• Home
  • »
  • News
  • »
  • state
  • »
  • Shivamogga: ಮನೆಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ, ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ

Shivamogga: ಮನೆಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ, ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದರು. ಇದಕ್ಕೆ ವಿರೋಧವಾಗಿ ಮುಸ್ಲಿಂ ಸಮುದಾಯದವರು ಟಿಪ್ಪು ಭಾವಚಿತ್ರ ಹಾಕಿದ್ದರು. ಆಗ ಗಲಾಟೆ ಶುರುವಾಗಿತ್ತು. ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದೇ ಗಲಾಟೆಯ ಮುಂದುವರೆದ ಭಾಗವಾಗಿ ಮನೆ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿಯಲಾಗಿದೆ ಅಂತ ಹೇಳಲಾಗುತ್ತಿದೆ.

ಮುಂದೆ ಓದಿ ...
  • Share this:

ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ (Shivamogga) ವೀರ ಸಾವರ್ಕರ್ (Veera Savarkar) ಗಲಾಟೆಯ ಬೆನ್ನಲ್ಲೇ ಮತ್ತಷ್ಟು ಗಲಾಟೆ ನಡೆಯುತ್ತಿದೆ. ಶಿವಮೊಗ್ಗದ ಬಜಾರ್‌ನಲ್ಲಿ (Bazaar) ಓರ್ವನಿಗೆ ಚಾಕು (Knif) ಇರಿಯಲಾಗಿದೆ. ಅಮೃತ ಮಹೋತ್ಸವದ (Amrit Mahitsava) ಆಚರಣೆ ದಿನದಂದೇ ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ (Tipu Sultan) ಭಾವಚಿತ್ರ ವಿವಾದ (Photo Controversy) ತೀವ್ರ ಸ್ವರೂಪ ಪಡೆದುಕೊಂಡಿದೆ. ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದರು. ಇದಕ್ಕೆ ವಿರೋಧವಾಗಿ ಮುಸ್ಲಿಂ ಸಮುದಾಯದವರು ಟಿಪ್ಪು ಭಾವಚಿತ್ರ ಹಾಕಿದ್ದರು. ಆಗ ಗಲಾಟೆ ಶುರುವಾಗಿತ್ತು. ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದೇ ಗಲಾಟೆಯ ಮುಂದುವರೆದ ಭಾಗವಾಗಿ ಮನೆ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿಯಲಾಗಿದೆ ಅಂತ ಹೇಳಲಾಗುತ್ತಿದೆ.


ಯುವಕನಿಗೆ ಚಾಕು ಇರಿತ


ಶಿವಮೊಗ್ಗದ ಬಜಾರ್‌ನಲ್ಲಿ 20 ವರ್ಷದ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿದೆ. ಆತ ತನ್ನ ಮನೆ ಮುಂದೆ ನಿಂತಿದ್ದಾಗ ದುಷ್ಕರ್ಮಿಗಳು ಪ್ರೇಮ್‌ ಸಿಂಗ್‌ಗೆ ಚಾಕು ಇರಿದಿದ್ದಾರೆ ಎನ್ನಲಾಗಿದೆ.
ಗಾಯಾಳು ಯುವಕ ಆಸ್ಪತ್ರೆಗೆ ದಾಖಲು


ಚಾಕು ಇರಿತದಿಂದ ಯುವಕ ಪ್ರೇಮ್ ಸಿಂಗ್ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಸೇರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಇದನ್ನೂ ಓದಿ: Independence Day: ಶ್ರೀನಗರದ ಲಾಲ್​ಚೌಕ್​ನಲ್ಲಿ ಮೊಳಗಿದ ವಂದೇ ಮಾತರಂ, ಭಯೋತ್ಪಾದಕರಿಗೆ ತಕ್ಕ ಉತ್ತರ!


ಫ್ಲೆಕ್ಸ್ ವಿಚಾರಕ್ಕೆ ಗಲಾಟೆ


ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದರು. ಇದಕ್ಕೆ ವಿರೋಧವಾಗಿ ಮುಸ್ಲಿಂ ಸಮುದಾಯದವರು ಟಿಪ್ಪು ಭಾವಚಿತ್ರ ಹಾಕಿದ್ದರು.  ಅಲ್ಲದೇ ಹಿಂದೂ ಸಂಘಟನೆ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಪರಸ್ಪರ ಪರ-ವಿರೋಧದ ಘೋಷಣೆ ಕೂಗಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿದ್ದರು


ಗಲಾಟೆ ಕೇಸ್‌ನಲ್ಲಿ 10 ಜನರು ಪೊಲೀಸ್ ವಶಕ್ಕೆ


ಈಗಾಗಲೇ ಫ್ಲೆಕ್ಸ್ ಗಲಾಟೆ ವಿಚಾರಕ್ಕೆ 19 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಚಾಕು ಇರಿತಗೊಂಡ ಯುವಕನಿಗೆ ಮೆಗ್ಗಾನ್ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ತಕ್ಷಣವೇ ಚಿಕಿತ್ಸೆಗೊಳಿಸಲಾಗಿದೆ.


ಇಂದು ಬೆಳಗ್ಗೆಯಿಂದ ಏನೇನಾಯ್ತು?


ಅಮೀರ್ ಅಹಮದ್ ವೃತ್ತದಲ್ಲಿ ಇಂದು ಬೆಳಿಗ್ಗೆಯಿಂದ ಸ್ವಾತಂತ್ರ್ಯ ಸಂಭ್ರಮಾಚರಣೆ ನಡೆಸಿತ್ತು‌. ಈ ವೇಳೆ ಯುವಕರ ಗುಂಪೊಂದು ವೀರ ಸಾವರ್ಕರ್ ಅವರ ಕಟೌಟ್ ತಂದು ವೃತ್ತದಲ್ಲಿರುವ ಹೈಮಾಸ್ಟ್ ದೀಪಕ್ಕೆ ಕಟ್ಟಲು ಮುಂದಾಗಿದೆ. ಈ ವೇಳೆ ಇನ್ನೊಂದು ಗುಂಪು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಲು ಮುಂದಾಗಿದೆ. ಈ ವೇಳೆ ಎರಡೂ ಗುಂಪಿನವರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.


ಕಟೌಟ್ ತೆಗೆದು ರಾಷ್ಟ್ರಧ್ವಜ ಹಾರಾಟ


ಸ್ಥಳಕ್ಕೆ ಪೊಲೀಸರು ಬಂದಿದ್ದು, ಗುಂಪುಗಳನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಈ ವೇಳೆ ಕೆಲವರು ವೀರ ಸಾವರ್ಕರ್ ಅವರ ಕಟೌಟ್ ಕಟ್ಟಿದ್ದಾರೆ. ಅದಕ್ಕೆ ಮತ್ತೊಂದು ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ಕೆಲವರು ಕಟೌಟ್ ಹರಿದು ಹಾಕಲು ಮುಂದಾಗಿದ್ದಾರೆ. ಈ ವೇಳೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಗುಂಪುಗಳನ್ನು ಚದುರಿಸಿದ್ದಾರೆ. ಈ ವೇಳೆ ಕಟೌಟ್ ತೆಗೆಸಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ.


ಇದನ್ನೂ ಓದಿ: Shivamogga: ಮಾಲ್​ನಲ್ಲಿ ಸಾವರ್ಕರ್ ಫೋಟೋ ವಿವಾದ, ಶಿವಮೊಗ್ಗ ಕೆಲ ಹೊತ್ತು ಉದ್ವಿಗ್ನ


ಶಿವಮೊಗ್ಗ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ


ಸದ್ಯ ವೀರ ಸಾವರ್ಕರ್ ಫೋಟೋ ಅಳವಡಿಕೆ ವಿವಾದ ತಾರಕ್ಕೇರುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ 144 ಜಾರಿಗೊಳಿಸಲಾಗಿದೆ. ಎಲ್ಲೆಡೆ ತೀವ್ರ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. 2 ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Published by:Annappa Achari
First published: