೆ ಏ.7 ರಂದು ಪುನಃ ಖಾತೆಯಿಂದ ಹಣ ಜಮೆಯಾಗಿದೆ. ಇದರಿಂದ ವಿಚಲಿತರಾದ ಸಮೀರ್ ವಿಚಾರಿಸಲೆಂದು ಝೆಡ್ ಮನಿ ಕಂಪನಿಯ ಕಸ್ಟಮರ್ ಕೇರ್’ಗೆ ಹಲವು ಬಾರಿ ಕರೆ ಮಾಡಿದ್ದಾರೆ.
ಆದರೆ ಆ ನಂಬರ್ ತುಂಬಾ ಹೊತ್ತು ಬ್ಯುಸಿ ಅಂತಾನೆ ಬರುತ್ತಿತ್ತು. ಇದರಿಂದ ಆತಂಕಗೊಂಡ ಸಮೀರ್, ಝೆಡ್ ಲೋನ್ ಕಂಪನಿ ಬೇರೆ ಕಸ್ಟಮರ್ ಕೇರ್ ನಂಬರ್ ಅನ್ನು ಗೂಗಲ್ನಲ್ಲಿ ಹುಡುಕಿದ್ದಾರೆ. ಆಗ ಸೈಟ್ನಲ್ಲಿದ್ದ ಫೇಕ್ ನಂಬರ್ ಅವರಿಗೆ ಸಿಕ್ಕಿದೆ.
8178802675 ಎನ್ನುವ ನಂಬರ್ನಿಂದ ಕರೆ
ಇದಾದ ಸ್ವಲ್ಪ ಹೊತ್ತಿನ ನಂತರ 8178802675 ಎಂಬ ನಂಬರ್ನಿಂದ ಸಮೀರ್’ಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ತಾನು ಝೆಡ್ ಲೋನ್ ಕಂಪನಿಯ ಕಸ್ಟಮರ್ ಕೇರ್’ನವನೆಂದು ಹೇಳಿಕೊಂಡಿದ್ದಾನೆ. ಅವನ ಮಾತನ್ನು ನಂಬಿದ ಸಮೀರ್ ಲೋನ್ ಕಂಪನಿ ತಿಂಗಳಲ್ಲಿ ಎರಡು ಸಲ ಇಎಂಐ ಪಾವತಿಸಿಕೊಂಡಿರುವುದನ್ನು ವಿವರಿಸಿದ್ದಾರೆ. ಅತ್ತಲಿಂದ ಕರೆ ಮಾಡಿದಾತ ‘ನಿಮಗೆ ಇನ್ನೊಂದು ನಂಬರ್’ನಿಂದ ಕಾಲ್ ಬರುತ್ತದೆ. ಅವರು ನಿಮ್ಮ ಪ್ರಾಬ್ಲಮ್ ಸಾಲ್ವ್ ಮಾಡುತ್ತಾರೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ.
9330964042 ನಂಬರ್ನಿಂದ ಬಂತು ಮತ್ತೊಂದು ಕಾಲ್
ನಂತರ ಸಮೀರ್ಗೆ 9330964042 ಎಂಬ ನಂಬರ್ ನಿಂದ ಕರೆ ಬಂದಿದೆ. ಹೀಗೆ ಕರೆ ಮಾಡಿದಾತ ಮೊಬೈಲ್ನಲ್ಲಿ ‘Any Desk ಆಪ್ ಇನ್ಸ್ಟಾಲ್ ಮಾಡಲು ಸಮೀರ್ ಗೆ ತಿಳಿಸಿದ್ದಾನೆ. ಆ ಆ್ಯಪ್ ಡೌನ್ಲೋಡ್ ಆಗದ್ದಕ್ಕೆ ಲಿಂಕ್ ಕಳಿಸಿದ್ದಾನೆ. ಆ ಲಿಂಕ್ ಕ್ಲಿಕ್ ಮಾಡಿದಾಗ ಇವರ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ.
ಸಮೀರ್ ಅವರ ಖಾತೆಯಿಂದ ಮೊದಲಿಗೆ 13 ಸಾವಿರ ಮಾಯವಾಗಿದೆ. ನಂತರ ಒಮ್ಮೆಲೇ 30 ಸಾವಿರ ಕಟ್ ಆಗಿದೆ. ಖಾತೆಯಲ್ಲಿದ್ದ ಹಣವೆಲ್ಲಾ ಹ್ಯಾಕರ್’ನ ಪಾಲಾಗುತ್ತಿದ್ದಂತೆಯೇ ಅತ್ತ ಕಡೆಯಿಂದ ಬಂದಿದ್ದ ಕಾಲ್ ಕೂಡಾ ಸ್ಥಗಿತ ಆಗಿದೆ. ತಾನು ಮೋಸ ಹೋಗಿರುವುದನ್ನು ಅರಿತ ಸಮೀರ್ ರ ಬ್ಯಾಂಕ್’ಗೆ ತೆರಳಿ ವಿಷಯ ತಿಳಿಸಿದ್ದು, ಸೈಬರ್ ಕ್ರೈಂ ಪೊಲೀಸರಿಗೂ ದೂರು ನೀಡಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ